Price Hike: ಹೊಸ ಮನೆ ಕಟ್ಟುತ್ತಿರುವವರಿಗೆ ಬೇಸರದ ಸುದ್ದಿ, ಸಿಮೆಂಟ್, ಕಬ್ಬಿಣ ಸೇರಿದಂತೆ ಈ ವಸ್ತುಗಳ ಬೆಲೆ ಹೆಚ್ಚಳ

ಕಟ್ಟಡ ನಿರ್ಮಾಣದ ಸಾಮಗ್ರಿಗಳ ಬೆಲೆಯಲ್ಲಿ ಏರಿಕೆ, ಬೇಸರದಲ್ಲಿ ಮನೆ ಕಟ್ಟುತ್ತಿರುವ ಜನರು

House Construction Materials Price Increase: ಪ್ರಸ್ತುತ 2023 ವಿದಾಯದೊಂದಿಗೆ 2024 ಆರಂಭವಾಗಿದೆ. ಈ ಹೊಸ ವರ್ಷದಲ್ಲಿ ಅನೇಕ ನಿಯಮಗಳು ಬದಲಾಗುತ್ತಿವೆ. ಕಳೆದ ವರ್ಷದ ಆರಂಭದಲ್ಲಿ ದೇಶದಲ್ಲಿ ಹಣದುಬ್ಬರತೆಯ ಪರಿಸ್ಥಿತಿ ಎದುರಾಗಿತ್ತು. ದಿನ ಬಳಕೆಯ ವಸ್ತುಗಳ ಬೆಲೆಯಿಂದ ಹಿಡಿದು ಎಲ್ಲ ರೀತಿಯ ಖರೀದಿಯ ವಸ್ತುವಿನ ಬೆಲೆ ದುಬಾರಿಯಾಗಿತ್ತು.

ಹಣದುಬ್ಬರತೆ ಜನರಿಗೆ ಹೆಚ್ಚಿನ ಆರ್ಥಿಕ ನಷ್ಟವನ್ನು ತಂದೊಡ್ಡಿತ್ತು. ಸದ್ಯ ಹೊಸ ವರ್ಷದ ಆರಂಭ ಹೊಸ ಮನೆ ಕಟ್ಟುತ್ತಿರುವವರಿಗೆ ಶಾಕಿಂಗ್ ಸುದ್ದಿಯನ್ನು ನೀಡಿದೆ. ನಿಮ್ಮ ಮನೆ ನಿರ್ಮಾಣದ ಕನಸು ನನಸಾಗಿಸುವುದು ಇನ್ನುಮುಂದೆ ಕಷ್ಟವಾಗಬಹುದು.

House Construction Materials Price Increase
Image Credit: 100pillars

ಹೊಸ ಮನೆ ಕಟ್ಟುತ್ತಿರುವವರಿಗೆ ಶಾಕಿಂಗ್ ನ್ಯೂಸ್
ಸಾಮಾನ್ಯವಾಗಿ ಎಲ್ಲರು ಕೂಡ ಸ್ವಂತ ಮನೆ ನಿರ್ಮಾಣದ ಕನಸನ್ನು ಹೊತ್ತಿರುತ್ತಾರೆ. ಸಂಪೂರ್ಣ ಮನೆ ನಿರ್ಮಾಣಕ್ಕೆ ಆರ್ಥಿಕ ಸಮಸ್ಯೆ ಎದುರಾಗುವುದಂತೂ ಸಹಜ. ಈ ವೇಳೆ ಜನರು ಗೃಹ ಸಾಲವನ್ನು ಪಡೆಯುತ್ತಾರೆ. ಮನೆ ನಿರ್ಮಿಸಲು ಗೃಹ ಸಾಲವನ್ನು ಮಾಸಿಕ ಕಂತುಗಳ ಮೂಲಕ ಸಾಲದ ಮರುಪಾವತಿ ಮಾಡಬೇಕಾಗುತ್ತದೆ. ಹೀಗಿರುವಾಗ ಮನೆ ನಿರ್ಮಾಣಕ್ಕೆ ಬೇಕಾಗುವ ಅಗತ್ಯ ವಸ್ತುಗಳ ಬೆಲೆ ಏರಿಕೆಯಾದರೆ ಜನಸಾಮಾನ್ಯರಿಗೆ ಇನ್ನಷ್ಟು ಆರ್ಥಿಕ ಹೊರೆ ಹೆಚ್ಚಾಗಲಿದೆ.

ಮನೆ ನಿರ್ಮಾಣಕ್ಕೆ ಬೇಕಾಗುವ ಅಗತ್ಯ ವಸ್ತುಗಳ ಬೆಲೆಯಲ್ಲಿ ದಿಢೀರ್ ಏರಿಕೆ
ಈ ಹಿಂದೆ ಕೂಡ ಮನೆ, ಕಟ್ಟಡ ನಿರ್ಮಾಣದ ಸಾಮಗ್ರಿಗಳ ಬೆಲೆ ಏರಿಕೆಯಾಗಿತ್ತು. ಇದೀಗ ಮತ್ತೆ ಸಿಮೆಂಟ್ , ಕಬ್ಬಿಣ ಸೇರಿದಂತೆ ಮನೆ ನಿರ್ಮಾಣಕ್ಕೆ ಬೇಕಾಗುವ ಅಗತ್ಯ ವಸ್ತುಗಳ ಬೆಲೆಯಲ್ಲಿ ಬಾರಿ ಏರಿಕೆಯಾಗುವ ಸಾಧ್ಯತೆ ಇದೆ.

Price Hike Latest Update
Image Credit: Housingfactory

ಈ ಹಿಂದೆ ಮರಳಿನ ಸರಬರಾಜು ಕಡಿಮೆಯಾಗಿದ್ದು, ಈ ಕಾರಣಕ್ಕೆ ಮರಳಿನ ಬೆಲೆ ಕೂಡ ಹೆಚ್ಚಿಸಲಾಗಿತ್ತು. ಪ್ರಸ್ತುತ ಮಾರುಕಟ್ಟೆಯಲ್ಲಿ ಮರಳು, ಸಿಮೆಂಟ್, ಕಬ್ಬಿಣ ಇವುಗಳ ಮೇಲಿನ ಬೇಡಿಕೆ ಹೆಚ್ಚುತ್ತಿದೆ. ಈ ನಿಟ್ಟಿನಲ್ಲಿ ವಿತರಕರು ವಸ್ತುಗಳ ಬೆಳೆಯನ್ನು ಹೆಚ್ಚಿಸಲು ನಿರ್ಧರಿಸಿದ್ದಾರೆ. ಮಾರುಕಟ್ಟೆಯಲ್ಲಿ ಸಿಮೆಂಟ್ ಬೆಲೆ ಸರಿಸುಮಾರು 30 ರೂ. ಗಳಷ್ಟು ಹೆಚ್ಚಾಗುವ ಸಾಧ್ಯತೆ ಇದೆ.

Join Nadunudi News WhatsApp Group

Join Nadunudi News WhatsApp Group