Gruha Lakshmi: ಗೃಹಲಕ್ಷ್ಮಿ ಯೋಜನೆಯಲ್ಲಿ ದೊಡ್ಡ ಬದಲಾವಣೆ, ಇನ್ಮುಂದೆ ಈ ರೀತಿಯಲ್ಲಿ ಹಣ ಬಿಡುಗಡೆ.

ಗೃಹಲಕ್ಷ್ಮಿ 12 ನೇ ಕಂತಿನ ಹಣದಲ್ಲಿ ಮಹತ್ವದ ಬದಲಾವಣೆ

Gruha Lakshmi 12th instalment Update: ರಾಜ್ಯ ಸರ್ಕಾರ ಪರಿಚಯಿಸಿರುವ ಗೃಹ ಲಕ್ಷ್ಮಿ ಯೋಜನೆಗೆ ಸಂಬಂಧಿಸಿದಂತೆ ದಿನಕ್ಕೊಂದು ಅಪ್ಡೇಟ್ ಹೊರಬೀಳುತ್ತಿದೆ. 2023 ರ ಆಗಸ್ಟ್ ನಲ್ಲಿ ಅನುಷ್ಠಾನಗೊಂಡ ಗೃಹ ಲಕ್ಷ್ಮಿ ಯೋಜನೆಗೆ ಈ ಜೂನ್ ವರೆಗೆ ಒಟ್ಟು 11 ಕಂತುಗಳ ಹಣವನ್ನು ಬಿಡುಗಡೆ ಮಾಡಿದೆ. ಜೂನ್ ನಲ್ಲಿ ಗೃಹ ಲಕ್ಷ್ಮಿ ಪಲಾನುಭವಿಗಳು 11 ನೇ ಕಂತಿನ ಹಣವನ್ನು ತಮ್ಮ ಖಾತೆಗೆ ಜಮಾ ಮಾಡಿಸಿಕೊಂಡಿದ್ದಾರೆ.

ಆದಾಗ್ಯೂ, ಗೃಹ ಲಕ್ಷ್ಮಿ ಹಣ ಜಮಾ ಆಗದ ಅದೆಷ್ಟೋ ಮಹಿಳೆಯರಿದ್ದಾರೆ. ರಾಜ್ಯ ಸರ್ಕಾರ ಎಲ್ಲ ಕಂತುಗಳ ಹಣವನ್ನು ಬಿಡುಗಡೆ ಮಾಡಿದ್ದರು ಕೂಡ ಎಲ್ಲ ಕಂತುಗಳ ಹಣ ಜಮಾ ಆಗುವಲ್ಲ ತೊಂದರೆ ಉಂಟಾಗುತ್ತಿದೆ. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ 12 ನೇ ಕಂತಿನ ಹಣ ಬಿಡುಗಡೆಯಲ್ಲಿ ದೊಡ್ಡ ಬದಲಾವಣೆ ತರಲು ನಿರ್ಧರಿಸಿದೆ. 

Gruha Lakshmi 12th instalment Update
Image Credit: Karnataka Times

ಗೃಹಲಕ್ಷ್ಮಿ ಯೋಜನೆಯಲ್ಲಿ ದೊಡ್ಡ ಬದಲಾವಣೆ
ಸದ್ಯ ರಾಜ್ಯ ಸರ್ಕಾರ 11 ನೇ ಕಂತಿನ ಹಣವನ್ನು ಈಗಾಗಲೇ ಎಲ್ಲ ಅರ್ಹರ ಖಾತೆಗೆ ಜಮಾ ಮಾಡಿಸಿದೆ. ಆದಾಗ್ಯೂ, ತಾಂತ್ರಿಕ ದೋಷದ ಕಾರಣ ಅದೆಷ್ಟೋ ಫಲಾನುಭವಿಗಳು ಎಲ್ಲ ಕಂತುಗಳ ಹಣವನ್ನು ಪಡೆಯಲು ಸಾಧ್ಯವಾಗುತ್ತಿಲ್ಲ. ಜೂನ್ ನಲ್ಲಿ ರಾಜ್ಯ ಸರ್ಕಾರ ಫಲಾನುಭವಿಗಳಿಗೆ 10 ಮತ್ತು 1 ನೇ ಕಂತಿನ ಹಣವನ್ನು ಬಿಡುಗಡೆ ಮಾಡಿದೆ. ಆದರೆ ಆಧಾರ್ ಸೀಡಿಂಗ್, NPCI ಮ್ಯಾಪಿಂಗ್, ಬ್ಯಾಂಕ್ ಆಕೌಂಟ್ ಸಮಸ್ಯೆ ಇಂದಾಗಿ ಸಾಕಷ್ಟು ಫಲಾನುಭವಿಗಳು ಹಣವನ್ನು ಪಡೆಯಲು ಸಾಧ್ಯವಾಗಿಲ್ಲ ಎನ್ನುವ ಬಗ್ಗೆ ಮಾಹಿತಿ ಲಭಿಸಿದೆ.

