Honda New: 67 ಕಿಲೋಮೀಟರ್ ಮೈಲೇಜ್ ಕೊಡುವ ಇನ್ನೆರಡು ಹೋಂಡಾ ಬೈಕ್ ಲಾಂಚ್, ದಾಖಲೆ ಬುಕಿಂಗ್.

ಇದೀಗ ಹೋಂಡಾ ಕಂಪನಿ ಎರಡು ಹೊಸ ಮಾದರಿಯ ಬೈಕ್ ಅನ್ನು ಬಿಡುಗಡೆ ಮಾಡಿದೆ.

Honda Monkey And Honda Super Cub C125: ದೇಶದ ಪ್ರತಿಷ್ಠಿತ ದ್ವಿಚಕ್ರ ವಾಹನ ತಯಾರಕ ಕಂಪೆನಿಗಳಲ್ಲಿ HONDA ಕೂಡ ಒಂದು. ಅತಿ ಹೆಚ್ಚು ಮೈಲೇಜ್ ನೀಡುವ ಬೈಕ್ ನ ಪಟ್ಟಿಯಲ್ಲಿ ಹೋಂಡಾ ಮೊದಲ ಸ್ಥಾನದಲ್ಲಿದೆ ಎನ್ನಬಹುದು. ಇನ್ನು ಹೋಂಡಾ ತನ್ನ ನೂತನ ಮಾದರಿಯಲ್ಲಿ ಹೊಸ ಹೊಸ ಸುಧಾರಿತ ವೈಶಿಷ್ಟ್ಯಗಳನ್ನು ಅಳವಡಿಸುವ ಮೂಲಕ ತನ್ನ ಬೈಕ್ ಗಳಿಗೆ ಹೊಸ ವಿನ್ಯಾಸವನ್ನು ನೀಡುತ್ತಿದೆ.

ಹೋಂಡಾ ಬೈಕ್ ಗಳು ತನ್ನ ವಿಭಿನ್ನ ವಿಭಿನ್ನ ಲುಕ್ ನ ಮೂಲಕವೇ ಗ್ರಾಹಕರನ್ನು ಸೆಳೆಯಲಿದೆ. ಸದ್ಯ ಮಾರುಕಟ್ಟೆಯಲ್ಲಿ ಹೊಂಡ ಕಂಪನಿಯ SP 125 ಬೈಕ್ ಹೆಚ್ಚಿನ ಬೇಡಿಕೆ ಪಡೆದುಕೊಂಡಿದೆ. ಮಾರುಕಟ್ಟೆಯಲ್ಲಿ Honda SP 125 ಬೈಕ್ ಹೆಚ್ಚಿನ ಬೇಡಿಕೆ ಪಡೆಯುತ್ತಿರುವ ಬೆನ್ನಲ್ಲೇ ಇದೀಗ ಕಂಪನಿ ತನ್ನ ಎರಡು ಮಾದರಿಯ ಬೈಕ್ ಗಳನ್ನೂ ಬಿಡುಗಡೆಗೊಳಿಸಲು ಸಿದ್ಧತೆ ನಡೆಸುತ್ತಿದೆ.

Honda Monkey Bike
Image Credit: Rushlane

Honda Monkey Bike
ಸದ್ಯ ಹೋಂಡಾ ತನ್ನ ಹೊಚ್ಚ ಹೊಸ 124ಸಿಸಿ ಬೈಕ್ ಅನ್ನು ಮಾರುಕಟ್ಟೆಗೆ ಪರಿಚಯಿಸಲಿದೆ. ಈ ಹೋಂಡಾ 124ಸಿಸಿ ಬೈಕ್ ಇನ್ನಿತರ ಹೊಸ ಮಾದರಿಯ ಬೈಕ್ ಗಳಿಗೆ ಬಾರಿ ಪೈಪೋಟಿ ನೀಡಲಿದೆ. ಇದೀಗ ಕಂಪನಿಯು Honda Monkey ಹೆಸರಿನ ಲೈಟ್ ವೈಟ್ ಬೈಕ್ ಅನ್ನು ಬಿಡುಗಡೆ ಮಾಡಲಿದೆ. ಹೋಂಡಾ ಮಂಕಿ ಸ್ಪೆಷಲ್ ಎಡಿಷನ್ ಬೈಕ್ ಬುಲೆಟ್ ನ ವಿನ್ಯಾಸವನ್ನು ಹೊಲಲಿದೆ. ಹೊಚ್ಚ ಹೊಸ ಹೋಂಡಾ ಮಂಕಿ ಸ್ಪೆಷಲ್ ಎಡಿಷನ್ ಬೈಕ್ ಭಾರತೀಯ ಮಾರುಕಟ್ಟೆಯಲ್ಲಿ 2.59 ಲಕ್ಷ ರೂ. ಅನ್ನು ನಿಗದಿಪಡಿಸಲಾಗಿದೆ.

