Gruha Lakshmi: ಈ ಮಹಿಳೆಯರ ಖಾತೆಗೆ ಇನ್ನುಮುಂದೆ ಬರಲ್ಲ ಗೃಹಲಕ್ಷ್ಮಿ 2000 ರೂ, ಲಕ್ಷ್ಮಿ ಹೆಬ್ಬಾಳ್ಕರ್ ಘೋಷಣೆ.

ಈ ಮಹಿಳೆಯರ ಖಾತೆಗೆ ಇನ್ನುಮುಂದೆ ಬರಲ್ಲ ಗೃಹಲಕ್ಷ್ಮಿ 2000 ರೂ

Gruha Lakshmi Latest Update: ಸದ್ಯ ರಾಜ್ಯದಲ್ಲಿ ರಾಜ್ಯ ಸರ್ಕಾರ ಗೃಹ ಲಕ್ಷ್ಮಿ ಯೋಜನೆಯಡಿ ರಾಜ್ಯದ ಅರ್ಹ ಮಹಿಳೆಯರಿಗೆ ಮಾಸಿಕವಾಗಿ 2000 ಹಣವನ್ನು ಬಿಡುಗಡೆ ಮಾಡುತ್ತಿದೆ. ಅರ್ಹ ಫಲಾನುಭವಿಗಳು ಯೋಜನೆಯ ಲಾಭವನ್ನು ಪಡೆಯುತ್ತಿದ್ದಾರೆ. ಇನ್ನು ಗೃಹ ಲಕ್ಷ್ಮಿ ಯೋಜನೆಯ ಲಾಭವನ್ನು ಅನರ್ಹರು ಕೂಡ ಪಡೆಯುತ್ತಿದ್ದಾರೆ ಎನ್ನುವ ಬಗ್ಗೆ ಮಾಹಿತಿ ಕೇಳಿಬರುತ್ತಿದೆ.

ಈ ನಿಟ್ಟಿನಲ್ಲಿ ಸರ್ಕಾರ ಗೃಹ ಲಕ್ಷ್ಮಿ ಯೋಜನೆಗೆ ಸಂಬಂಧಿಸಿದಂತೆ ಹೊಸ ಹೊಸ ನಿಯಮವನ್ನು ಜಾರಿಗೆ ತರುತ್ತಿದೆ. ಸದ್ಯ ರಾಜ್ಯ ಸರ್ಕಾರ ಗೃಹ ಲಕ್ಷ್ಮಿ ಫಲಾನುಭವಿಗಳಿಗೆ ಹೊಸ ನಿಯಮವನ್ನು ಜಾರಿಗೆ ತಂದಿದೆ. ನೀವು ಗೃಹ ಲಕ್ಷ್ಮಿ ಯೋಜನೆಯ ಫಲಾನುಭವಿಗಳಾಗಿದ್ದರೆ ತಪ್ಪದೆ ಈ ಲೇಖನವನ್ನು ಓದುವ ಮೂಲಕ ಹೊಸ ನಿಯಮದ ಬಗ್ಗೆ ಮಾಹಿತಿ ತಿಳಿದುಕೊಳ್ಳಿ.

Gruha Lakshmi Latest Update
Image Credit: Kanaja

ರಾಜ್ಯದ ಗೃಹಿಣಿಯರಿಗೆ ಬಿಗ್ ಅಪ್ಡೇಟ್
ಗೃಹಿಣಿಯರು ಕಳೆದ ಹತ್ತು ತಿಂಗಳಿನಿಂದ ಗೃಹಲಕ್ಷ್ಮಿ ಯೋಜನೆಯ ಪ್ರಯೋಜನಗಳನ್ನು ಪಡೆಯುತ್ತಿದ್ದಾರೆ. ಗೃಹಲಕ್ಷ್ಮಿ ಯೋಜನೆಯಡಿ ಗೃಹಿಣಿಯರು ಪ್ರತಿ ತಿಂಗಳು 2000 ರೂಪಾಯಿಗಳನ್ನು ತಮ್ಮ ಬ್ಯಾಂಕ್ ಖಾತೆಗೆ ಜಮಾ ಮಾಡಿಕೊಳ್ಳುತ್ತಿದ್ದಾರೆ. ಸದ್ಯ ರಾಜ್ಯ ಸರ್ಕಾರ 11 ಕಂತಿನ ಹಣದ ಬಿಡುಗಡೆಗಾಗಿ ಸಿದ್ಧತೆ ಮಾಡಿಕೊಂಡಿದೆ.

