Hardik Pandya Divorce: ಈ ಕಾರಣಕ್ಕೆ ಪತ್ನಿಗೆ ವಿಚ್ಛೇಧನ ನೀಡಿದ ಹಾರ್ದಿಕ್ ಪಾಂಡ್ಯ, ಸತ್ಯ ಹೊರಕ್ಕೆ.

ಹಾರ್ದಿಕ್ ಪಾಂಡ್ಯ ವಿಚ್ಛೇಧನಕ್ಕೆ ಇದೆ ಕಾರಣವಂತೆ

Hardik Pandya And Natasha Divorce: ಸದ್ಯ ಕೆಲ ಜೋಡಿ ಹೊಸದಾಗಿ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದರೆ, ಇನ್ನು ಕೆಲ ಜೋಡಿ ತಮ್ಮ ಹಲವು ವರ್ಷಗಳ ದಾಂಪತ್ಯ ಜೀವನಕ್ಕೆ ಫುಲ್ ಸ್ಟಾಪ್ ಇಡುತ್ತಿದ್ದಾರೆ. ಈಗಾಗಲೇ ಸಾಕಷ್ಟು ಜೋಡಿಗಳ ವಿಚ್ಛೇದನದ ಸುದ್ದಿ ಕೇಳಿ ಬಂದಿದೆ.

ಇನ್ನು ಹಲವು ವಿಚ್ಛೇದನ ಪಡೆಯುವ ವಿಚಾರ ಮೊದಲು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದರೂ, ಕೆಲ ದಿನಗಳ ಬಳಿಕ ಅವರೇ ತಮ್ಮ ವಿಚ್ಛೇದನದ ಬಗ್ಗೆ ಸ್ಪಷ್ಟನೆ ನೀಡಿ ಎಲ್ಲರಿಗು ಶಾಕ್ ನೀಡುತ್ತಾರೆ. ಈಗಂತೂ ಸ್ಟಾರ್ ಸೆಲೆಬ್ರೆಟಿಗಳ ವಿಚ್ಛೇದನದ ಸುದ್ದಿ ಜೋರಾಗಿ ಕೇಳಿಬರುತ್ತಿದೆ. ಸದ್ಯ ಈ ಸಾಲಿನಲ್ಲಿ ಸ್ಟಾರ್ ಕ್ರಿಕೆಟ್ ಆಟಗಾರ ಹಾರ್ದಿಕ್ ಪಾಂಡ್ಯ ಹೆಸರು ಕೇಳಿಬರುತ್ತಿದೆ.

Hardik Pandya And Natasha
Image Credit: Prabhatkhabar

ಹಾರ್ದಿಕ್ ಪಾಂಡ್ಯ ಹಾಗೂ ನತಾಶಾ ಡೈವೋರ್ಸ್…!
ಟೀಂ ಇಂಡಿಯಾದ ಸ್ಟಾರ್ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಹಾಗೂ ಜನಪ್ರಿಯ ಮಾಡೆಲ್ ನತಾಶಾ ಸ್ಟಾಂಕೋವಿಕ್ ನಾಲ್ಕು ವರ್ಷಗಳ ದಾಂಪತ್ಯ ಜೀವನಕ್ಕೆ ಬ್ರೇಕ್ ಹಾಕಿದ್ದಾರೆ. ಕಳೆದ ಒಂದು ತಿಂಗಳಿನಿಂದ ವಿಚ್ಛೇದನದ ಬಗ್ಗೆ ಸಾಕಷ್ಟು ವದಂತಿಗಳು ಹಬ್ಬಿದ್ದವು. ಗುರುವಾರ (ಜುಲೈ 18), ಇಬ್ಬರೂ ಸಾಮಾಜಿಕ ಮಾಧ್ಯಮದ ಮೂಲಕ ತಮ್ಮ ವಿಚ್ಛೇದನವನ್ನು ಖಚಿತಪಡಿಸುವ ಮೂಲಕ ವದಂತಿಗಳನ್ನು ಒಪ್ಪಿಕೊಂಡರು. ಇನ್ನು ಈ ಇಬ್ಬರು ವಿಚ್ಛೇದನದ ಬಗ್ಗೆ ಸ್ಪಷ್ಟನೆ ನೀಡುತ್ತಿದ್ದಂತೆ ಸಾಮಾಜಿಕ ಜಾಲತಾಣದಲ್ಲಿ, ವಿಚ್ಛೇದನದ ಹಿಂದ ಕಾರಣದ ಬಗ್ಗೆ ಕೂಡ ಚರ್ಚೆ ಶುರುವಾಗಿದೆ. ಸದ್ಯ ಹಾರ್ದಿಕ್ ಪಂದ್ಯ ಹಾಗೂ ನತಾಶಾ ಆಪ್ತ ಮೂಲಗಳು ವಿಚ್ಛೇದನದ ಹಿಂದಿನ ಅಸಲಿ ಮಾಹಿತಿ ನೀಡಿದ್ದಾರೆ.

