GT Texa: 1 ರೂ. ಕೂಡ ಖರ್ಚಿಲ್ಲದೆ ಪ್ರತಿನಿತ್ಯ 130 Km ಚಲಿಸುತ್ತೆ ಈ ಬೈಕ್, ಬೆಲೆ ಕೂಡ ಕಡಿಮೆ.

1 ರೂ. ಕೂಡ ಖರ್ಚಿಲ್ಲದೆ ಪ್ರತಿನಿತ್ಯ 130 Km ಚಲಿಸುತ್ತೆ ಈ ಬೈಕ್

GT Texa Electric Bike: ಭಾರತೀಯ ಎಲೆಕ್ಟ್ರಿಕ್ ವಾಹನ ಮಾರುಕಟ್ಟೆಯಲ್ಲಿ ಇತ್ತೀಚಿಗೆ ಹೊಸ ಹೊಸ ಮಾದರಿಯ Electric ವಾಹನಗಳು ಪರಿಚಯವಾಗುತ್ತಿದೆ. ವಿವಿಧ ಜನಪ್ರಿಯ ಕಂಪನಿಗಳು ನೂತನ ಮಾದರಿಯ ಎಲೆಕ್ಟ್ರಿಕ್ ಸ್ಕೂಟರ್ ಗಳನ್ನೂ ಮಾರುಕಟ್ಟೆಯಲ್ಲಿ ಪರಿಚಯಿಸುತ್ತಿದೆ. ಸದ್ಯ ಮಾರುಕಟ್ಟೆಯಲ್ಲಿ Electric Bike ಗಳಿಗೂ ಕೂಡ ಹೆಚ್ಚಿನ ಬೇಡಿಕೆ ಇದೆ ಎನ್ನಬಹುದು.

ನೀವು ಕಡಿಮೆ ಬಜೆಟ್ ನಲ್ಲಿ ಕೂಡ ಬೆಸ್ಟ್ ಎಲೆಕ್ಟ್ರಿಕ್ ಬೈಕ್ ಗಳನ್ನೂ ಖರೀದಿಸಬಹುದು. ಜನಪ್ರಿಯ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ತಯಾರಿಕಾ ಕಂಪನಿ ‘ಜಿಟಿ ಫೋರ್ಸ್’ ಹೊಸ ಶ್ರೇಣಿಯ ಹೆಚ್ಚಿನ ಮತ್ತು ಕಡಿಮೆ ವೇಗದ ಎಲೆಕ್ಟ್ರಿಕ್ ದ್ವಿಚಕ್ರ ವಾಹನವನ್ನು ಬಿಡುಗಡೆ ಮಾಡಿದೆ. ನಾವೀಗ ಈ ಲೇಖನದಲ್ಲಿ ಜಿಟಿ ಪೋರ್ಸ್ ಕಂಪನಿಯ ಬೆಸ್ಟ್ EV ಬಗ್ಗೆ ಮಾಹಿತಿ ನೀಡಲಿದ್ದೇವೆ.

GT Texa Electric Bike
Image Credit: Indiamart

ಕಡಿಮೆ ಬೆಲೆಗೆ ಲಾಂಚ್ ಆಯ್ತು ಬೆಸ್ಟ್ EV
ಸದ್ಯ ಭಾರತೀಯ ಮಾರುಕಟ್ಟೆಯಲ್ಲಿ GT Force ತನ್ನ ಬಹು ನಿರೀಕ್ಷಿತ ಎಲೆಕ್ಟ್ರಿಕ್ ಮೋಟಾರ್‌ ಸೈಕಲ್ GT Texa ವನ್ನು ಬಿಡುಗಡೆ ಮಾಡಿದೆ. ಕಂಪನಿಯು ತನ್ನ GT Texas ಮಾದರಿಯನ್ನು ರೂ. 1,19,555 ಎಕ್ಸ್ ಶೋರೂಂ ಬೆಲೆಯಲ್ಲಿ ಬಿಡುಗಡೆಯಾಗಿದೆ. ನಗರ ಸವಾರರ ಅಗತ್ಯತೆಗಳನ್ನು ಪೂರೈಸಲು ವಿನ್ಯಾಸಗೊಳಿಸಲಾಗಿದೆ. GT ಟೆಕ್ಸಾ ಹೆಚ್ಚು ಇನ್ಸುಲೇಟೆಡ್ BLDC ಮೋಟಾರ್ ಹೊಂದಿದೆ. ಇನ್ನು GT ಫೋರ್ಸ್ ಕಂಪನಿಯು ಅತ್ಯಾಧುನಿಕ ತಂತ್ರಜ್ಞಾನವನ್ನು ನೀಡುವುದಾಗಿ ಹೇಳಿಕೊಂಡಿದೆ ಮತ್ತು 80 kmph ವೇಗವನ್ನು ತಲುಪುವ ಸಾಮರ್ಥ್ಯದೊಂದಿಗೆ ಉತ್ತಮ ಕಾರ್ಯಕ್ಷಮತೆಯನ್ನು ನೀಡುತ್ತದೆ.

