Gruha Lakshmi: ಗೃಹಲಕ್ಷ್ಮಿ ಹಣ ಸಿಗದ ಮಹಿಳೆಯರಿಗೆ ಗುಡ್ ನ್ಯೂಸ್, ಈ ದಾಖಲೆ ನೀಡಿದರೆ ಖಾತೆಗೆ ಹಣ ಜಮಾ.

ಈ ದಾಖಲೆ ಸರಿಪಡಿಸಿಕೊಂಡರೆ ಇಂದೇ ಜಮಾ ಆಗಲಿದೆ ಗೃಹ ಲಕ್ಷ್ಮಿ ಹಣ

Gruha Lakshmi New Update: ಸದ್ಯ ರಾಜ್ಯದಲ್ಲಿ ಗೃಹ ಲಕ್ಷ್ಮಿ ಯೋಜನೆಯ ಲಾಭವನ್ನು ಅರ್ಹ ಫಲಾನುಭವಿಗಳು ಪಡೆಯುತ್ತಿದ್ದಾರೆ. ರಾಜ್ಯ ಸರ್ಕಾರ ಮಹಿಳೆಯರ ಸಬಲೀಕರಣ ಉದ್ದೇಶದಿಂದ ಜಾರಿಗೊಳಿಸಿರುವ ಯೋಜನೆಗಳಲ್ಲಿ ಗೃಹ ಲಕ್ಷ್ಮಿ ಯೋಜನೆ ಕೂಡ ಒಂದಾಗಿದೆ. ರಾಜ್ಯ ಸರ್ಕಾರ ಈಗಾಗಲೇ ಗೃಹ ಲಕ್ಷ್ಮಿ ಯೋಜನೆಯಡಿ ಒಟ್ಟಾಗಿ 10 ಕಂತುಗಳ ಹಣವನ್ನು ಜಮಾ ಮಾಡಿದೆ.

ಈ ಜೂನ್ ನಲ್ಲಿ 11 ಕಂತಿನ ಹಣ ರಾಜ್ಯ ಸರ್ಕಾರ ಬಿಡುಗಡೆ ಮಾಡಲಿದೆ. ಇನ್ನು ಅರ್ಹ ಫಲಾನುಭವಿಗಳು ಈ ಜೂನ್ ಅಂತ್ಯದೊಳಗೆ 11 ನೇ ಕಂತಿನ ಹಣವನ್ನು ಪಡೆಯಲಿದ್ದಾರೆ. ನೀವು ಕೂಡ 11 ನೇ ಕಂತಿನ ಹಣವನ್ನು ಪಡೆದುಕೊಳ್ಳಲು ಆದಷ್ಟು ಬೇಗ ಈ ಎಲ್ಲ ಕೆಲಸಗಳನ್ನು ಪೂರ್ಣಗೊಳಿಸಿಕೊಳ್ಳಿ. ಈ ಎಲ್ಲ ಸಮಸ್ಯೆಗಳನ್ನು ಪರಿಹರಿಸಿಕೊಂಡಿದ್ದಲ್ಲಿ, ಶೀಘ್ರವೇ ನಿಮ್ಮ ಖಾತೆಗೆ 11 ನೇ ಕಂತಿನ ಹಣ ಜಮಾ ಆಗಲಿದೆ.

Karnataka Gruha Lakshmi Schem
Image Credit: Cnciexam

ಈ ದಾಖಲೆ ಸರಿಪಡಿಸಿಕೊಂಡರೆ ಇಂದೇ ಜಮಾ ಆಗಲಿದೆ ಗೃಹ ಲಕ್ಷ್ಮಿ ಹಣ
•ಗೃಹ ಲಕ್ಷ್ಮಿ ಫಲಾನುಭವಿಗಳು ಬ್ಯಾಂಕ್ ಖಾತೆ ಹೊಂದಿದ್ದರೂ ಆಧಾರ್ ಸೀಡಿಂಗ್ ಮಾಡಿಲ್ಲ. ಹೀಗಾಗಿ ಅವರಿಗೆ ಹಣ ಸಿಗುತ್ತಿಲ್ಲ. ಈ ಸಮಸ್ಯೆಯನ್ನು ತಕ್ಷಣ ಬಗೆಹರಿಸಿಕೊಳ್ಳಬೇಕಿದೆ.

•ಗೃಹಲಕ್ಷ್ಮಿ ಯೋಜನೆಯಡಿ ನೋಂದಣಿ ಮಾಡಿಸಿಕೊಂಡಿದ್ದರೂ ಸಹಾಯಧನ ಪಡೆಯದ ಫಲಾನುಭವಿಗಳು ಇ-ಕೆವೈಸಿ ಸಂಬಂಧಿತ ಸಮಸ್ಯೆಗಳನ್ನು ಅರ್ಜಿಯೊಂದಿಗೆ ಬ್ಯಾಂಕ್‌ ಗಳಲ್ಲಿ ತಕ್ಷಣವೇ ಪರಿಹರಿಸಲು ಸೂಚನೆ ನೀಡಲಾಗಿದೆ.

•ನೀವು ಈಗಾಗಲೇ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿದ್ದರೂ ಇನ್ನೂ ಹಣವನ್ನು ಸ್ವೀಕರಿಸದಿದ್ದರೆ, ನಿಮ್ಮ ದಾಖಲೆಗಳಲ್ಲಿ ಯಾವುದೇ ಲೋಪದೋಷಗಳನ್ನು ತಕ್ಷಣವೇ ಸರಿಪಡಿಸಿ.

Join Nadunudi News WhatsApp Group

•ನಿಮ್ಮ ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಆಗಿಲ್ಲದಿದ್ದರೆ ಆಧಾರ್ ಕಾರ್ಡ್ ಮತ್ತು ಪಡಿತರ ಚೀಟಿ ಲಿಂಕ್ ಆಗಿಲ್ಲದಿದ್ದರೆ ಅಥವಾ ಆಧಾರ್ ಸೀಡಿಂಗ್ ಮಾಡದಿದ್ದರೆ ತಕ್ಷಣ ಇದನ್ನು ಮಾಡಿ.

•ನಿಮ್ಮ ಬ್ಯಾಂಕ್ ಖಾತೆಯಲ್ಲಿ ಯಾವುದೇ ದೋಷಗಳಿದ್ದರೆ, ತಕ್ಷಣವೇ ಬ್ಯಾಂಕ್‌ ನಲ್ಲಿ ಹೊಸ ಖಾತೆಯನ್ನು ತೆರೆಯಿರಿ ಮತ್ತು ಆ ಬ್ಯಾಂಕ್ ಖಾತೆಯನ್ನು ಗೃಹಲಕ್ಷ್ಮಿ ಯೋಜನೆಗೆ ಲಿಂಕ್ ಮಾಡಿ.

•ಇನ್ನು ಬ್ಯಾಂಕ್ ಖಾತೆಯಲ್ಲಿ ಸಮಸ್ಯೆ ಇದ್ದರೆ ಅಂಚೆ ಕಚೇರಿಯಲ್ಲಿ ಖಾತೆಯನ್ನು ತೆರೆಯಲು ಕೂಡ ಸರ್ಕಾರ ಅನುಮತಿ ನೀಡಿದೆ. ಅಂಚೆ ಕಚೇರಿಯ ಖಾತೆಗೆ ಕೂಡ ಗೃಹ ಲಕ್ಷ್ಮಿ ಹಣ ಜಮಾ ಆಗಲಿದೆ.

Gruha Lakshmi New Update 2024
Image Credit: etvbharat

Join Nadunudi News WhatsApp Group