Gruha Lakshmi: ಗೃಹಲಕ್ಷ್ಮಿ ಯೋಜನೆಯ ಹಣ ಖಾತೆಗೆ ಬಂದಿದೆಯಾ ಅಥವಾ ಇಲ್ಲವಾ ಎಂದು ಚೆಕ್ ಮಾಡುವುದು ಹೇಗೆ…?

ಗೃಹಲಕ್ಷ್ಮಿ ಹಣ ಖಾತೆಗೆ ಹಣ ಜಮಾ ಆಗಿದೆಯಾ ಎಂದು ಈ ರೀತಿಯಾಗಿ ಚೆಕ್ ಮಾಡಿ

Gruha Lakshmi Scheme Status Check: ಗೃಹ ಲಕ್ಷ್ಮಿ ಯೋಜನೆಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ದಿನಕ್ಕೊಂದು ಅಪ್ಡೇಟ್ ಬಿಡುಗಡೆ ಮಾಡುತ್ತಿದೆ. ಸದ್ಯ ರಾಜ್ಯದಲ್ಲಿ ಉಚಿತ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ Gruha Lakshmi ಯೋಜನೆ ಅನುಷ್ಠಾನಗೊಂಡು ಸತತ 8 ತಿಂಗಳು ಕಳೆದಿದೆ. ಅರ್ಹ ಅಭ್ಯರ್ಥಿಗಳು ಇಲ್ಲಿವರೆಗೆ 8 ಕಂತುಗಳ ಹಣವನ್ನು ಪಡೆದುಕೊಂಡಿದ್ದಾರೆ.

ಗೃಹ ಲಕ್ಷ್ಮಿ ಯೋಜನೆ ಸರಿಸುಮಾರು 90 ಪ್ರತಿಶತ ಅರ್ಹರಿಗೆ ತಲುಪಿದೆ. ಇನ್ನು 10 % ಪ್ರತಿಶತದಷ್ಟು ಮಹಿಳೆಯರಿಗೆ ದಾಖಲೆ ಹಾಗೂ ತಾಂತ್ರಿಕ ದೋಷದ ಕಾರಣ ಅರ್ಹರಿಗೆ ತಲುಪಿಲ್ಲ ಎನ್ನಬಹುದು. ಇನ್ನು ಆದಷ್ಟು ಬೇಗ ಎಲ್ಲ ಅರ್ಹರಿಗೂ ಹಣವನ್ನು ತಲುಪಿಸಲು ಸರ್ಕಾರ ಸಂಪೂರ್ಣ ಸಿದ್ಧತೆ ನಡೆಸುತ್ತಿದೆ.

Gruha Lakshmi Scheme Latest Update
Image Credit: Live Mint

ಗೃಹಲಕ್ಷ್ಮಿ ಹಣ ಬೇಕಾದರೆ ತಕ್ಷಣ ಈ ಕೆಲಸ ಮಾಡಿ
*ಈಗಾಗಲೇ ರಾಜ್ಯ ಸರ್ಕಾರ ಗೃಹ ಲಕ್ಷ್ಮಿ ಫಲಾನುಭವಿಗಳಿಗೆ KYC ಅಪ್ಡೇಟ್ ಅನ್ನು ಕಡ್ಡಾಯಗಳಿಸಿದೆ. KYC ನವೀಕರಣ ಆಗದ ಮಹಿಳೆಯರ ಖಾತೆಗೆ ಯಾವುದೇ ಕಾರಣಕ್ಕೂ ಗೃಹ ಲಕ್ಷ್ಮಿ ಯೋಜನೆಯ ಹಣ ಜಮಾ ಆಗುವುದಿಲ್ಲ. ನೀಡಿರುವ ಬ್ಯಾಂಕ್ ಖಾತೆಗೆ ನೀವು ಮತ್ತೆ KYC ಮಾಡಬೇಕು. ಅಂದರೆ ಬ್ಯಾಂಕ್ ಖಾತೆಗೆ ಮತ್ತೊಮ್ಮೆ ಆಧಾರ್ ಸೀಡಿಂಗ್ ಮಾಡಿ ನಂತರ ಹಣ ಜಮೆಯಾಗುತ್ತದೆ.

*ಇನ್ನು KYC Update ನ ಜೊತೆಗೆ NPCI Link ಕೂಡ ಅಗತ್ಯವಾಗಿದೆ. ಫಲಾನುಭವಿಗಳು ತಕ್ಷಣ NPCI ಲಿಂಕ್ ಮಾಡಬೇಕಿದೆ. ನಿಮ್ಮ ಹತ್ತಿರದ ಬ್ಯಾಂಕ್ ಶಾಖೆಗೆ ಭೇಟಿ ನೀಡಿ ನೀವು ಈ ಕೆಲಸವನ್ನು ಪೂರ್ಣಗೊಳಿಸಿಕೊಳ್ಳಬಹುದು.

ಗೃಹಲಕ್ಷ್ಮಿ ಹಣ ಖಾತೆಗೆ ಹಣ ಜಮಾ ಆಗಿದೆಯಾ ಎಂದು ಈ ರೀತಿಯಾಗಿ ಚೆಕ್ ಮಾಡಿ
•ಗೃಹ ಲಕ್ಷ್ಮಿ ಯೋಜನೆಯ ಹಣ ಖಾತೆಗೆ ಜಮಾ ಆಗಿದೆಯೇ ಎಂದು ಪರಿಶೀಲಿಸಿಕೊಳ್ಳಲು ಮೊದಲು DBT Karnataka App ಅನ್ನು Download ಮಾಡಿಕೊಳ್ಳಬೇಕು.

Join Nadunudi News WhatsApp Group

•ಅಪ್ಲಿಕೇಶನ್ Download ಮಾಡಿದ ನಂತರ, ಗೃಹ ಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿದ ನಂತರ, ಫಲಾನುಭವಿಯ ಆಧಾರ್ ಸಂಖ್ಯೆ ಮತ್ತು ಮೊಬೈಲ್ ಸಂಖ್ಯೆಗೆ ಬರುವ OTP ಅನ್ನು ಈ ಅಪ್ಲಿಕೇಶನ್‌ ಗೆ ಹಾಕಿ Login ಮಾಡಲು 4-ಅಂಕಿಯ Password ರಚಿಸಿ ಮತ್ತು ಲಾಗಿನ್ ಬಟನ್ ಕ್ಲಿಕ್ ಮಾಡಿ.

•ಲಾಗಿನ್ ಆದ ನಂತರ “ಪಾವತಿ ಸ್ಥಿತಿ” ಬಟನ್ ಮೇಲೆ ಕ್ಲಿಕ್ ಮಾಡಿ ಮತ್ತು “ಗೃಹ ಲಕ್ಷ್ಮಿ” ಹೆಸರಿನ ಆಯ್ಕೆಯನ್ನು ಕ್ಲಿಕ್ ಮಾಡಿದರೆ, ಗೃಹಲಕ್ಷ್ಮಿ ಹಣವು ಯಾವ ದಿನದಂದು ನಿಮಗೆ ಜಮಾ ಆಗಿದೆ ಹಾಗೆಯೆ UTR ಸಂಖ್ಯೆ ಇತರ ಸಂಪೂರ್ಣ ವಿವರಗಳನ್ನು ತೋರಿಸುತ್ತದೆ.

Gruha Lakshmi Scheme Status Check
Image Credit: Ainlivenews

Join Nadunudi News WhatsApp Group