ಸರ್ಕಾರ ಎಲ್ಲ ಫಲಾನುಭವಿಗಳ ಖಾತೆಗೆ ಹಣ ಜಮಾ ಮಾಡಲು ವಿವಿಧ ಕ್ರಮ ಕೈಗೊಳ್ಳುತ್ತಿದ್ದರು ಕೂಡ ಒಂದೊಂದೇ ಸಮಸ್ಯೆ ಎದುರಾಗುತ್ತಿದೆ ಎನ್ನಬಹುದು. ಈ ಕಾರಣಕ್ಕೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವರಾದ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಸದ್ಯ ಮುಂದೆ ಬಿಡುಗಡೆ ಮಾಡಲಿರುವ 12 ನೇ ಕಂತಿನ ಹಣದಲ್ಲಿ ಮಹತ್ವದ ಬದಲಾವಣೆ ತರಲು ನಿರ್ಧರಿಸಿದ್ದಾರೆ.

Gruha Lakshmi 12th instalment Money
Image Credit: Karnataka Times

ಇನ್ಮುಂದೆ ಈ ರೀತಿಯಲ್ಲಿ ಹಣ ಬಿಡುಗಡೆ
ಇನ್ನು ರಾಜ್ಯ ಸರ್ಕಾರ ಜುಲೈ ನಲ್ಲಿ 12 ನೇ ಕಂತಿನ ಹಣ ಬಿಡುಗಡೆ ಮಾಡುತ್ತದೆ. ಎಲ್ಲ ತಾಂತ್ರಿಕ ದೋಷಗಳನ್ನು ನಿವಾರಿಸಿದ ಮೇಲೆ ಸರ್ಕಾರ 12 ನೇ ಕಂತಿನ ಹಣವನ್ನು ಬಿಡುಗಡೆ ಮಾಡಲಿದೆ. 12 ನೇ ಕಂತಿನ ಹಣದ ಬಿಡುಗಡೆಯಲ್ಲಿ ಯಾವುದೇ ತೊಂದರೆ ಆಗಬಾರದು ಎನ್ನುವ ಉದ್ದೇಶದಿಂದ ಸರ್ಕಾರ ಈ ನಿರ್ಧಾರವನ್ನು ಕೈಗೊಂಡಿದೆ.

Join Nadunudi News WhatsApp Group

ಎಲ್ಲ ಫಲಾನುಭವಿಗಳು 12 ನೇ ಕಂತಿನ ಹಣವನ್ನು ಪಡೆಯಬೇಕು ಎನ್ನುವ ಉದ್ದೇಶದಿಂದ ಸರ್ಕಾರ ಮೊದಲ ಹಂತದಲ್ಲಿ 12 ಅಥವಾ 13 ಜಿಲ್ಲೆಗಳಲ್ಲಿ ಹಣವನ್ನು ಬಿಡುಗಡೆ ಮಾಡಲಿದೆ. ಜಿಲ್ಲೆಯ ಎಲ್ಲ ಫಲಾನುಭವಿಗಳು ಹಣವನ್ನು ಪಡೆದ ಮೇಲೆ ಎರಡನೇ ಹಂತದಲ್ಲಿ ಉಳಿದ ಜಿಲ್ಲೆಗಳಿಗೆ ಹಣವನ್ನು ಬಿಡುಗಡೆ ಮಾಡಲು ಸರ್ಕಾರ ನಿರ್ಧರಿಸಿದೆ. ಈ ಮೂಲಕ ಎಲ್ಲ ಫಲಾನುಭವಿಗಳು ಯೋಜನೆಯ ಲಾಭವನ್ನು ಪಡೆದುಕೊಳ್ಳಲು ಸರ್ಕಾರ ಹೊಸ ಪ್ಲಾನ್ ಮಾಡಿದೆ.

Gruha Lakshmi 12th Instalment Latest
Image Credit: Ainlivenews

Join Nadunudi News WhatsApp Group