Honda SP 125: ಹೋಂಡಾ SP 125 ಬೆಲೆ ಎಷ್ಟು ಮತ್ತು ಮತ್ತು ತಿಂಗಳ EMI ಎಷ್ಟು ನೋಡಿ…? ಭಾರ್ಜಾರಿ ಮೈಲೇಜ್

ಹೋಂಡಾ SP 125 ಖರೀದಿಗೆ EMI ಆಯ್ಕೆ ಹೇಗಿದೆ ಗೊತ್ತಾ...?

Honda SP 125 Bike EMI Plan: ಸದ್ಯ ದೇಶಿಯ ಮಾರುಕಟ್ಟೆಯಲ್ಲಿ Petrol ಬೆಲೆಯಂತೂ ಬಾರಿ ಹೆಚ್ಚುತ್ತಿದೆ. ಹೀಗಾಗಿ ಜನರು ಹೆಚ್ಚಿನ Mileage  ನೀಡುವಂತಹ ವಾಹನಗಳನ್ನು ಖರೀದಿಸಲು ಬಯಸುತ್ತಾರೆ. ಇನ್ನು ಭಾರತೀಯ ಆಟೋ ವಲಯದ ಕಂಪನಿಗಳು ಹೆಚ್ಚಿನ Mileage ನೀಡುವ Bike ಗಳು ಕಡಿಮೆ ಬೆಲೆಯಲ್ಲಿ ಪರಿಚಯಿಸುತ್ತ ಇರುತ್ತದೆ. ನೀವು ಮಾರುಕಟ್ಟೆಯಲ್ಲಿ ಕಡಿಮೆ ಬಜೆಟ್ ನಲ್ಲಿ ಹೆಚ್ಚು Mileage ನೀಡುವಂತಹ ಬೈಕ್ ಗಳನ್ನೂ ಖರೀದಿಸಬಹುದಾಗಿದೆ.

ಇನ್ನು ದೇಶದ ಜನಪ್ರಿಯ ಕಂಪನಿಯಾಗಿ ಗುರುತಿಸಿಕೊಂಡಿರುವ HONDA ಕಂಪನಿಯ SP 125 Bike ನಿಮಗೆ ಬಜೆಟ್ ಸ್ನೇಹಿಯಾಗಲಿದೆ. ನೀವು ಈ ಜನಪ್ರಿಯ ಬೈಕ್ ಅನ್ನು ಖರೀದಿಸಬಹುದು. ಈ ಬೈಕ್ ಅನ್ನು ಖರೀದಿಸುವ ಯೋಜನೆ ನಿಮಲ್ಲಿದ್ದರೆ ನಾವೀಗ ಈ ಲೇಖನದಲ್ಲಿ Honda SP 125 Bike ನ ಹಣಕಾಸು ಯೋಜನೆಗಳ ಬಗ್ಗೆ ಮಾಹಿತಿ ನೀಡಲಿದ್ದೇವೆ. ನೀವು ಕಡಿಮೆ EMI ಪಾವತಿಯೊಂದಿಗೆ ಈ ಲೇಟೆಸ್ಟ್ ಮಾಡೆಲ್ ಬೈಕ್ ಅನ್ನು ನಿಮ್ಮದಾಗಿಸಿಕೊಳ್ಳಬಹುದು.

Honda SP 125 Bike
Image Credit: Indiamart

ಭರ್ಜರಿ 60 Km ಮೈಲೇಜ್ ನೀಡಲಿದೆ ಈ ಬೈಕ್
ಹೊಸ ಹೋಂಡಾ SP 125 ಬೈಕ್ 123.94 cc ಏರ್-ಕೂಲ್ಡ್ ಸಿಂಗಲ್ ಸಿಲಿಂಡರ್ ಪೆಟ್ರೋಲ್ ಎಂಜಿನ್‌ ನಿಂದ ನಿಯಂತ್ರಿಸಲ್ಪಡುತ್ತದೆ. ಇದು 10.87 PS ಗರಿಷ್ಠ ಶಕ್ತಿ ಮತ್ತು 10.8 Nm ಪೀಕ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇದು 5-ಸ್ಪೀಡ್ ಗೇರ್‌ ಬಾಕ್ಸ್ ಅನ್ನು ಸಹ ಪಡೆಯುತ್ತದೆ ಮತ್ತು 60 kmpl ವರೆಗೆ ಮೈಲೇಜ್ ನೀಡುತ್ತದೆ.