ಈ ಕಾರಣಕ್ಕೆ ಪತ್ನಿಗೆ ವಿಚ್ಛೇಧನ ನೀಡಿದ ಹಾರ್ದಿಕ್ ಪಾಂಡ್ಯ
ಹಾರ್ದಿಕ್ ಮತ್ತು ನತಾಶಾ ಇಬ್ಬರೂ ಸಂಪೂರ್ಣ ಒಪ್ಪಿಗೆಯೊಂದಿಗೆ ವಿಚ್ಛೇದನ ಪಡೆದಿದ್ದಾರೆ. ಹಾರ್ದಿಕ್ ಭಾಗವಹಿಸಿದ ಎಲ್ಲಾ ಪಂದ್ಯಗಳಲ್ಲಿ ನತಾಶಾ ಅನುಪಸ್ಥಿತಿ ಎದ್ದುಕಾಣುತ್ತಿತ್ತು. ಕೆಲವು ತಿಂಗಳುಗಳಿಂದ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಅವರು ಎಲ್ಲೂ ಒಟ್ಟಿಗೆ ಕಾಣಿಸಿಕೊಂಡಿರಲಿಲ್ಲ. ಇದು ವಿಚ್ಛೇದನದ ವದಂತಿಗಳಿಗೆ ಪ್ರಮುಖ ಕಾರಣವಾಗಿತ್ತು. ಇದರ ನಂತರ ನತಾಶಾ ತನ್ನ ಸಾಮಾಜಿಕ ಜಾಲತಾಣದಲ್ಲಿ ಮಾಡಿದ ಕೆಲವು ಬದಲಾವಣೆಗಳು ವಿಚ್ಛೇದನದ ವದಂತಿಗಳಿಗೆ ಮತ್ತಷ್ಟು ಬೆಂಬಲವನ್ನು ನೀಡಿತು.

Hardik Pandya Family
Image Credit: Aajtak

ನತಾಶಾ ತಮ್ಮ Instagram ಪ್ರೊಫೈಲ್‌ ನಿಂದ ಹಾರ್ದಿಕ್ ಹೆಸರು ಮತ್ತು ಫೋಟೋಗಳನ್ನು ತೆಗೆದುಹಾಕಿದ್ದಾರೆ. ಇದು ಇಲ್ಲಿಗೆ ನಿಲ್ಲಲಿಲ್ಲ, ಇತ್ತೀಚೆಗಷ್ಟೇ ಟಿ20 ವಿಶ್ವಕಪ್ ನಲ್ಲಿ ಟೀಂ ಇಂಡಿಯಾ ಟ್ರೋಫಿ ಗೆದ್ದು ಇತಿಹಾಸ ಬರೆದಿದೆ. ಈ ವೇಳೆ ಕೆಲ ಆಟಗಾರರು ಕುಟುಂಬ ಸಮೇತರಾಗಿ ವಿಜಯೋತ್ಸವ ಆಚರಿಸಿದರು. ಆದರೆ ಪಾಂಡ್ಯ ಕುಟುಂಬ ಇರಲಿಲ್ಲ. ಈ ಎಲ್ಲ ಬೆಳವಣಿಗೆಯ ನಂತರ ಇಬ್ಬರ ನಡುವೆ ಏನೋ ಸರಿಯಿಲ್ಲ ಎಂಬುದು ಖಚಿತವಾಯಿತು. ಇದೀಗ ಇಬ್ಬರು ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ.

Join Nadunudi News WhatsApp Group

ಹಾರ್ದಿಕ್ ಮತ್ತು ನತಾಶಾ ನಡುವಿನ ಸಂಬಂಧ ಮುರಿದು ಬೀಳಲು ಸಂವಹನದ (Communication)  ಕೊರತೆಯೇ ಕಾರಣ ಎಂದು ಆಪ್ತ ಮೂಲಗಳು ತಿಳಿಸಿವೆ. ಇಬ್ಬರ ನಡುವಿನ ಮನಸ್ತಾಪ, ಜಗಳಗಳನ್ನು ಸೌಹಾರ್ದಯುತವಾಗಿ ಬಗೆಹರಿಸಿಕೊಳ್ಳುವ ತಾಳ್ಮೆ ಇಬ್ಬರಿಗೂ ಇರಲಿಲ್ಲ. ಹೀಗಾಗಿ ಮನಸ್ತಾಪ ವಿಚ್ಛೇದನಕ್ಕೆ ಕಾರಣವಾಯಿತು. ಇದಲ್ಲದೇ ಸಾಮಾಜಿಕ ಜಾಲತಾಣಗಳಲ್ಲಿ ಇಬ್ಬರ ಬಗ್ಗೆಯೂ ತಪ್ಪು ಸುದ್ದಿ ಹಬ್ಬಿಸಬಾರದು ಎಂದು ಆಪ್ತ ಮೂಲಗಳು ತಿಳಿಸಿವೆ.

Hardik Pandya And Natasha Divorce
Image Credit: Indian Express

Join Nadunudi News WhatsApp Group