Hero Flash: 18 ವರ್ಷದ ಒಳಗಿನ ಕಾಲೇಜು ಯುವಕ ಯುವತಿಯರಿಗಾಗಿ ಬಂತು DL ಬೇಕಿರದ ಸ್ಕೂಟರ್, ಬೆಲೆ ಕೇವಲ 55 ಸಾವಿರ.

85 Km ಮೈಲೇಜ್ ಕೊಡುವ ಈ ಸ್ಕೂಟರ್ ಬೆಲೆ ಕೇವಲ 55 ಸಾವಿರ ಮಾತ್ರ, DL ಮತ್ತು ನೋಂದಣಿ ಕೂಡ ಅಗತ್ಯವಿಲ್ಲ.

Hero Flash LA Electric Scooter: ಸದ್ಯ ಭಾರತೀಯ ಆಟೋ ವಲಯದಲ್ಲಿ ಎಲೆಕ್ರಿಕ್ (Electric) ವಾಹನಗಳು ಮಾರಾಟದಲ್ಲಿ ಮುಂಚೂಣಿಯಲ್ಲಿವೆ. ಎಲೆಕ್ಟ್ರಿಕ್ ವಾಹನಗಳ ಮೇಲಿನ ಬೇಡಿಕೆ ಹೆಚ್ಚುತ್ತಿರುವ ಬೆನ್ನಲೇ ವಿವಿಧ ಜನಪ್ರಿಯ ದ್ವಿಚಕ್ರ ವಾಹನ ತಯಾರಿಕಾ ಕಂಪನಿಗಳು ಹಾಗು ಸಾಕಷ್ಟು ಸ್ಟಾರ್ಟ್ ಅಪ್ ಕಂಪನಿಗಳು ಕೂಡ ಎಲೆಕ್ಟ್ರಿಕ್ ವಾಹನಗಳನ್ನು ಪರಿಚಯಿಸುವ ಮೂಲಕ ಮಾರುಕಟ್ಟೆಯಲ್ಲಿ ನೆಲೆಯೂರುತ್ತಿವೆ. ಸದ್ಯ ಮಾರುಕಟ್ಟೆಯಲ್ಲಿ ಸಾಕಷ್ಟು ಮಾದರಿಯ Electric Scooter ಗಳು ಲಭ್ಯವಿದೆ.

Okinawa Lite Electric Scooter
Image Credit: Buy2hands

DL ಮತ್ತು ನೋಂದಣಿ ಕೂಡ ಅಗತ್ಯವಿಲ್ಲದ EV ಮಾರುಕಟ್ಟೆಗೆ ಎಂಟ್ರಿ
ಮಾರುಕಟ್ಟೆಯಲ್ಲಿ ವಿಶೇಷವಾಗಿ ಎರಡು ವಿಧದ ಎರಡು ಸ್ಕೂಟರ್ ಗಳು ಲಭ್ಯವಿರುತ್ತದೆ. ಒಂದು ಕಡಿಮೆ ವೇಗದ Electric Scooter ಹಾಗೂ ಇನ್ನೊಂದು ಹೆಚ್ಚು ವೇಗದ Electric Scooter. ಮೋಟಾರು ವಾಹನ ನಿಯಮಗಳ ಪ್ರಕಾರ, 250W ಗಿಂತ ಕಡಿಮೆ ವಿದ್ಯುತ್ ಉತ್ಪಾದಿಸುವ ಮತ್ತು ಗರಿಷ್ಠ ವೇಗ ಗಂಟೆಗೆ 23 ಕಿಲೋಮೀಟರ್‌ ಗಿಂತ ಕಡಿಮೆ ಇರುವ ಎಲೆಕ್ಟ್ರಿಕ್ ವಾಹನಗಳಿಗೆ ಚಾಲನಾ ಪರವಾನಗಿ ಮತ್ತು ನೋಂದಣಿ ಅಗತ್ಯವಿರುದಿಲ್ಲ. ಸದ್ಯ ಮಾರುಕಟ್ಟೆಯಲ್ಲಿ ಇಂತಹ ವರ್ಗಕ್ಕೆ ಸೇರಿದ ಎಲೆಕ್ಟ್ರಿಕ್ ಸ್ಕೂಟರ್ ಒಂದು ಪರಿಚಯವಾಗಿದೆ. ಅದ್ಯಾವ ಎಲೆಕ್ಟ್ರಿಕ್ ಸ್ಕೂಟರ್ ಎಂದು ಯೋಚಿಸುತ್ತಿದ್ದೀರಾ..? ಇಲ್ಲಿದೆ ವಿವರ.