ಈ ಮೋಟಾರ್ ಸೈಕಲ್ ಹತ್ತಾರು ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಎಲ್ಇಡಿ ಹೆಡ್ಲೈಟ್, ಪೂರ್ಣ ಡಿಜಿಟಲ್ ಎಲ್ಸಿಡಿ ಉಪಕರಣ ಕನ್ಸೋಲ್, ಸೈಡ್-ಸ್ಟ್ಯಾಂಡ್ ಎಂಜಿನ್ ಕಟ್-ಆಫ್ ಫಂಕ್ಷನ್, ಸೈಲೆಂಟ್ ಸ್ಟಾರ್ಟರ್ ವೈಶಿಷ್ಟ್ಯಗಳು ಸೇರಿದಂತೆ ಇನ್ನು ಹಲವಾರು ವೈಶಿಷ್ಟ್ಯಗಳಿವೆ. ಇದು ಇಂಪೀರಿಯಲ್ ರೆಡ್ ಮೆಟಾಲಿಕ್, ಬ್ಲಾಕ್, ಪರ್ಲ್ ಸೈರನ್ ಬ್ಲೂ ಸೇರಿದಂತೆ ವಿವಿಧ ಬಣ್ಣದ ಆಯ್ಕೆಗಳಲ್ಲಿ ಲಭ್ಯವಿದೆ.

Honda SP 125 Bike EMI Plan
Image Credit: Taazatimes360

ಹೋಂಡಾ SP 125 ಖರೀದಿಗೆ EMI ಆಯ್ಕೆ ಹೇಗಿದೆ ಗೊತ್ತಾ…?
•ಹೋಂಡಾ SP 125 ಮೋಟಾರ್‌ ಸೈಕಲ್ ಮೂರು ರೂಪಾಂತರಗಳೊಂದಿಗೆ ಗ್ರಾಹಕರಿಗೆ ಲಭ್ಯವಿದೆ. ಬೆಂಗಳೂರಿನಲ್ಲಿ ಇದರ ಸ್ಪೋರ್ಟ್ಸ್ ಎಡಿಷನ್ ಮಾದರಿಯ ಆನ್ ರೋಡ್ ಬೆಲೆ 1,12,604 ರೂ. ಆಗಿದೆ. ನೀವು ರೂ.11,000 ಡೌನ್ ಪಾವತಿಯೊಂದಿಗೆ ಈ ಬೈಕ್ ಅನ್ನು ಖರೀದಿಸಿದರೆ, ರೂ.101,604. ಸಾಲದ ಮೊತ್ತಕ್ಕೆ 9.7% ಬಡ್ಡಿದರದಲ್ಲಿ ಮೂರು ವರ್ಷಗಳ ಅವಧಿಗೆ (36 ತಿಂಗಳುಗಳು) ರೂ.3,264 ರ ಮಾಸಿಕ EMI ಅನ್ನು ಪಾವತಿಸಬೇಕು.

Join Nadunudi News WhatsApp Group

•ಹೊಸ ಹೋಂಡಾ SP 125 ಬೈಕಿನ ಡ್ರಮ್ ಆವೃತ್ತಿಯ ಆನ್ ರೋಡ್ ಬೆಲೆ ರೂ.1,08,146 ಆಗಿದೆ. ನೀವು ರೂ.11,000 ಡೌನ್ ಪೇಮೆಂಟ್ ಮಾಡಿ ಈ ಮೋಟಾರ್ ಸೈಕಲ್ ಖರೀದಿಸಿದರೆ, ಉಳಿದ ಸಾಲದ ಮೊತ್ತ ರೂ.97,148 ಮೇಲೆ 9.7% ಬಡ್ಡಿಯೊಂದಿಗೆ ಮೂರು ವರ್ಷಗಳ ಅವಧಿಗೆ ತಿಂಗಳಿಗೆ ರೂ.3,121 ರ ಇಎಂಐ ಪಾವತಿಸಬೇಕು.

•ಈ ಹೋಂಡಾ SP 125 ಮೋಟಾರ್‌ ಸೈಕಲ್‌ ನ ಡಿಸ್ಕ್ ರೂಪಾಂತರವು ರೂ.1,12,725 ಆನ್ ರೋಡ್ ಬೆಲೆಯನ್ನು ಹೊಂದಿದೆ. ರೂ.11,000 ಮುಂಗಡ ಪಾವತಿಯ ನಂತರ ನೀವು ಈ ಬೈಕ್ ಅನ್ನು ಮನೆಗೆ ತೆಗೆದುಕೊಂಡು ಹೋದರೆ, ರೂ.1,01,725 ​​ಸಾಲದ ಮೊತ್ತಕ್ಕೆ ನೀವು 9 .7 % ಬಡ್ಡಿದರದಲ್ಲಿ ರೂ.3,268 ರ ಮಾಸಿಕ EMI ಪಾವತಿಸಬೇಕು.

Honda SP 125 Bike Price In India
Image Credit: Live Mint

Join Nadunudi News WhatsApp Group