Gruha Lakshmi: ಗೃಹಲಕ್ಷ್ಮಿ 7 ನೇ ಕಂತಿನ ಹಣಕ್ಕಾಗಿ ಕಾಯುತ್ತಿರುವ ಮಹಿಳೆಯರಿಗೆ ಬಿಗ್ ಅಪ್ಡೇಟ್, ಮತ್ತೊಂದು ಘೋಷಣೆ.

ಗೃಹಲಕ್ಷ್ಮಿ 7 ನೇ ಕಂತಿನ ಹಣಕ್ಕಾಗಿ ಕಾಯುತ್ತಿರುವ ಮಹಿಳೆಯರಿಗೆ ಬಿಗ್ ಅಪ್ಡೇಟ್

Gruha Lakshmi  New Update: ರಾಜ್ಯ ಸರ್ಕಾರ ರಾಜ್ಯದ ಅರ್ಹ ಮಹಿಳೆಯರಿಗೆ ಗೃಹಲಕ್ಷ್ಮಿ ಯೋಜನೆಯಡಿ ಮಾಸಿಕ 2000 ಹಣವನ್ನು ತಿಂಗಳವಾರು ಬಿಡುಗಡೆ ಮಾಡುತ್ತಿದೆ. ರಾಜ್ಯ ಸರ್ಕಾರ ಪರಿಚಯಿಸುವ ಐದು ಉಚಿತ ಗ್ಯಾರಂಟಿ ಯೋಜನೆಗಳಲ್ಲಿ Gruha Lakshmi ಯೋಜನೆಯು ಇದೀಗ ಹೆಚ್ಚು ಚರ್ಚೆಗೆ ಗುರಿಯಾಗಿದೆ. ಇದಕ್ಕೆ ಕಾರಣ ಯೋಜನೆ ಅನುಷ್ಠಾನಗೊಂಡು ಆರು ತಿಂಗಳು ಕಳೆದರು ಯೋಜನೆಯ ಲೋಪ ದೋಷಗಳು ಇನ್ನೂ ಕೂಡ ಬಗೆಹರಿಯದೆ ಇರುವುದು.

ಇನ್ನು ಗೃಹ ಲಕ್ಷ್ಮಿ ಯೋಜನೆಯಡಿ ಇಲ್ಲಿಯವರೆಗೆ 1.10 ಕೋಟಿ ಅರ್ಹ ಮಹಿಳೆಯರು ಯೋಜನೆಗೆ ಅರ್ಜಿ ಸಲ್ಲಿಸಿದ್ದು ಅದರಲ್ಲಿ ಕೇವಲ 90 % ಅರ್ಹರಿಗೆ ಹಣ ಜಮಾ ಆಗಿದೆ ಎನ್ನಬಹುದು. ಇನ್ನುಳಿದ 10 % ಮಹಿಳೆಯರು ಇನ್ನು ಕೂಡ ಒಂದು ಕಂತಿನ ಹಣ ಖಾತೆಗೆ ಜಮಾ ಆಗಿಲ್ಲ. ಸದ್ಯ ರಾಜ್ಯ ಸರ್ಕಾರದಿಂದ ಗೃಹ ಲಕ್ಷ್ಮಿ ಫಲಾನುಭವಿಗಳಿಗೆ ಹೊಸ ಅಪ್ಡೇಟ್ ಹೊರಬಿದ್ದಿದೆ.

Gruha Lakshmi  New Update
Image Credit: Hindustantimes

ಗೃಹಲಕ್ಷ್ಮಿ 7 ನೇ ಕಂತಿನ ಹಣಕ್ಕಾಗಿ ಕಾಯುತ್ತಿರುವ ಮಹಿಳೆಯರಿಗೆ ಬಿಗ್ ಅಪ್ಡೇಟ್
ಸದ್ಯ ರಾಜ್ಯ ಸರ್ಕಾರ 6 ಮತ್ತು 7 ನೇ ಕಂತಿನ ಹಣ ಬಿಡುಗಡೆ ಸಿದ್ಧತೆ ಮಾಡಿಕೊಳ್ಳುತ್ತಿದೆ. ಆದರೆ ಅರ್ಹರು ಮುಂದಿನ ಕಂತುಗಳ ಹಣವನ್ನು ಯಾವುದೇ ತೊಂದರೆಯಿಲ್ಲದೆ ಪಡೆಯಬೇಕಿದ್ದರೆ ಸಾಕಷ್ಟು ಕೆಲಸಗಳನ್ನು ಪೂರ್ಣಗೊಳಿಸಿಕೊಳ್ಳುವುದು ಬಾಕಿ ಇದೆ. ಇದೀಗ ಗೃಹಲಕ್ಷ್ಮಿ 7 ನೇ ಕಂತಿನ ಹಣಕ್ಕಾಗಿ ಕಾಯುತ್ತಿರುವ ಮಹಿಳೆಯರಿಗೆ ಬಿಗ್ ಅಪ್ಡೇಟ್ ಹೊರಬಿದ್ದಿದೆ.

