Gruha Lakshmi: ಇನ್ಮುಂದೆ ಈ ಮಹಿಳೆಯರು ಎಷ್ಟೇ ಪ್ರಯತ್ನ ಪಟ್ಟರು ಖಾತೆಗೆ ಬರಲ್ಲ ಗೃಹಲಕ್ಷ್ಮಿ ಯೋಜನೆ ಹಣ.

ಈ ಮಹಿಳೆಯರು ಎಷ್ಟೇ ಪ್ರಯತ್ನ ಪಟ್ಟರು ಖಾತೆಗೆ ಬರಲ್ಲ ಗೃಹಲಕ್ಷ್ಮಿ ಯೋಜನೆ ಹಣ

Gruha Lakshmi Latest Update: ರಾಜ್ಯ ಸರ್ಕಾರದ ಉಚಿತ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ Gruha Lakshmi ಯೋಜನೆಯು ಸದ್ಯ ಅರ್ಹರಿಗೆ ತಲುಪುತ್ತಿದೆ. ಇದೀಗ ರಾಜ್ಯ ಸರ್ಕಾರ ಗೃಹ ಲಕ್ಷ್ಮಿ ಯೋಜನೆಯಡಿ 6 ನೇ ಕಂತಿನ ಹಣವನ್ನು ಬಿಡುಗಡೆ ಮಾಡಿದೆ.

ಅರ್ಹ ಫಲಾನುಭವಿಗಳಿಗೆ ಈಗಾಗಲೇ ಗೃಹ ಲಕ್ಷ್ಮಿ ಯೋಜನೆಯ 6 ನೇ ಕಂತಿನ 2000 ರೂ ಹಣ DBT ಮೂಲಕ ಜಮಾ ಆಗಿದೆ. ಸದ್ಯ ರಾಜ್ಯ ಸರ್ಕಾರದಿಂದ ಗೃಹ ಲಕ್ಷ್ಮಿ ಯೋಜನೆಗೆ ಸಂಬಂಧಿಸಿದಂತೆ ಬಿಗ್ ಅಪ್ಡೇಟ್ ಹೊರಬಿದ್ದಿದೆ. ಇಂತಹ ಮಹಿಳೆಯರು ಗೃಹ ಲಕ್ಷ್ಮಿ ಹಣ ಪಡೆಯಲು ಸಾಧ್ಯವಿಲ್ಲ ಎನ್ನುವ ಬಗ್ಗೆ ಮಾಹಿತಿ ಲಭಿಸಿದೆ.

Gruha Lakshmi Latest Update
Image Credit: Hindustan Times

ಈ ಮಹಿಳೆಯರು ಎಷ್ಟೇ ಪ್ರಯತ್ನ ಪಟ್ಟರು ಖಾತೆಗೆ ಬರಲ್ಲ ಗೃಹಲಕ್ಷ್ಮಿ ಯೋಜನೆ ಹಣ
•ಗೃಹ ಲಕ್ಷ್ಮಿ ಯೋಜನೆಯಡಿ ಮಾಸಿಕ 2000 ಹಣ ಬರದೇ ಇರಲು ಮುಖ್ಯ ಕಾರಣ ತಾಂತ್ರಿಕ ದೋಷವಾಗಿದೆ. ಸದ್ಯ ಸರ್ಕಾರ ತಾಂತ್ರಿಕ ದೋಷಗಳನ್ನು ನಿವಾರಿಸುತ್ತಿದೆ.

•ರಾಜ್ಯ ಸರ್ಕಾರ ಗೃಹ ಲಕ್ಸ್ಮಿ ಯೋಜನೆಗಾಗಿ ಸಾಕಷ್ಟು ಮಾನದಂಡವನ್ನು ವಿಧಿಸಿದೆ. ಅದರಲ್ಲಿ ಮುಖ್ಯವಾದದ್ದು, ಫಲಾನುಭವಿಗಳ ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್. ಆಧಾರ್ ಲಿಂಕ್ ಆಗದಿದ್ದರೆ ನೀವು ಯೋಜನೆಯ ಲಾಭ ಪಡೆಯಲು ಸಾಧ್ಯವಿಲ್ಲ.

