Hombale New Film: ಶಾರುಖ್ ಖಾನ್ ಜೊತೆ ನಟಿಸಲಿದ್ದಾರೆ ರಿಷಬ್ ಶೆಟ್ಟಿ ಮತ್ತು ರಕ್ಷಿತ್ ಶೆಟ್ಟಿ.

Hombale New Film: ರಿಷಬ್ ಶೆಟ್ಟಿ (Rishab Shetty) ನಿರ್ದೇಶಿಸಿರುವ ಪ್ರತಿಯೊಂದು ಚಿತ್ರವು ಕನ್ನಡದಲ್ಲಿ ಹೊಸ ಹೊಸ ದಾಖಲೆ ಮೂಡಿಸುತ್ತಿದೆ. ಅದೇ ರೀತಿ ರಿಷಬ್ ಶೆಟ್ಟಿ ನಟನೆಯ ಕಾಂತಾರ ಸಿನಿಮಾ ವಿಶ್ವದಾದ್ಯಂತ ಹೊಸ ದಾಖಲೆಯನ್ನು ಸ್ರಷ್ಟಿಸಿತು. ಈಗ ರಿಷಬ್ ಮತ್ತು ರಕ್ಷಿತ್ ಒಟ್ಟಾಗಿ ಇದೀಗ ಅವರು ಹೊಂಬಾಳೆ ಫಿಲಂಸ್ (Hombale Films) ಜೊತೆ ಹೊಸ ಸಿನಿಮಾವನ್ನು ಮಾಡಲು ಮುಂದಾಗಿದ್ದಾರೆ.

hombale production new film announce
Image credit: hindustantimes

ಶಾರುಖ್ ಖಾನ್ ಜೊತೆ ರಿಷಬ್ ಶೆಟ್ಟಿ
ಸ್ಯಾಂಡಲ್ ವುಡ್ (Sandalwood) ನಲ್ಲಿ ಅತ್ಯದ್ಭುತ ಸಿನಿಮಾಗಳನ್ನೂ ಮಾಡಿ ಭಾರತೀಯ ಸಿನಿರಂಗದಲ್ಲಿ ಪ್ರಖ್ಯಾತ ಚಲನ ಚಿತ್ರ ನಿರ್ಮಾಣ ಸಂಸ್ಥೆಯಾಗಿ ಹೊರಹೊಮ್ಮಿರುವ ಹೊಂಬಾಳೆ ಸಂಸ್ಥೆ ಸದ್ಯ ಬಾಲಿವುಡ್ (Bollywood) ಅಂಗಳಕ್ಕೆ ಕಾಲಿಟ್ಟಿದೆ.

ಬಾಲಿವುಡ್ ಬಾದ್ ಷಾ ಶಾರುಖ್ ಖಾನ್ ಜೊತೆ ಸಿನಿಮಾ ಮಾಡಲು ಕನ್ನಡದ ಹೊಂಬಾಳೆ ಫಿಲಂಸ್ ತಂಡ ಮುಂದಾಗಿದೆ. ಭಾರತೀಯ ಸಿನಿ ರಂಗಕ್ಕೆ ಕೆಜಿಎಫ್, ಕಾಂತಾರಾದಂತಹ ಬ್ಲಾಕ್ಬಸ್ಟರ್ ಸಿನಿಮಾಗಳ ಮೂಲಕ ಹೊಂಬಾಳೆ ಫಿಲಂಸ್ ಅವರು ಗಮನಸೆಳೆದಿದ್ದಾರೆ.

Hombale Films has decided to make a new movie with Shah Rukh Khan
Image Credit: gqindia

ಇದೀಗ ಹೊಂಬಾಳೆ ಫಿಲಂಸ್ ಶಾರುಖಾನ್ ಜೊತೆ ಸಿನಿಮಾ ಮಾಡಲು ಸಿದ್ಧವಾಗಿದೆ. ಇನ್ನೊಂದು ವಿಶೇಷ ಏನೆಂದರೆ ಹೊಂಬಾಳೆ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗುತ್ತಿರುವ, ಈ ಹಿಂದಿ ಸಿನಿಮಾಗೆ ರೋಹಿತ್ ಶೆಟ್ಟಿ ನಿರ್ದೇಶನ ಮಾಡಲಿದ್ದಾರೆ.

Join Nadunudi News WhatsApp Group

ಕುತೂಹಲ ಏನೆಂದರೆ ಶಾರುಖಾನ್ ಜೊತೆ ರಕ್ಷಿತ್ ಶೆಟ್ಟಿ (Rakshith Shetty) ಮತ್ತು ರಿಷಬ್ ಶೆಟ್ಟಿ ನಟಿಸಲಿದ್ದಾರೆ ಎಂದು ಹೇಳಲಾಗಿದೆ. ಈಗಾಗಲೇ ಶಾರುಖ್ ಖಾನ್ (Sharuk Kan) ಸಿನಿಮಾದಲ್ಲಿ ರಿಷಬ್ ಶೆಟ್ಟಿ ಮತ್ತು ರಕ್ಷಿತ್ ಶೆಟ್ಟಿ ಎಂಟ್ರಿಗೆ ರೋಹಿತ್ ಶೆಟ್ಟಿ (Rohith Shetty) ಅವರು ಸ್ಪೆಷಲ್ ಪಾತ್ರಗಳನ್ನು ಕ್ರಿಯೇಟ್ ಮಾಡಿದ್ದಾರೆ.

Actors Rakshit Shetty and Rishabh Shetty to do another Fan India film with Hombale Films
Image Credit: timesofindia.indiatimes

ಇನ್ನು ಕೆಲವೇ ದಿನಗಳಲ್ಲಿ ಈ ಮೇಘಾ ಆಫರ್ ಅನ್ನು ಹೊಂಬಾಳೆ ಫಿಲಂಸ್ ಅನೌನ್ಸ್ ಮಾಡಲಿದೆ ಎನ್ನಲಾಗಿದೆ. ಶಾರುಖ್ ಖಾನ್ ಜೊತೆ ರಿಷಬ್ ಶೆಟ್ಟಿ ಮತ್ತು ರಕ್ಷಿತ್ ಶೆಟ್ಟಿ ನಟಿಸುತ್ತಿರುವುದು ಅಭಿಮಾನಿಗಳಿಗೆ ಖುಷಿಯ ವಿಚಾರ. ಈ ಸುದ್ದಿ ಕೇಳಿದ ಅಭಿಮಾನಿಗಳು ಈ ಸಿನಿಮಾದ ನಿರೀಕ್ಷೆಯಲ್ಲಿದ್ದಾರೆ.

Join Nadunudi News WhatsApp Group