ಗೃಹ ಲಕ್ಷ್ಮಿ ಯೋಜನೆಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ರಾತ್ರೋರಾತ್ರಿ ಮಹತ್ವದ ನಿರ್ಧಾರವನ್ನು ಕೈಗೊಂಡಿದೆ. ಇದುವರೆಗೆ ಕೆಲವು ಕಂತುಗಳ ಹಣ ಮಾತ್ರ ಸಿಕ್ಕಿದ್ದು 4, 5, 6 ಮತ್ತು ಏಳನೇ ಕಂತಿನ ಹಣ ಜಮಾ ಆಗದೆ ಇರುವವರಿಗೆ ರಾಜ್ಯ ಸರ್ಕಾರ ಗುಡ್ ನ್ಯೂಸ್ ನೀಡಿದೆ. 7 ನೇ ಕಂತಿನ ಹಣದ ಬಿಡುಗಡೆಯ ಜೊತೆಗೆ ಇನ್ನುಳಿದ ಎಲ್ಲ ಕಂತುಗಳ ಹಣ ಜಮಾ ಮಾಡುವುದಾಗಿ ಸರ್ಕಾರ ಘೋಷಿಸಿದೆ. ಖಾತೆಯಲ್ಲಿ ಇರುವ ತಪ್ಪುಗಳನ್ನ ಸರಿಪಡಿಸಿಕೊಂಡರೆ ಹಿಂದಿನ ಎಲ್ಲಾ ಕಂತುಗಳ ಹಣವನ್ನ ಮಹಿಳೆಯರು ಪಡೆದುಕೊಳ್ಳಬಹುದು.

Gruha Lakshmi Money Credit Update
Image Credit: Karnataka Today

ಈ ದಿನದಂದು ಇಂತಹ ಮಹಿಳೆಯರ ಖಾತೆಗೆ ಜಮಾ ಆಗಲಿದೆ 8,000 ರೂ.
ಸದ್ಯ ರಾಜ್ಯ ಸರ್ಕಾರ ಮಾರ್ಚ್ 15 ರಂದು 7 ನೇ ಕಂತಿನ ಹಣ ಬಿಡುಗಡೆ ಮಾಡುವುದಾಗಿ ಘೋಷಿಸಿದೆ. ಮಾರ್ಚ್ ಅಂತ್ಯದೊಳಗೆ ಎಲ್ಲ ಫಲಾನುಭವಿಗಳಿಗೆ ಉಳಿದ ಎಲ್ಲ ಕಂತುಗಳ ಹಣ ಜಮಾ ಮಾಡುವುದಾಗಿ ರಾಜ್ಯ ಸರ್ಕಾರ ಹೇಳಿದೆ. ಅಂದರೆ ಗೃಹ ಲಕ್ಷ್ಮಿ ಫಲಾನುಭವಿಗಳಿಗೆ ಒಟ್ಟಾಗಿ 8,000 ಹಣ ಜಮಾ ಮಾಡುವಾಗಿ ಸರ್ಕಾರ ಘೋಷಿಸಿದೆ. ಗೃಹ ಲಕ್ಷ್ಮಿ ಫಲಾನುಭವಿಗಳು ಈ ಒಂದು ತಿಂಗಳ ಒಳಗೆ ಯೋಜನೆಯ ಲಾಭವನ್ನು ಸಂಪೂರ್ಣವಾಗಿ ಪಡೆದುಕೊಳ್ಳಬಹುದಾಗಿದೆ.

Join Nadunudi News WhatsApp Group

Join Nadunudi News WhatsApp Group