•ಇನ್ನು ಗೃಹ ಲಕ್ಸ್ಮಿ ಯೋಜನೆಯಾ ಫಲಾನುಭವಿಗಳ ಬ್ಯಾಂಕ್ ಖಾತೆ, ಆಧಾರ್, ರೇಷನ್ ಕಾರ್ಡ್ ನಲ್ಲಿನ ಎಲ್ಲ ಮಾಹಿತಿ ಒಂದೇ ಆಗಿರುವುದು ಕಡ್ಡಾಯವಾಗಿದೆ. ಎಲ್ಲ ಮಾಹಿತಿ ಒಂದೇ ರೀತಿ ಇಲ್ಲದಿದ್ದರೆ ಯೋಜನೆಯ ಲಾಭ ಸಿಗುವುದಿಲ್ಲ.

Join Nadunudi News WhatsApp Group

•ಇನ್ನು ಗೃಹ ಲಕ್ಷ್ಮಿ ಯೋಜನೆಗಾಗಿ ಇತ್ತೀಚಿಗೆ ಸರ್ಕಾರ E -KYC ಅನ್ನು ಕಡ್ಡಾಯಗೊಳಿಸಿದೆ. KYC ಪ್ರಕ್ರಿಯೆ ಕೂಡ ಮಾಡುವುದು ಕಡ್ಡಾಯವಾಗಿದೆ.

•ಇದೆಲ್ಲದರ ಜೊತೆಗೆ ಗೃಹ ಲಕ್ಷ್ಮಿ ಯೋಜನೆಯಾ ಫಲಾನುಭವಿಗಳು NPCI Mapping ಮಾಡುವುದು ಕೂಡ ಕಡ್ಡಾಯವಾಗಿದೆ.

•ಫೆ. ತಿಂಗಳಿನಲ್ಲಿ ಯಾರು NPCI ಮಾಡಿಲ್ಲವೋ ಅಂತವರ ಖಾತೆಗೆ 6 ಮತ್ತು 7 ಕಂತಿನ ಹಣ ಜಮಾ ಆಗಿಲ್ಲ.

Gruha Lakshmi Scheme Update 2024
Image Credit: News Guru Kannada

ಖಾತೆಗೆ ಹಣ ಜಮಾ ಆಗಿದೆಯಾ ಎಂದು ಈ ರೀತಿಯಾಗಿ ಚೆಕ್ ಮಾಡಿ
•ಗೃಹ ಲಕ್ಷ್ಮಿ ಯೋಜನೆಯ ಹಣ ಖಾತೆಗೆ ಜಮಾ ಆಗಿದೆಯೇ ಎಂದು ಪರಿಶೀಲಿಸಿಕೊಳ್ಳಲು ಮೊದಲು DBT Karnataka App ಅನ್ನು Download ಮಾಡಿಕೊಳ್ಳಬೇಕು.

•ಅಪ್ಲಿಕೇಶನ್ Download ಮಾಡಿದ ನಂತರ, ಗೃಹ ಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿದ ನಂತರ, ಫಲಾನುಭವಿಯ ಆಧಾರ್ ಸಂಖ್ಯೆ ಮತ್ತು ಮೊಬೈಲ್ ಸಂಖ್ಯೆಗೆ ಬರುವ OTP ಅನ್ನು ಈ ಅಪ್ಲಿಕೇಶನ್‌ ಗೆ ಹಾಕಿ Login ಮಾಡಲು 4-ಅಂಕಿಯ Password ರಚಿಸಿ ಮತ್ತು ಲಾಗಿನ್ ಬಟನ್ ಕ್ಲಿಕ್ ಮಾಡಿ.

•ಲಾಗಿನ್ ಆದ ನಂತರ “ಪಾವತಿ ಸ್ಥಿತಿ” ಬಟನ್ ಮೇಲೆ ಕ್ಲಿಕ್ ಮಾಡಿ ಮತ್ತು “ಗೃಹ ಲಕ್ಷ್ಮಿ” ಹೆಸರಿನ ಆಯ್ಕೆಯನ್ನು ಕ್ಲಿಕ್ ಮಾಡಿದರೆ, ಗೃಹಲಕ್ಷ್ಮಿ ಹಣವು ಯಾವ ದಿನದಂದು ನಿಮಗೆ ಜಮಾ ಆಗಿದೆ ಹಾಗೆಯೆ UTR ಸಂಖ್ಯೆ ಇತರ ಸಂಪೂರ್ಣ ವಿವರಗಳನ್ನು ತೋರಿಸುತ್ತದೆ.

Gruha lakshmi Status Check
Image Credit: Citizenmatters

Join Nadunudi News WhatsApp Group