Gruha Lakshmi: ಗೃಹ ಲಕ್ಷ್ಮಿ ಯೋಜನೆಯಿಂದ ಈ ಮಹಿಳೆಯರ ಹೆಸರು ಡಿಲೀಟ್, ನಿಮ್ಮ ಹೆಸರು ಇದೆಯಾ ನೋಡಿ

ಗೃಹ ಲಕ್ಷ್ಮಿ ಅರ್ಹರ ಪಟ್ಟಿಯಿಂದ ಈ ಮಹಿಳೆಯರ ಹೆಸರು ಡಿಲೀಟ್

Gruha Lakshmi New Rule: ರಾಜ್ಯದ ಅರ್ಹ ಫಲಾನುಭವಿಗಳು ಸದ್ಯ ಗೃಹ ಲಕ್ಷ್ಮಿ ಯೋಜನೆಯಡಿ ಮಾಸಿಕ 2000 ರೂ ಹಣವನ್ನು ಪಡೆಯುತ್ತಿದ್ದಾರೆ. ರಾಜ್ಯ ಸರ್ಕಾರ ರಾಜ್ಯದ ಎಲ್ಲ ಅರ್ಹರ ಫಲಾನುಭವಿಗಳಿಗೆ ಮಾಸಿಕವಾಗಿ 2000 ಹಣವನ್ನು ಬಿಡುಗಡೆ ಮಾಡುತ್ತಿದೆ. ಆಗಸ್ಟ್ ನಲ್ಲಿ ಅನುಷ್ಠಾನಗೊಂಡ ಗೃಹ ಲಕ್ಷ್ಮಿ ಯೋಜನೆ ಸದ್ಯ 11 ಕಂತುಗಳ ಹಣ ಅರ್ಹರ ಖಾತೆಗೆ ತಲುಪಿದೆ ಎನ್ನಬಹುದು.

ಸದ್ಯ ಜುಲೈ ನಲ್ಲಿ 12 ನೇ ಕಂತಿನ ಹಣ ಜಮಾ ಆಗಲಿದೆ. ಮಾಸಿಕ ಕಂತುಗಳನ್ನು ಜಮಾ ಮಾಡುತ್ತಿರುವ ರಾಜ್ಯ ಸರ್ಕಾರ ಇದೀಗ 12 ನೇ ಕಂತಿನ ಹಣದ ಬಿಡುಗಡೆಗೂ ಮುನ್ನ ಹೊಸ ನಿಯಮವನ್ನು ಜಾರಿಗೊಳಿಸಿದೆ. ಹೊಸ ನಿಯಮದ ಪ್ರಕಾರ 12 ನೇ ಕಂತಿನ ಹಣ ಇಂತಹ ಮಹಿಳೆಯರ ಖಾತೆಗೆ ಜಮಾ ಆಗುವುದಿಲ್ಲ.

Gruha Lakshmi New Rules
Image Credit: Karnataka Times

ಗೃಹಲಕ್ಷ್ಮಿ ಯೋಜನೆಯ ಹೊಸ ರೂಲ್ಸ್
ಗೃಹ ಲಕ್ಷ್ಮಿ ಯೋಜನೆಯಡಿ ಪ್ರತಿ ತಿಂಗಳು ಅರ್ಹ ಫಲಾನುಭವಿಗಳ ಖಾತೆಗೆ 2000 ರೂ. ಹಣ ಜಮಾ ಆಗುತ್ತಿದೆ. ಇನ್ನು ಗೃಹ ಲಕ್ಷ್ಮಿ ಯೋಜನೆಯಡಿ ಸಂಪೂರ್ಣ ಫಲಾನುಭವಿಗಳಿಗೆ ಯೋಜನೆಯ ಲಾಭ ದೊರಕುತ್ತಿಲ್ಲ. ಗೃಹ ಲಕ್ಷ್ಮಿ ಯೋಜನೆಯು ಇನ್ನು ಅನೇಕರಿಗೆ ತಲುಪುವುದು ಬಾಕಿ ಇದೆ. ಒಂದು ಕಂತಿನ ಹಣ ಜಮಾ ಆದರೆ ಇನ್ನೊಂದು ಕಂತಿನ ಹಣ ಫಲಾನುಭವಿಗಳಿಗೆ ಜಮಾ ಆಗುತ್ತಿಲ್ಲ. ಇದಕ್ಕೆ ಕಾರಣ ಏನು ಅನ್ನುವ ಬಗ್ಗೆ ಸರ್ಕಾರ ಈಗಲೂ ಉತ್ತರ ಹುಡುಕುತ್ತಿದೆ.