85 Km ಮೈಲೇಜ್ ಕೊಡುವ ಈ ಸ್ಕೂಟರ್ ಬೆಲೆ ಕೇವಲ 55 ಸಾವಿರ ಮಾತ್ರ
ಸದ್ಯ DL ಮತ್ತು ನೋಂದಣಿ ಕೂಡ ಅಗತ್ಯವಿಲ್ಲದ EV ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ. ಸದ್ಯ Hero Flash LA ನಿಮಗೆ ಉತ್ತಮ ಆಯ್ಕೆಯಾಗಿದೆ. ಇದು 250 ವ್ಯಾಟ್ BLDC ಮೋಟಾರ್ ಹೊಂದಿದ್ದು ಇದರ ಗರಿಷ್ಠ ವೇಗ ಗಂಟೆಗೆ 25 ಕಿಮೀ ಮತ್ತು ಈ ಸ್ಕೂಟರ್ ಒಂದೇ ಚಾರ್ಜ್‌ ನಲ್ಲಿ 85 ಕಿಮೀ ವ್ಯಾಪ್ತಿಯನ್ನು ನೀಡಲಿದೆ. ಮಾರುಕಟ್ಟೆಯಲ್ಲಿ ಹೀರೋ ಎಲೆಕ್ಟ್ರಿಕ್ ಫ್ಲ್ಯಾಶ್ ಬೆಲೆ 59,640 ರೂ. ಆಗಿದೆ.

Gemopai Ryder Electric Scooter
Image Credit: Navbharattimes

DL ಮತ್ತು ನೋಂದಣಿ ಅಗತ್ಯವಿಲ್ಲದ ಇನ್ನಿತರ ಎಲೆಕ್ಟ್ರಿಕ್ ಸ್ಕೂಟರ್ ಗಳ ವಿವರ
*Okinawa Lite
ಓಕಿನಾವಾ ಲೈಟ್‌ ನಲ್ಲಿ ಕಂಪನಿಯು 1.25 kWh ಬ್ಯಾಟರಿ ಮತ್ತು 250 W ಎಲೆಕ್ಟ್ರಿಕ್ ಮೋಟಾರ್ ಅನ್ನು ನೀಡಿದೆ. ಈ ಸ್ಕೂಟರ್ ಒಂದೇ ಚಾರ್ಜ್‌ನಲ್ಲಿ 60 ಕಿಮೀ ವ್ಯಾಪ್ತಿಯನ್ನು ನೀಡುತ್ತದೆ ಮತ್ತು ಅದರ ಬ್ಯಾಟರಿಯು ಸಂಪೂರ್ಣವಾಗಿ ಚಾರ್ಜ್ ಆಗಲು 4 ರಿಂದ 5 ಗಂಟೆಗಳನ್ನು ತೆಗೆದುಕೊಳ್ಳುತ್ತದೆ. ಮಾರುಕಟ್ಟೆಯಲ್ಲಿ ಓಕಿನಾವಾ ಲೈಟ್ ಬೆಲೆ ರೂ. 66,993 ಆಗಿದೆ.

*Gemopai Ryder
Gemopai Ryder ನಲ್ಲಿ ಕಂಪನಿಯು 250W ಎಲೆಕ್ಟ್ರಿಕ್ ಮೋಟಾರ್ ಅನ್ನು ಒದಗಿಸಿದೆ, ಇದು 1.7KW ಸಾಮರ್ಥ್ಯದ ಬ್ಯಾಟರಿಗೆ ಸಂಪರ್ಕ ಹೊಂದಿದೆ. ಈ ಎಲೆಕ್ಟ್ರಿಕ್ ಸ್ಕೂಟರ್ ಒಂದೇ ಚಾರ್ಜ್‌ನಲ್ಲಿ 100 ರಿಂದ 120 ಕಿಮೀ ವ್ಯಾಪ್ತಿಯನ್ನು ನೀಡುತ್ತದೆ. ಈ ಸ್ಕೂಟರ್ ನ ಬ್ಯಾಟರಿ 4 ಗಂಟೆಗಳಲ್ಲಿ ಚಾರ್ಜ್ ಆಗುತ್ತದೆ. ಮಾರುಕಟ್ಟೆಯಲ್ಲಿ ಜೆಮೊಪೈ ರೈಡರ್ ಬೆಲೆ ರೂ. 70,850 ಆಗಿದೆ.

Join Nadunudi News WhatsApp Group

Komaki XGT KM
Image Credit: Times Bull

*Komaki XGT KM
Komaki XGT KM ಎಲೆಕ್ಟ್ರಿಕ್ ಸದ್ಯ ಮಾರುಕಟ್ಟೆಯನ್ನು ಪ್ರವೇಶಿಸಿದೆ. ಈ ಸ್ಕೂಟರ್ 60V28Ah ಬ್ಯಾಟರಿಯನ್ನು ಹೊಂದಿದೆ. ಇದು 60 ರಿಂದ 65 ಕಿಮೀ ವ್ಯಾಪ್ತಿಯನ್ನು ನೀಡುತ್ತದೆ. ಇದರ ಗರಿಷ್ಠ ವೇಗ ಗಂಟೆಗೆ 25 ಕಿಮೀ ಆಗಿದ್ದು, ಬ್ಯಾಟರಿ 4 ಗಂಟೆಗಳಲ್ಲಿ ಚಾರ್ಜ್ ಆಗುತ್ತದೆ. ಮಾರುಕಟ್ಟೆಯಲ್ಲಿ Komaki XGT KM ಬೆಲೆ ರೂ. 56,890 ಆಗಿದೆ.

Join Nadunudi News WhatsApp Group