ಜೂನ್ ನಲ್ಲಿ 11 ಕಂತಿನ ಹಣದ ಬರುವಿಕೆಯಲ್ಲಿ ಗೃಹ ಲಕ್ಷ್ಮಿ ಫಲಾನುಭವಿಗಳು ಕಾಯುತ್ತಿದ್ದಾರೆ. ಗೃಹ ಲಕ್ಷ್ಮೀ ಪಲಾನುಭವಿಗಳಿಗೆ 11 ನೇ ಕಂತಿನ ಹಣ ಜೂನ್ 20 ರಂದು ಜಮಾ ಆಗಲಿದೆ. ಆದರೆ 11 ನೇ ಕಂತಿನ ಹಣ ಇಂತಹ ಮಹಿಳೆಯರ ಖಾತೆಗೆ ಜಮಾ ಆಗುವುದಿಲ್ಲ. ಹಣ ಜಮಾ ಆಗಬೇಕಿದ್ದರೆ ಫಲಾನುಭವಿಗಳು ಆದಷ್ಟು ಬೇಗ ಈ ಕೆಲಸಗಳನ್ನು ಪೂರ್ಣಗೊಳಿಸಿಕೊಳ್ಳಬೇಕು.

Gruha Lakshmi Scheme KYC Update
Image Credit: Hosakannada

ಈ ಮಹಿಳೆಯರ ಖಾತೆಗೆ ಇನ್ನುಮುಂದೆ ಬರಲ್ಲ ಗೃಹಲಕ್ಷ್ಮಿ 2000 ರೂ
•ಈಗಾಗಲೇ ರಾಜ್ಯ ಸರ್ಕಾರ ಗೃಹ ಲಕ್ಷ್ಮಿ ಫಲಾನುಭವಿಗಳಿಗೆ KYC ಅಪ್ಡೇಟ್ ಅನ್ನು ಕಡ್ಡಾಯಗಳಿಸಿದೆ. KYC ನವೀಕರಣ ಆಗದ ಮಹಿಳೆಯರ ಖಾತೆಗೆ ಯಾವುದೇ ಕಾರಣಕ್ಕೂ ಗೃಹ ಲಕ್ಷ್ಮಿ ಯೋಜನೆಯ ಹಣ ಜಮಾ ಆಗುವುದಿಲ್ಲ. ನೀಡಿರುವ ಬ್ಯಾಂಕ್ ಖಾತೆಗೆ ನೀವು ಮತ್ತೆ KYC ಮಾಡಬೇಕು.

Join Nadunudi News WhatsApp Group

•ಇನ್ನು KYC Update ನ ಜೊತೆಗೆ NPCI Link ಕೂಡ ಅಗತ್ಯವಾಗಿದೆ. ಫಲಾನುಭವಿಗಳು ತಕ್ಷಣ NPCI ಲಿಂಕ್ ಮಾಡಬೇಕಿದೆ. ನಿಮ್ಮ ಹತ್ತಿರದ ಬ್ಯಾಂಕ್ ಶಾಖೆಗೆ ಭೇಟಿ ನೀಡಿ ನೀವು ಈ ಕೆಲಸವನ್ನು ಪೂರ್ಣಗೊಳಿಸಿಕೊಳ್ಳಬಹುದು.

•ಇನ್ನು ನಿಮ್ಮ ಮೊಬೈಲ್ ನಂಬರ್ ಗೆ ಬ್ಯಾಂಕ್ ಅಕೌಂಟ್ ಹಗೂ ಆಧಾರ್ ಲಿಂಕ್ ಆಗುವುದು ಕೂಡ ಮುಖ್ಯವಾಗಿದೆ. ಮೊಬೈಲ್ ನಂಬರ್ ಗೆ ಆಧಾರ್ ಲಿಂಕ್ ಆಗದೆ ಇದ್ದರೆ ನಿಮ್ಮ ಖಾತೆಗೆ ಯೋಜನೆಯ ಹಣ ಜಮಾ ಆಗಿದೆಯಾ ಅಥವಾ ಇಲ್ಲವ ಎನ್ನುವ ಬಗ್ಗೆ ನಿಮಗೆ ಸಂದೇಶ ರವಾನೆ ಆಗುವುದಿಲ್ಲ.

•ಇನ್ನು ಅರ್ಜಿ ಸಲ್ಲಿಕೆಯ ವೇಳೆ ನೀವು ನೀಡಿದ ಬ್ಯಾಂಕ್ ಅಕೌಂಟ್ ಸರಿಯಾಗಿದೆಯೇ ಎನ್ನುವುದನ್ನು ಒಮ್ಮೆ ಪರಿಶೀಲಿಸಿಕೊಳ್ಳಿ. ನಿಮ್ಮ ಖಾತೆ ಕ್ಲೋಸ್ ಆಗಿದ್ದರೆ ಹಣ ಜಮಾ ಆಗುವುದು ಕಷ್ಟ.

Gruha Lakshmi Scheme 2024
Image Credit: Kannada News

Join Nadunudi News WhatsApp Group