Gruha Lakshmi: ಇನ್ನುಮುಂದೆ ಪ್ರತಿ ತಿಂಗಳು ಇದೆ ತಾರೀಕಿಗೆ ಖಾತೆಗೆ ಜಮಾ ಆಗಲಿದೆ ಗೃಹ ಲಕ್ಷ್ಮಿ ಹಣ.

ಇನ್ಮುಂದೆ ಈ ದಿನಾಂಕಕ್ಕೆ ಬರಲಿದೆ ಗೃಹ ಲಕ್ಷ್ಮಿ 2000

Gruha Lakshmi Amount Update: ಸದ್ಯ ರಾಜ್ಯ ಸರ್ಕಾರ 11 ನೇ ಕಂತಿನ ಹಣವನ್ನು ಬಿಡುಗಡೆ ಮಾಡಿದ್ದು, ಸಾಕಷ್ಟು ಫಲಾನುಭವಿಗಳು ಹಣವನ್ನು ಪಡೆಯುತ್ತಿಲ್ಲ. ಹೀಗಾಗಿ ಸರ್ಕಾರಕ್ಕೆ ಮಹಿಳೆಯರು ಪ್ರಶ್ನೆಯನ್ನು ಹಾಕುತ್ತಿದ್ದಾರೆ. ಎಲ್ಲ ಸಮಸ್ಯೆಗಳನ್ನು ಬಗೆಹರಿಸಿದರು ಕೂಡ ಯೋಜನೆಯ ಹಣ ಜಮಾ ಆಗುತ್ತಿಲ್ಲ ಎಂದು ದೂರುತ್ತಿದ್ದಾರೆ.

ಸದ್ಯ 11 ನೇ ಕಂತಿನ ಹಣ ಜಮಾ ಮಾಡುವ ಬಗ್ಗೆ ಬಿಗ್ ಅಪ್ಡೇಟ್ ಹೊರಬಿದ್ದಿದೆ. ಸದ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವರಾದ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಗೃಹ ಲಕ್ಷ್ಮಿ 11 ನೇ ಕಂತಿನ ಹಣ ಜಮಾ ಮಾಡುವ ಬಗ್ಗೆ ಮಹತ್ವದ ಮಾಹಿತಿ ನೀಡಿದ್ದಾರೆ.

Gruha Lakshmi Amount Update
Image Credit: Hindustantimes

ಇನ್ನುಮುಂದೆ ಪ್ರತಿ ತಿಂಗಳು ಇದೆ ತಾರೀಕಿಗೆ ಖಾತೆಗೆ ಜಮಾ ಆಗಲಿದೆ ಗೃಹ ಲಕ್ಷ್ಮಿ ಹಣ
ಗೃಹ ಲಕ್ಷ್ಮಿ ಫಲಾನುಭವಗಳಿಗೆ ಜೂನ್ ತಿಂಗಳ ಹಣವನ್ನು ಶೀಘ್ರವೇ ಜಮಾ ಮಾಡುವುದಾಗಿ ಲಕ್ಷ್ಮಿ ಹೆಬ್ಬಾಳ್ಕರ್ ಮಾಹಿತಿ ನೀಡಿದ್ದಾರೆ. ರಾಜ್ಯ ಸರ್ಕಾರದ ಖಾತರಿ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆಗೆ ಒಟ್ಟು ಶೇ.98 ರಷ್ಟು ಮಹಿಳೆಯರು ನೋಂದಣಿ ಮಾಡಿಸಿಕೊಂಡಿದ್ದು, ಇಲ್ಲಿಯವರೆಗೆ ಪ್ರತಿ ತಿಂಗಳು ಹಣ ಜಮೆಯಾಗುತ್ತಿದೆ.

ಜೂನ್ ತಿಂಗಳ ಹಣ ಒಂದು ವಾರದೊಳಗೆ ಅವರ ಖಾತೆಗೆ ಜಮಾ ಆಗಲಿದೆ. ಈ ತಿಂಗಳಲ್ಲಿ ಎರಡು ಕಂತುಗಳ ಹಣವನ್ನು ಜಮಾ ಮಾಡುವುದಾಗಿ ಲಕ್ಷ್ಮಿ ಹೆಬ್ಬಾಳ್ಕರ್ ತಿಳಿಸಿದ್ದಾರೆ. ಚುನಾವಣೆ ನೀತಿ ಸಂಹಿತೆಯಿಂದಾಗಿ ಜೂನ್‌ ತಿಂಗಳ ಗೃಹಲಕ್ಷ್ಮಿ ಹಣ ಸ್ಪಲ್ಪ ತಡವಾಗಿದೆ. ಇನ್ನೆರಡು ದಿನಗಳಲ್ಲಿ ಬಿಡುಗಡೆಯಾಗಲಿದೆ. ಜುಲೈ ತಿಂಗಳದ್ದು ಇದೇ 15ರೊಳಗೆ ಪಾವತಿಯಾಗಲಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್‌ ತಿಳಿಸಿದ್ದಾರೆ.

Gruha Lakshmi New Updates
Image Credit: Karnataka Times

ಗೃಹ ಲಕ್ಷ್ಮಿ ಎರಡು ತಿಂಗಳಿನ ಹಣ ಒಟ್ಟಿಗೆ ಜಮಾ
ಗೃಹ ಲಕ್ಷ್ಮಿ ಯೋಜನೆಯ ಜೂನ್ ಮತ್ತು ಜುಲೈ ತಿಂಗಳ ಕಂತುಗಳನ್ನು ಶೀಘ್ರದಲ್ಲೇ ಬಿಡುಗಡೆ ಮಾಡಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಭರವಸೆ ನೀಡಿದ್ದಾರೆ. ಎರಡು ತಿಂಗಳ ಹಣವನ್ನು ಒಂದೇ ಕಂತಿನಲ್ಲಿ ಪಾವತಿಸದಿದ್ದರೂ, ಒಂದು ವಾರದ ಅಂತರದಲ್ಲಿ ಎರಡು ಬಾರಿ ಹಣ ಜಮಾ ಮಾಡಲಾಗುವುದು ಎಂದು ಸಚಿವರು ತಿಳಿಸಿದ್ದಾರೆ. ಅಂದರೆ ಈ ಜುಲೈ ನಲ್ಲಿ ಗೃಹ ಲಕ್ಷ್ಮಿ ಫಲಾನುಭವಿಗಳು 4000 ರೂ ಹಣವನ್ನು ಒಟ್ಟಾಗಿ ಪಡೆಯಬಹುದಾಗಿದೆ.

Join Nadunudi News WhatsApp Group

Gruha Lakshmi Amount
Image Credit: Original Source

Join Nadunudi News WhatsApp Group