ಗೃಹ ಲಕ್ಷ್ಮಿ ಯೋಜನೆಯ ಅರ್ಜಿ ಸಲ್ಲಿಕೆಯ ಸಮಯದಲ್ಲಿಯೇ ಸರ್ಕಾರ ಗೃಹ ಲಕ್ಷ್ಮಿ ಯೋಜನೆಗೆ ಯಾರು ಅರ್ಹರು ಎನ್ನುವ ಬಗ್ಗೆ ಮಾನದಂಡವನ್ನು ಪರಿಚಯಿಸಿತ್ತು. ಸದ್ಯ ಸರ್ಕಾರದ ನಿಯಮವನ್ನು ಮೀರಿ ಗೃಹ ಲಕ್ಷ್ಮಿ ಯೋಜನೆಯ ಲಾಭವನ್ನು ಪಡೆಯುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದೆ. ಈ ನಿಟ್ಟಿನಲ್ಲಿ ಸರ್ಕಾರ ಕಠಿಣ ಕ್ರಮ ಕೈಗೊಳ್ಳುತ್ತಿದೆ. ಅನರ್ಹರು ಗೃಹ ಲಕ್ಷ್ಮಿ ಯೋಜನೆಯ ಲಾಭವನ್ನು ಪಡೆಯುತ್ತಿರುವ ಸರ್ಕಾರಕ್ಕೆ ತಿಳಿದು ಬಂದಿದೆ.

Gruha Lakshmi Yojana Karnataka
Image Credit: Hosakannada

ಗೃಹ ಲಕ್ಷ್ಮಿ ಅರ್ಹರ ಪಟ್ಟಿಯಿಂದ ಈ ಮಹಿಳೆಯರ ಹೆಸರು ಡಿಲೀಟ್
ಸದ್ಯ ರಾಜ್ಯ ಸರ್ಕಾರ GST ಹಾಗೂ TAX ಪಾವತಿದಾರರನ್ನು ಗುರುತಿಸಿದೆ. ಆದಾಯ ತೆರಿಗೆ ಪಾವತಿದಾರರು ಗೃಹ ಲಕ್ಷ್ಮಿ ಯೋಜನೆಗೆ ಅರ್ಹರಲ್ಲ ಎನ್ನುವ ಬಗ್ಗೆ ಸರ್ಕಾರ ಈಗಾಗಲೇ ಮಾಹಿತಿ ನೀಡಿದೆ. ಅದಾಗ್ಯೂ, ಆದಾಯ ತೆರಿಗೆ ಪಾವತಿದಾರರು ಗೃಹ ಲಕ್ಷ್ಮಿ ಯೋಜನೆಯ ಲಾಭವನ್ನು ಪಡೆಯುತ್ತಿದ್ದಾರೆ.

Join Nadunudi News WhatsApp Group

ಈ ನಿಟ್ಟಿನಲ್ಲಿ ಇಂತವರ ವಿರುದ್ಧ ಸರ್ಕಾರ ಕ್ರಮ ಕೈಗೊಂಡಿದೆ. ಹೌದು, ಸರ್ಕಾರ ಗೃಹ ಲಕ್ಷ್ಮಿ ಯೋಜನೆಯ ಲಾಭವನ್ನು ಪಡೆಯುತ್ತಿರುವ ಯಾವ ಫಲಾನುಭವಿಗಳು GST ಹಾಗೂ TAX ಪಾವತಿಸುತ್ತಿದ್ದರೋ ಅಂತವರನ್ನು ಫಲಾನುಭವಿ ಪಟ್ಟಿಯಿಂದ ತೆಗೆದು ಹಾಕಿದೆ. ಇನ್ನುಮುಂದೆ ಆದಾಯ ತೆರಿಗೆ ಪಾವತಿಸುವವರು ಗೃಹ ಲಕ್ಷ್ಮಿ ಯೋಜನೆಯ ಲಾಭವನ್ನು ಪಡೆಯಲು ಸಾಧ್ಯವಿಲ್ಲ.

Gruha Lakshmi Rules Change
Image Credit: Kannada news

Join Nadunudi News WhatsApp Group