Hotel Rules: ಆಗಸ್ಟ್ 1 ರಿಂದ ಹೋಟೆಲ್ ನಲ್ಲಿ ಊಟ ತಿಂಡಿ ಮಾಡುವವರಿಗೆ ಹೊಸ ನಿಯಮ, ಬೇಸರದಲ್ಲಿ ಜನರು.

ದಿನನಿತ್ಯ ಹೋಟೆಲ್ ನಲ್ಲಿ ಊಟ ತಿಂಡಿ ಮಾಡುವವರಿಗೆ ಆಗಸ್ಟ್ ಒಂದರಿಂದ ಹೊಸ ನಿಯಮ ಜಾರಿಯಾಗಲಿದೆ.

Hotel Food Price Hike From August 1st: ರಾಜ್ಯದಲ್ಲಿ ಉಚಿತ ಗ್ಯಾರಂಟಿ ಯೋಜನೆಗಳು ಜಾರಿಗೆ ಬರುತ್ತಿದ್ದ ಬೆನ್ನಲ್ಲೇ ಜನಸಾಮಾನ್ಯರು ಬೆಲೆ ಏರಿಕೆಯ ಪರಿಣಾಮವನ್ನು ಎದುರಿಸಬೇಕಾಗಿದೆ. ದಿನ ನಿತ್ಯ ಬಳಕೆಯ ಆಹಾರ ಪದಾರ್ಥಗಳು ಸೇರಿದಂತೆ ಗ್ಯಾಸ್, ಹಾಲು, ತರಕಾರಿ ಇನ್ನಿತರ ವಸ್ತುಗಳ ಬೆಲೆಯಲ್ಲಿ ಏರಿಕೆ ಕಂಡು ಬರುತ್ತಿದೆ.

ಇತ್ತೀಚೆಗಂತೂ ಟೊಮೆಟೊ ಬೆಲೆ ಕೇಳಿದರೆ ಅಚ್ಚರಿ ಪಡುವ ಪರಿಸ್ಥಿತ ಎದುರಾಗಿದೆ. ಒಂದು ಕಿಲೋ ಟೊಮೆಟೊ ಖರೀದಿ ಕೂಡ ಜನರಿಗೆ ಕಷ್ಟವಾಗುತ್ತಿದೆ. ಈ ಹಿಂದೆ ಕೇವಲ 20 ರೂ. ನಲ್ಲಿ 1 ಕೆಜಿ ಟೊಮೊಟೊ ಸಿಗುತ್ತಿತ್ತು. ಆದರೆ ಪ್ರಸ್ತುತ ಟೊಮೆಟೊ ದರ ಕೆಜಿಗೆ 150 ತಲುಪುತ್ತಿದೆ. 20 ರೂ. ನಲ್ಲಿ ಒಂದು ಟೊಮೆಟೊ ಖರೀದಿಸುವುದು ಕೂಡ ಕಷ್ಟವಾಗುತ್ತಿದೆ.

Hotel Food Price Hike latest news update
Image Credit: Mediaoneonline

ಇದರ ಜೊತೆಗೆ ಹಾಲಿನ ದರ ಕೂಡ ಹೆಚ್ಚಳವಾಗುತ್ತಿದೆ. ನಿರಂತರ ಬೆಲೆ ಏರಿಕೆಯ ಪರಿಣಾಮದಿಂದಾಗಿ ಜನ ಕಂಗಾಲಾಗುತ್ತಿದ್ದಾರೆ. ಇನ್ನು ಇತ್ತೀಚಿಗೆ ಗ್ಯಾಸ್ ಸಿಲಿಂಡರ್ ಗಳ ಬೆಲೆಯಲ್ಲಿ ವಿಪರೀತ ಏರಿಕೆ ಆಗುತ್ತಲೇ ಇರುವ ಕಾರಣ ಹೋಟೆಲ್ ಮಾಲೀಕರು ಈಗ ಮೀಟಿಂಗ್ ಮಾಡಿ ಹೊಸ ನಿರ್ಧಾರವನ್ನ ಹೊರಹಾಕಿದ್ದು ಇದು ಗ್ರಾಹಕರ ಬೇಸರಕ್ಕೆ ಕಾರಣವಾಗಿದೆ ಎಂದು ಹೇಳಿದರೆ ತಪ್ಪಾಗಲ್ಲ.