1 ರೂ. ಕೂಡ ಖರ್ಚಿಲ್ಲದೆ ಪ್ರತಿನಿತ್ಯ 130 Km ಚಲಿಸುತ್ತೆ ಈ ಬೈಕ್
ಹೊಸ GT ಟೆಕ್ಸಾ ಮೋಟಾರ್‌ ಸೈಕಲ್ 3.5 kWh ಲಿಥಿಯಂ-ಐಯಾನ್ ಬ್ಯಾಟರಿಯನ್ನು ಹೊಂದಿದ್ದು, ಒಮ್ಮೆ ಚಾರ್ಜ್ ಮಾಡಿದರೆ 120 ರಿಂದ 130 ಕಿಮೀ ಮೈಲೇಜ್ ಅನ್ನು ನೀಡುತ್ತದೆ. ಆಧುನಿಕ ಮೈಕ್ರೋ ಚಾರ್ಜರ್‌ ನೊಂದಿಗೆ ಮೋಟಾರ್‌ ಸೈಕಲ್ ಅನ್ನು ಕೇವಲ 4 ರಿಂದ 5 ಗಂಟೆಗಳಲ್ಲಿ ಸಂಪೂರ್ಣವಾಗಿ ಚಾರ್ಜ್ ಮಾಡಬಹುದು. ಇನ್ನು ಬ್ಲಾಕ್ ಅಂಡ್ ರೆಡ್ ಬಣ್ಣದ ಆಯ್ಕೆಗಳಲ್ಲಿ ಲಭ್ಯವಿರುವ ಜಿಟಿ ಟೆಕ್ಸಾ ಮೋಟಾರ್‌ ಸೈಕಲ್ ಅನ್ನು ನಗರ ಪ್ರದೇಶಗಳಲ್ಲಿ 180 ಕೆಜಿ ಲೋಡ್ ಸಾಮರ್ಥ್ಯ ಮತ್ತು 18 ಡಿಗ್ರಿ ಗ್ರೇಡಬಿಲಿಟಿಯೊಂದಿಗೆ ಸರಾಗವಾಗಿ ಓಡಿಸಲು ವಿನ್ಯಾಸಗೊಳಿಸಲಾಗಿದೆ.

ಮುಂಭಾಗ ಮತ್ತು ಹಿಂಭಾಗದಲ್ಲಿ ಟೆಲಿಸ್ಕೋಪಿಕ್ ಡ್ಯುಯಲ್ ಸಸ್ಪೆನ್ಶನ್ ಅನ್ನು ಒದಗಿಸಲಾಗಿದ್ದು, ಇದು ಒರಟಾದ ರಸ್ತೆಯಲ್ಲೂ ಆರಾಮದಾಯಕ ಪ್ರಯಾಣವನ್ನು ಒದಗಿಸುತ್ತದೆ. GT Texas ಎಲೆಕ್ಟ್ರಿಕ್ ಬೈಕ್ ನಲ್ಲಿ ನೀವು ಡಿಜಿಟಲ್ ಸ್ಪೀಡೋಮೀಟರ್, ಸೆಂಟ್ರಲ್ ಲಾಕಿಂಗ್ ಸಿಸ್ಟಮ್, ಎಲ್‌ಇಡಿ ಹೆಡ್‌ ಲೈಟ್, ಟೈಲ್ ಲೈಟ್ ಮತ್ತು ಟರ್ನ್ ಸಿಗ್ನಲ್ ಲ್ಯಾಂಪ್‌ ಸೇರಿದಂತೆ ಅನೇಕ ಅತ್ಯಾಧುನಿಕ ಫೀಚರ್ ಗಳನ್ನೂ ಅಳವಡಿಸಲಾಗಿದೆ.

Join Nadunudi News WhatsApp Group

GT Texa Electric Bike Price
Image Credit: Economictimes

Join Nadunudi News WhatsApp Group