Honda Monkey ಎಂಜಿನ್ ಮತ್ತು ಮೈಲೇಜ್
Honda Monkey ಬೈಕ್ 2 ವೆಲ್ಡ್, ಏರ್ ಕೂಲ್ಡ್ ಮೋಟಾರ್ ಎಂಜಿನ್ ಹೊಂದಿದ್ದು, ಗರಿಷ್ಟ 9.2 bhp ಮತ್ತು 11Nm ಗರಿಷ್ಟ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. Honda Monkey ಬೈಕ್ 5.6 ಲೀಟರ್ ಇಂಧನ ಸಾಮರ್ಥ್ಯವನ್ನು ಹೊಂದಿದೆ. ಇನ್ನು ಎಬಿಎಸ್ ಬ್ರೇಕ್, 12 ಇಂಚಿನ ವೀಲ್ ಹೊಂದಿದೆ. ಈ ಬೈಕ್ ಒಂದು ಲೀಟರ್ ಗೆ 67 ಕಿಲೋಮೀಟರ್ ಮೈಲೇಜ್ ನೀಡಲಿದೆ. ಈ ಬೈಕ್ 104 ಕೆಜಿ ತೂಕವನ್ನು ಹೊಂದಿದ್ದು ಸುಲಭವಾಗಿ ರೈಡಿಂಗ್ ಮಾಡಬಹುದಾಗಿದೆ.

Honda Super Cub C125
Image Credit: Indiamart

Honda Super Cub C125
ಹೋಂಡಾ ತನ್ನ 124cc ಮಂಕಿ ಬೈಕ್ ನೊಂದಿಗೆ Honda Super Cub C125 ಬೈಕ್ ಅನ್ನು ಕೂಡ ಪರಿಚಯಿಸಲಿದೆ. ಈ ಬೈಕ್ ನಲ್ಲಿ 124cc ಸಿಂಗಲ್ ಸಿಲಿಂಡರ್ ಎಂಜಿನ್ ಅನ್ನು ಹೊಂದಿದ್ದು ಪ್ರತಿ ಲೀಟರ್ ಗೆ 66 ಕಿಲೋಮೀಟರ್ ಮೈಲೇಜ್ ನೀಡಲಿದೆ. ಇನ್ನು ಈ ಬೈಕ್ 9.5 bhp ಮತ್ತು ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದ್ದು, ಮಾರುಕಟ್ಟೆಯಲ್ಲಿ ಸರಿಸುಮಾರು 1.05 ಲಕ್ಷ ಬೆಲೆಯಲ್ಲಿ ಲಭ್ಯವಾಗಲಿದೆ.

Join Nadunudi News WhatsApp Group

Honda Super Cub C125 ಆಕರ್ಷಕ ಫೀಚರ್
Honda Super Cub C125 ಬೈಕ್ ರೆಟ್ರೋ ಸ್ಟೈಲ್ ನ ಮೂಲಕ ಎಲ್ಲರ ಗಮನ ಸೆಳೆಯಲಿದೆ. ಈ ಬೈಕ್ Stepped frame, clutchless four-speed manual transmission and lightweight construction, Round Headlight ,17-Inch Cast Alloy, Wheels , Tubeless Tyres , Electric Seat Opener , Smart Key ಫೀಚರ್ ಅನ್ನು ಅಳವಡಿಸಲಾಗಿದೆ.

Join Nadunudi News WhatsApp Group