Haj Yatra: ಇನ್ಮುಂದೆ ಸಿಗಲ್ಲ ಈ ಯೋಜನೆಯ ಸಬ್ಸಿಡಿ ಹಣ, ಸರ್ಕಾರದಿಂದ ಸಿಗುವ ಸಬ್ಸಿಡಿ ರದ್ದು

ಈ ಯಾತ್ರಿಕರಿಗೆ ನೀಡುವ ಸಬ್ಸಿಡಿಯಲ್ಲಿ ಮಹತ್ವದ ಬದಲಾವಣೆ, ಸಬ್ಸಿಡಿ ರದ್ದು ಮಾಡಿದ ಸರ್ಕಾರ

Hajj Yatra Subsidy Cancelled: ಮುಸ್ಲಿಮರ ಪವಿತ್ರ ಯಾತ್ರಾ ಸ್ಥಳವೆಂದರೆ ಅದು ಮೆಕ್ಕಾ. ಸೌದಿ ಅರೇಬಿಯಾದ ಈ ಪವಿತ್ರ ನಗರ ಮೆಕ್ಕಾಗೆ ಹಜ್ ಯಾತ್ರೆಯ ಸಲುವಾಗಿ ಸುಮಾರು 20 ಲಕ್ಷಕ್ಕೂ ಹೆಚ್ಚು ಮುಸ್ಲಿಮರು ಭಾಗವಹಿಸಲಿದ್ದಾರೆ.

ಏಕೆಂದರೆ ವಿಶ್ವದ ಅತಿದೊಡ್ಡ ಧಾರ್ಮಿಕ ಕ್ಷೇತ್ರಗಲ್ಲಿ ಮೆಕ್ಕಾ ಕೂಡ ಒಂದಾಗಿದೆ. ಹಜ್ ಇಸ್ಲಾಂ ಧರ್ಮದ ಐದು ಪವಿತ್ರ ಆಚರಣೆಗಲ್ಲಿ ಒಂದಾಗಿದೆ. ಸದ್ಯ ಕರ್ನಾಟಕ ಸರ್ಕಾರ ಹಜ್ ಯಾತ್ರೆ ಕೈಗೊಳ್ಳುವರೈಗೆ ಬಿಗ್ ಶಾಕ್ ನೀಡಿದೆ. ಯಾತ್ರಿಕರಿಗೆ ನೀಡುವ ಸಬ್ಸಿಡಿ ಕುರಿತಾಗಿ ಸರ್ಕಾರ ಮಹತ್ವದ ಬದಲಾವಣೆ ಮಾಡಿದೆ.

Haj Yatra Subsidy Cancelled
Image Credit: Thewire

ಇನ್ಮುಂದೆ ಸಿಗಲ್ಲ ಈ ಯೋಜನೆಯ ಸಬ್ಸಿಡಿ ಹಣ
ಕರ್ನಾಟಕದಿಂದ ಹಜ್ ಯಾತ್ರೆ ಕೈಗೊಳ್ಳುವ ಯಾತ್ರಾರ್ಥಿಗಳಿಗೆ ರಾಜ್ಯ ಹಜ್ ಸಮಿತಿ, ಕೇಂದ್ರ ಅಥವಾ ರಾಜ್ಯ ಸರ್ಕಾರ ಯಾವುದೇ ಅನುದಾನ ಅಥವಾ ಸಬ್ಸಿಡಿ ನೀಡುತ್ತಿಲ್ಲ. ಆದರೆ ಸುಗಮ ಯಾತ್ರೆಗೆ ನಾನಾ ಸೌಲಭ್ಯ ಕಲ್ಪಿಸಲಾಗುತ್ತಿದೆ ಎಂದು ರಾಜ್ಯ ಸರ್ಕಾರ ಸ್ಪಷ್ಟಪಡಿಸಿದೆ.

ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಅಧೀನದಲ್ಲಿರುವ ಸ್ವಾಯತ್ತ ಸಂಸ್ಥೆಯಾದ ರಾಜ್ಯ ಹಜ್ ಸಮಿತಿಯಿಂದ ಯಾತ್ರೆ ಪ್ರಾರಂಭವಾಗುವ ಮೊದಲು ಹಜ್ ಶಿಬಿರವನ್ನು ಆಯೋಜಿಸಲಾಗಿದೆ. ಈ ಸಂದರ್ಭದಲ್ಲಿ ಯಾತ್ರಾರ್ಥಿಗಳ ತಂಗಲು ಬೋರ್ಡಿಂಗ್ ಮತ್ತು ಲಾಡ್ಡಿಂಗ್ ವ್ಯವಸ್ಥೆ ಮಾಡಲಾಗಿದೆ.

Haj Yatra Latest Update
Image Credit: The Print

ಸರ್ಕಾರದಿಂದ ಸಿಗುವ ಸಬ್ಸಿಡಿ ರದ್ದು
ಸಂಬಂಧಿಸಿದ ಇಲಾಖೆಗಳ ಸಹಕಾರದೊಂದಿಗೆ ಕಾಗದ ಪತ್ರಗಳು, ವಿದೇಶಿ ವಿನಿಮಯ ವಿತರಣಾ ವ್ಯವಸ್ಥೆ, ವಿಮಾನ ನಿಲ್ದಾಣಕ್ಕೆ ತಲುಪಿಸುವುದು ಸೇರಿದಂತೆ ಅಗತ್ಯ ವ್ಯವಸ್ಥೆಗಳನ್ನು ಒದಗಿಸಲಾಗುವುದು ಎಂದು ಪೌರಾಡಳಿತ ಮತ್ತು ಹಜ್ ಸಚಿವ ರಹೀಮ್ ಖಾನ್ ಇತ್ತೀಚೆಗೆ ನಡೆದ ವಿಧಾನಸಭೆ ಅಧಿವೇಶನದಲ್ಲಿ ಉತ್ತರಿಸಿದರು.

Join Nadunudi News WhatsApp Group

ಮುಂಬೈನಲ್ಲಿರುವ ಹಜ್ ಸಮಿತಿಯು ಜನಸಂಖ್ಯೆಯ ಆಧಾರದ ಮೇಲೆ ಹಜ್ ಯಾತ್ರೆಗೆ ಎಷ್ಟು ಯಾತ್ರಿಕರನ್ನು ಕಳುಹಿಸಬೇಕು ಎಂಬುದನ್ನು ನಿರ್ಧರಿಸುತ್ತದೆ. ರಾಜ್ಯ ಹಜ್ ಸಮಿತಿಯು ಈ ಸಮಿತಿಯೊಂದಿಗೆ ಸಮನ್ವಯ ಸಾಧಿಸಲಿದೆ. ಅರೇಬಿಯಾದಲ್ಲಿ ಕರ್ನಾಟಕದಿಂದ ತೆರಳುವ ಯಾತ್ರಿಕರ ಯೋಹಕ್ಷೇಮಕ್ಕೆ ಸ್ವಯಂ ಸೇವಕರನ್ನು ನಿಯೋಜಿಸಲಾಗುತ್ತದೆ.

Join Nadunudi News WhatsApp Group