ಆಗಸ್ಟ್ 1 ರಿಂದ ಹೋಟೆಲ್ ನಲ್ಲಿ ಊಟ ತಿಂಡಿ ಮಾಡುವವರಿಗೆ ಹೊಸ ನಿಯಮ (Hotel Food Price Hike) 
ಇನ್ನು ಸಾಮಾನ್ಯವಾಗಿ ಅನೇಕರು ಹೋಟೆಲ್ ನ ತಿಂಡಿ ತಿನಿಸುಗಳನ್ನು ಇಷ್ಟಪಡುತ್ತಾರೆ. ಇನ್ನು ಕೆಲವರು ಮನೆಯಿಂದ ದೂರ ಇದ್ದವರು ಹೋಟೆಲ್ ತಿಂಡಿ ಊಟಕ್ಕೆ ಹೊಂದಿಕೊಂಡಿರುತ್ತಾರೆ. ಇದೀಗ ಏಕಾಏಕಿ ಹೋಟೆಲ್ ತಿಂಡಿಗಳ ದರದಲ್ಲಿ ಏರಿಕೆಯಾಗಿರುವುದು ಜನಸಾಮಾನ್ಯರಲ್ಲಿ ಅಚ್ಚರಿ ಮೂಡಿಸುತ್ತಿದೆ. ಆಗಸ್ಟ್ 1 ರಿಂದ ಹೋಟೆಲ್ ನಲ್ಲಿ ಊಟ ತಿಂಡಿ ಮಾಡುವವರಿಗೆ ಹೊಸ ನಿಯಮ ಜಾರಿಯಾಗಲಿದೆ.

Hotel Food Price Hike From August 1st
Image Credit: Freemalaysiatoday

ಒಂದೆಡೆ ಗ್ಯಾಸ್ ಬೆಲೆಯಲ್ಲಿ ಇತ್ತೀಚಿನ ದಿನಗಳಲ್ಲಿ ಸತತ ಏರಿಕೆ ಕಂಡು ಬರುತ್ತಿದೆ. ಟೊಮೆಟೊ ಬೆಳೆಯ ಏರಿಕೆ ಕೂಡ ಹೋಟೆಲ್ ಆಹಾರ ಪದಾರ್ಥದ ಏರಿಕೆಗೆ ಕಾಣವಾಗುತ್ತಿದೆ. ಟೊಮೆಟೊ ಬಳಸದೆ ಹೆಚ್ಚಿನ ಆಹಾರ ಪದಾರ್ಥಗಳನ್ನು ಸಿದ್ಧಪಡಿಸಲು ಸಾಧ್ಯವಿಲ್ಲ. ಇನ್ನು ನಿರಂತರವಾಗಿ ಗ್ಯಾಸ್, ಅಕ್ಕಿ, ಬೇಳೆಕಾಳು, ಹಾಲು ತರಕಾರಿ ಬೆಲೆ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಹೋಟೆಲ್ ಮಾಲೀಕರು ತಿಂಡಿ ,ಊಟದ ಬೆಲೆಯಲ್ಲಿ ಏರಿಕೆ ಮಾಡಲು ತೀರ್ಮಾನ ಮಾಡಿದ್ದಾರೆ.

Join Nadunudi News WhatsApp Group

ಹೋಟೆಲ್ ತಿಂಡಿ ತಿನಿಸುಗಳ ದರದಲ್ಲಿ ಹೆಚ್ಚಳ
ಇನ್ನು ಆಗಸ್ಟ್ 1 ರಿಂದ ಹೋಟೆಲ್ ನ ತಿಂಡಿ ತಿನಿಸುಗಳ ಬೆಲೆ ಶೇ. 10 ಏರಿಕೆ ಮಾಡಲು ಹೋಟೆಲ್ ಮಾಲೀಕರು ನಿರ್ಧರಿಸಿದ್ದಾರೆ. ಶೇ. 10 ರಷ್ಟು ದರ ಹೆಚ್ಚಳ ಮಾಡುವ ಬಗ್ಗೆ ಹೋಟೆಲ್ ಮಾಲೀಕರ ಸಂಘದಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ. ಅನ್ನಸಾಂಬಾರ್ 50 ರೂ. ನಿಂದ 60 ಕ್ಕೆ ಏರಿಸಲಾಗಿದೆ. ಫುಲ್ ಊಟದ ಬೆಲೆ 50 ರಿಂದ 70 ರೂ. ಏರಿಕೆ ಮಾಡಲಾಗಿದೆ.

Increase in the price of hotel food
Image Credit: Tripadvisor

ಮಸಾಲೆ ದೋಸೆ 60 ರೂ., ಉದ್ದಿನ ವಡೆ 15 ರೂ. ಪುರಿ 45 ರಿಂದ 50 ರೂ. ಪೂಳಿಯೊಗರೆ 40-50 ರೂ., ಇಡ್ಲಿ ವಡೆ 30 ರಿಂದ 50 ರೂ.ವರೆಗೆ, ಬಿಸಿ ಬೇಳೆಬಾತ್ 45 ರಿಂದ 55 ರೂ,ರೈಸ್ ಬಾತ್ ರೂ. 35 ರಿಂದ 45 , ಟಿ ಮತ್ತು ಕಾಫಿ 12 ರಿಂದ 15 ರೂ. ಏರಿಕೆ ಮಾಡಲಾಗುವುದು ಎಂದು ಹೋಟೆಲ್ ಮಾಲೀಕರು ಮಾಹಿತಿ ನೀಡಿದ್ದಾರೆ.

Join Nadunudi News WhatsApp Group