Honda Evelate: ಹೋಂಡಾ ಕಂಪನಿಯ ಜನಪ್ರಿಯ evelate SUV ಕಾರ್ ಅತೀ ಕಡಿಮೆ ಬೆಲೆಯಲ್ಲಿ ಮಾರುಕಟ್ಟೆಗೆ ಬಿಡುಗಡೆ.

ಕಡಿಮೆ ಬೆಲೆಗೆ ಮಾರುಕಟ್ಟೆಗೆ ಬಿಡುಗಡೆಯಾದ ಹೋಂಡಾ ಎಲಿವೇಟ್ ಕಾರ್.

Honda Elevate 2023: ದೇಶಿಯ ಮಾರುಕಟ್ಟೆಯಲ್ಲಿ ಕಾರ್ (Car) ಗಳ ಮೇಲಿನ ಬೇಡಿಕೆ ಹೆಚ್ಚುತ್ತಿದೆ. ಗ್ರಾಹಕರ ಬೇಡಿಕೆ ಹೆಚ್ಚುತ್ತಿದ್ದಂತೆ ಹೊಸ ಹೊಸ ಮಾದರಿಯ ಕಾರ್ ಗಳನ್ನೂ ಮಾರುಕಟ್ಟೆಯಲ್ಲಿ ಪರಿಚಯಿಸಲಾಗುತ್ತಿದೆ. ಇದೀಗ ಭಾರತೀಯ ಮಾರುಕಟ್ಟೆಗೆ ಹೊಸ ಹೊಸ ಮಾದರಿಯ ಕಾರ್ ಗಳು ಬಿಡುಗಡೆ ಆಗುತ್ತಲೇ ಇದೆ.

ಪ್ರತಿಷ್ಠಿತ ವಾಹನ ತಯಾರಕ ಕಂಪನಿಯಾದ ಹೋಂಡಾ ಕಾರ್ಸ್ ಇನ್ ಇಂಡಿಯಾ (Honda Cars In India) ಹೊಸ ಮಾದರಿಯ ಕಾರ್ ಅನ್ನು ಬಿಡುಗಡೆಮಾಡಲಿದೆ. ಹೋಂಡಾ ಕಂಪನಿ ಈಗಾಗಲೇ ಸಾಕಷ್ಟು ಹೊಸ ಮಾದರಿಯ SUV ಕಾರ್ ಗಳನ್ನೂ ಬಿಡುಗಡೆ ಮಾಡಿದೆ. ಆದರೆ ಇದೀಗ ಬಿಡುಗಡೆಗೊಳ್ಳಲಿರುವ ಹೊಸ ಮಾದರಿಯ SUV ಕಾರ್ ಬಹಳ ವಿಶೇಷವಾಗಿದೆ. 

The Honda Elevate car has a powerful engine.
Image credit: postsen

ಹೋಂಡಾ ಎಲಿವೇಟ್ ಕಾರ್
ಹೋಂಡಾ ಎಲಿವೇಟ್ ಕಾರ್ ಶಕ್ತಿಶಾಲಿ ಎಂಜಿನ್ ಅನ್ನು ಹೊಂದಿದೆ. ಈ ಕಾರ್ 1.5 ಲೀಟರ್ DOHC ಪೆಟ್ರೋಲ್ ಎಂಜಿನ್ ಅನ್ನು ಹೊಂದಿದ್ದು, 6,600rpm ನಲ್ಲಿ 119.4 bhp ಯ ಗರಿಷ್ಠ ಶಕ್ತಿಯನ್ನು ಮತ್ತು 4,300rpm ನಲ್ಲಿ 145 Nm ನ ಗರಿಷ್ಠ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. SUV ಯೊಂದಿಗೆ 6-ಸ್ಪೀಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್ ಮತ್ತು CVT ಗೇರ್‌ಬಾಕ್ಸ್ ಅನ್ನು ನೀಡುತ್ತದೆ.

The Honda Elevate car has a powerful engine.
Image Credit: gaadiwaadi

ಹೋಂಡಾ ಎಲಿವೇಟ್ ಕಾರ್ 4,312 ಮಿಮೀ ಉದ್ದವಾಗಿದ್ದು, ಅಗಲ 1,790 ಎಂಎಂ ಮತ್ತು ಎತ್ತರ 1,650 ಎಂಎಂ. ಮತ್ತು ಇದರ ವ್ಹೀಲ್ ಬೇಸ್ 2650 ಎಂಎಂ. ಆಗಿದೆ.

ಇದು 7-ಇಂಚಿನ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ವೈರ್‌ಲೆಸ್ ಸ್ಮಾರ್ಟ್‌ಫೋನ್ ಏಕೀಕರಣದೊಂದಿಗೆ 10.25-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಯುನಿಟ್, ರಿಯರ್-ವ್ಯೂ ಕ್ಯಾಮೆರಾ, ಲೇನ್-ವಾಚ್ ಕ್ಯಾಮೆರಾ ಮತ್ತು ಕನೆಕ್ಟ್-ಕಾರ್ ಮುಂತಾದ ಹಲವು ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಕಾರ್ ಚಲಾಯಿಸುವವರ ರಕ್ಷಣೆಗಾಗಿ 6 ​​ಏರ್‌ ಬ್ಯಾಗ್‌ ಗಳನ್ನೂ ನೀಡಲಾಗಿದೆ.

Join Nadunudi News WhatsApp Group

Join Nadunudi News WhatsApp Group