Hero: ಹೀರೋ ಬೈಕ್ ಖರೀದಿ ಮಾಡುವವರಿಗೆ ಬೇಸರದ ಸುದ್ದಿ, ದಿಡೀರ್ ಹೊಸ ಘೋಷಣೆ ಮಾಡಿದ ಹೀರೋ.

ಹೀರೋ ಕಂಪನಿ ತನ್ನ ಬೈಕ್ ಗಳ ಬೆಲೆಯನ್ನ ದಿಡೀರ್ ಏರಿಕೆ ಮಾಡಿದ್ದು ಇದು ಜನರ ಬೇಸರಕ್ಕೆ ಕಾರಣವಾಗಿದೆ.

Hero Motocorp Price Hike: ಇತ್ತೀಚಿಗೆ ದ್ವಿಚಕ್ರ ವಾಹನಗಳ ಬೇಡಿಕೆ ಹೆಚ್ಚುತ್ತಿದೆ. ದೇಶಿಯ ಮಾರುಕಟ್ಟೆಯಲ್ಲಿ ದ್ವಿಚಕ್ರ ವಾಹನಗಳು ಹೊಸ ಇತಿಹಾಸ ಸೃಷ್ಟಿಸಿವೆ ಎನ್ನಬಹುದು. ಅದರಲ್ಲಿ ಹೀರೊ ಕಂಪನಿಯ ದ್ವಿಚಕ್ರ ವಾಹನಗಳು ಹೆಚ್ಚು ಜನಪ್ರಿಯತೆ ಪಡೆದಿದೆ.

ಇಂದು ಜುಲೈ ಮೊದಲನೇ ದಿನ ಸಾಕಷ್ಟು ನಿಯಮಗಳು ಬದಲಾಗಲಿದೆ. ಅದರಲ್ಲೂ ಜನರಿಗೆ ಬೇಕಾಗುವ ಅಗತ್ಯ ವಸ್ತುಗಳ ಬೆಳೆಗಳಲ್ಲಿ ವ್ಯತ್ಯಾಸ ಕಾಣುವುದು ಸಾಮಾನ್ಯವಾಗಿದೆ. ಇದೀಗ ಇದೆ ಸೋಮವಾರದಿಂದ ಹೀರೊ ಕಂಪನಿಯ ದ್ವಿಚಕ್ರ ವಾಹನಗಳ ಬೆಲೆ ಹೆಚ್ಚಾಗಲಿದೆ.

Hero Motocorp Price Hike
Image Source: Bikewale

ಹೀರೊ ಕಂಪನಿಯ ದ್ವಿಚಕ್ರ ವಾಹನಗಳ ಬೆಲೆ ಹೆಚ್ಚಳ
ಹೀರೊ ಸ್ಪ್ಲೆಂಡರ್, ಎಕ್ಸ್ಟ್ರೀಮ್, ಕ್ಸೂಮ್ ದ್ವಿಚಕ್ರ ವಾಹನಗಳು ಸೋಮವಾರದಿಂದ ದುಬಾರಿ ಆಗಲಿವೆ. ಹೀರೊ ಮೋಟೊಕಾರ್ಪ್ ಕಂಪನಿ ತನ್ನ ಮೋಟಾರ್ ಸೈಕಲ್, ದ್ವಿಚಕ್ರ ವಾಹನದ ಬೆಲೆಯನ್ನು ಜುಲೈ 3 ರಂದು ಏರಿಸುವುದಾಗಿ ಘೋಷಿಸಿದೆ. ದೇಶದ ಅತಿದೊಡ್ಡ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ ಮೋಟೊಕಾರ್ಪ್ ತನ್ನ ವಾಹನಗಳ ಬೆಲೆಯನ್ನು 1.5 ರಷ್ಟು ಏರಿಸಲಿದೆ ಎನ್ನಲಾಗುತ್ತಿದೆ.

ಹೆಚ್ಚಾದ ದ್ವಿಚಕ್ರ ವಾಹನಗಳ ಬೇಡಿಕೆ
ಇತ್ತೀಚಿಗೆ ದ್ವಿಚಕ್ರ ವಾಹನಗಳ ಬೇಡಿಕೆ ಹೆಚ್ಚಾಗಿದೆ. ಮಾರುಕಟ್ಟೆಯಲ್ಲಿ ದ್ವಿಚಕ್ರ ವಾಹನಗಳು ಅತಿ ಹೆಚ್ಚು ಸೇಲ್ ಕಾಣುತ್ತಿದೆ. ಈ ಸಂದರ್ಭದಲ್ಲಿ ದ್ವಿಚಕ್ರ ವಾಹನಗಳ ಬೆಲೆ ಏರಿಕೆ ಆಗುವುದು ಸಹಜವಾಗಿದೆ. ಮೋಟಾರ್ ಸೈಕಲ್ ಗಳು ಮತ್ತು ಬೈಕ್ ಗಳ ಬೆಲೆಗಳ ಮೇಲ್ಮುಖ ಪರಿಷ್ಕರಣೆಯು ಬೆಲೆ ಪರಿಶೀಲನೆಯ ಭಾಗವಾಗಿದೆ.

Hero Motocorp Price Hike
Image Source: Bikewale

ಬೆಲೆಯ ಏರಿಳಿತವು ಬೆಲೆಯ ಸ್ಥಾನಿಕರಣ, ಇನ್ಪುಟ್ ವೆಚ್ಚಗಳು ಮತ್ತು ವ್ಯವಹಾರದ ಅಗತ್ಯತೆಗಳಂತಹ ಅಂಶಗಳನ್ನು ಆಧರಿಸಿದೆ ಎಂದು ಮೋಟೊಕಾರ್ಪ್ ಕಂಪನಿಯು ಹೇಳಿದೆ. ದ್ವಿಚಕ್ರ ವಾಹನದ ಗ್ರಾಹಕರಿಗೆ ಪರಿಣಾಮವನ್ನು ತಗ್ಗಿಸಲು ಹೆಚ್ಚು ನವೀನ ಹಣಕಾಸು ಕಾರ್ಯಕ್ರಮಗಳನ್ನು ನೀಡುವ ಮೂಲಕ ಬೇರೆ ಏರಿಕೆಯನ್ನು ಸರಿದೂಗಿಸಲು ಗುರಿಯನ್ನು ಹೊಂದಿದೆ ಎಂದು ಹೀರೊ ಮೋಟೊಕಾರ್ಪ್ ಕಂಪನಿ ಹೇಳಿದೆ.

Join Nadunudi News WhatsApp Group

Join Nadunudi News WhatsApp Group