Subsidy Loan: ಮಧ್ಯಮ ವರ್ಗದ ಜನರಿಗಾಗಿ ಇನ್ನೊಂದು ಸಬ್ಸಿಡಿ ಯೋಜನೆ ಜಾರಿಗೆ ತಂದ ಮೋದಿ, 50 ಲಕ್ಷದ ಸಬ್ಸಿಡಿ ಸಾಲ ಸಿಗಲಿದೆ.

ಮಧ್ಯಮ ವರ್ಗದವರಿಗೆ ವಿಶೇಷ ಯೋಜನೆ ಪರಿಚಯಿಸಲು ನಿರ್ಧರಿಸಿದ ಮೋದಿ ಸರ್ಕಾರ.

Central Govt New Scheme: ದೇಶದಲ್ಲಿ ಕೇಂದ್ರ ಸರ್ಕಾರ ಜನಸಾಮಾನ್ಯರಿಗಾಗಿ ವಿವಿಧ ಕಲ್ಯಾಣ ಯೋಜನೆಗಳನ್ನು ಅನುಷ್ಠಾನಗೊಳಿಸಿದೆ. ದೇಶದ ಬಡ ಜನರು ಮೋದಿ ಸರ್ಕಾರ ಯೋಜನೆಗಳ ಲಾಭವನ್ನು ಪಡೆಯುತ್ತಿದ್ದಾರೆ.

ಸದ್ಯ ಮೊನ್ನೆಯಷ್ಟೇ ನಡೆದ ವಿಧಾನಸಭಾ ಚುನಾವಣೆಯಲ್ಲಿ ಮೂರು ರಾಜ್ಯದಲ್ಲಿ BJP ತನ್ನ ಅಧಿಕಾರವನ್ನು ಪಡೆದುಕೊಂಡಿದೆ. ವಿಜಯ ಸಾಧಿಸಿದ ಖುಷಿಯಲ್ಲಿದ್ದ BJP ಸರ್ಕಾರ ವಿವಿದ ಯೋಜನೆಗಳನ್ನು ಪರಿಚಯಿಸಲು ಮುಂದಾಗಿದೆ. ಈಗಾಗಲೇ ಸಾಕಷ್ಟು ಯೋಜನೆಗಳನ್ನು ಪರಿಚಯಿಸಿರುವ ಮೋದಿ ಸರ್ಕಾರ ಇದೀಗ ಮಧ್ಯಮ ವರ್ಗದವರಿಗೆ ವಿಶೇಷ ಯೋಜನೆಯನ್ನು ಪರಿಚಯಿಸಲು ನಿರ್ಧರಿಸಿದೆ.

Central Govt New Scheme
Image Credit: Goodreturns

ಮಧ್ಯಮ ವರ್ಗದ ಎಲ್ಲಾ ಜನರಿಗೆ ಸಿಹಿಸುದ್ದಿ ನೀಡಿದ ನರೇಂದ್ರ ಮೋದಿ
ದೇಶದಲ್ಲಿ ಮೋದಿ ಸರ್ಕಾರ ವಿವಿಧ ರಾಜ್ಯದಲ್ಲಿ ಬಹುಮತದಿಂದ ಅಧಿಕಾರವನ್ನು ಪಡೆದುಕೊಂಡಿದೆ. ಬಿಜೆಪಿ ಸರ್ಕಾರ ಇದೀಗ ಮುಂಬರುವ 2024 ರ ಲೋಕಸಭಾ ಚುನಾವಣಾ ಸಿದ್ದತೆಯನ್ನು ನಡೆಸುತ್ತಿದೆ. ಇನ್ನು ಲೋಕಸಭಾ ಚುನಾವಣಾ ಮುನ್ನ ಒಂದಿಷ್ಟು ಯೋಜನೆಗಳನ್ನು ಬಡವರಿಗಾಗಿ ಜಾರಿಗೆ ತರಲು ಚಿಂತನೆ ನಡೆಸಿದೆ. ಮಧ್ಯಮ ವರ್ಗದ ಜನರಿಗೆ ಮನೆ ಉಡುಗೊರೆಯಾಗಿ ನೀಡುವ ಮೂಲಕ ಮದ್ಯವ ವರ್ಗದವರಿಗೆ ಕೇಂದ್ರ ಸರ್ಕಾರ ಸಿಹಿ ಸುದ್ದಿ ನೀಡಿದೆ.

ಕೇಂದ್ರದ ಇನ್ನೊಂದು ಯೋಜನೆ ಘೋಷಣೆ
ಸದ್ಯ ಮಧ್ಯಮ ವರ್ಗದ ಜನರಿಗೆ ವಸತಿ ಯೋಜನೆಯಡಿ ಸಾಲದ ಬಡ್ಡಿಗೆ ಸಬ್ಸಿಡಿ ನೀಡಲು ಸರ್ಕಾರ ಮುಂದಾಗಿದೆ. ಸುದ್ದಿ ಸಂಸ್ಥೆ ರಾಯಿಟರ್ಸ್ ವರದಿಯಲ್ಲಿ 600 ಶತಕೋಟಿ ರೂಪಾಯಿಗಳು  5 ವರ್ಷಗಳಲ್ಲಿ ಖರ್ಚು ಮಾಡಲಾಗುವುದು ಎಂದು ವರದಿ ಮಾಡಿದೆ. 9 ಲಕ್ಷದವರೆಗಿನ ಸಾಲಗಳಿಗೆ ವಾರ್ಷಿಕ 3 ರಿಂದ 6.5% ಬಡ್ಡಿ ಸಬ್ಸಿಡಿಯನ್ನು ಒದಗಿಸಲು ಯೋಜನೆಯು ರೂಪಿಸಲಾಗಿದೆ. ಇದು 20 ವರ್ಷಗಳ ಅವಧಿಗೆ 50 ಲಕ್ಷ ರೂ.ಗಿಂತ ಕಡಿಮೆ ಗೃಹ ಸಾಲವನ್ನು ಕವರ್ ಮಾಡುವ ನಿರೀಕ್ಷೆಯಿದೆ. ಯೋಜನೆಯನ್ನು 2028 ರ ವರೆಗೆ ಜಾರಿಗೊಳಿಸಲು ಯೋಜಿಸಲಾಗಿದೆ.

Home Loan Interest Subsidy Scheme
Image Credit The Economic Times

ಕೇಂದ್ರದಿಂದ ಅಧಿಕೃತ ಘೋಷಣೆ ಯಾವಾಗ..?
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಫೆಬ್ರವರಿಯಲ್ಲಿ ಮಧ್ಯಂತರ ಬಜೆಟ್ ಮಂಡಿಸಲಿದ್ದಾರೆ. ಸರ್ಕಾರ ಈ ಯೋಜನೆಯನ್ನು ಮಧ್ಯಂತರ ಬಜೆಟ್‌ ನಲ್ಲಿ ಘೋಷಿಸಬಹುದು ಎಂದು ಅಂದಾಜಿಸಲಾಗಿದೆ. ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಈ ಬಜೆಟ್‌ ನಲ್ಲಿ ಘೋಷಣೆ ಮಾಡುವ ಸಾಧ್ಯತೆಗಳಿವೆ. ಇದೆ ಸಮಯದಲ್ಲಿ ಪಿಎಂ ಕಿಸಾನ್ ಯೋಜನೆಯ ಕಂತು ಹೆಚ್ಚಿಸುವ ಬಗ್ಗೆಯೂ ಘೋಷಣೆ ಮಾಡಬಹುದು ಎನ್ನುವ ಬಗ್ಗೆ ವರದಿಯಾಗಿದೆ. ಇನ್ನು ಕೇಂದ್ರದಿಂದ ಯೋಜನೆಯ ಬಗ್ಗೆ ಅಧಿಕೃತ ಘೋಷಣೆ ಬರುವವರಿಗೆ ಕಾದು ನೋಡಬೇಕಿದೆ.

Join Nadunudi News WhatsApp Group

Join Nadunudi News WhatsApp Group