Subsidy Scheme: ಮಧ್ಯಮ ವರ್ಗದ ಜನರಿಗೆ ಬಂಪರ್ ಗುಡ್ ನ್ಯೂಸ್ ಕೊಟ್ಟ ಮೋದಿ ಸರ್ಕಾರ, ನೂತನ ವಸತಿ ಯೋಜನೆ ಜಾರಿಗೆ.

ದೇಶದಲ್ಲಿ ನೂತನ ವಸತಿ ಯೋಜನೆಯನ್ನ ಜಾರಿಗೆ ತಂದ ಕೇಂದ್ರ ಸರ್ಕಾರ.

Housing Scheme Latest Update: ಸಾಮಾನ್ಯವಾಗಿ ಎಲ್ಲ ತಮ್ಮಾ ಸ್ವಂತ ಮನೆ ನಿರ್ಮಾಣದ ಕನಸು ಕಾಣುವುದು ಸಹಜ. ಆರ್ಥಿಕವಾಗಿ ಸಬಲರಾಗಿರುವವರು ತಮ್ಮ ಕನಸನ್ನು ನನಸಾಗಿಸಿಕೊಳ್ಳುತ್ತಾರೆ. ಆದರೆ ಆರ್ಥಿಕವಾಗಿ ಹಿಂದುಳಿದವರು ಆರ್ಥಿಕ ಸಮಸ್ಯೆಯ ಕಾರಣ ತಮ್ಮ ಕನಸನ್ನು ಕೈಬಿಡುತ್ತರೆ. ದೇಶದಲ್ಲಿ ಸಾಕಷ್ಟು ಜನ ಇನ್ನು ಕೂಡ ಸ್ವಂತ ಮನೆ ಇಲ್ಲದೆ ಮಾಸಿಕ ಬಾಡಿಗೆ ನೀಡುತ್ತಾ ಜೀವನ ಸಾಗಿಸುತ್ತಿದ್ದಾರೆ.

ಇದೀಗ ಕೇಂದ್ರ ಸರ್ಕಾರ ಮಧ್ಯಮ ವರ್ಗದವರ ಮನೆ ನಿರ್ಮಾಣದ ಕನಸಿಗೆ ಸಾಕಾರ ನೀಡಲು ಮುಂದಾಗಿದೆ. ಬಡ ಜನರ ಮನೆ ನಿರ್ಮಾಣಕ್ಕೆ ಸಹಾಯವಾಗಲು ಸರ್ಕಾರ ಹೊಸ ಯೋಜನೆಯನ್ನು ಪರಿಚಯಿಸಿದೆ. ಕೇಂದ್ರ ಸರ್ಕಾರ ಈ ಯೋಜನೆ ಯಾವುದು? ಸರ್ಕಾರ ಜನರ ಮನೆ ನಿರ್ಮಾಣಕ್ಕೆ ಯಾವ ರೀತಿ ಆರ್ಥಿಕ ನೆರವು ನೀಡಲಿದೆ? ಎಂಬೆಲ್ಲ ಪ್ರಶ್ನೆಗೆ ಇಲ್ಲಿದೆ ಉತ್ತರ.

Housing Scheme Latest Update
Image Source: India Today

ಮಧ್ಯಮ ವರ್ಗದ ಜನರಿಗೆ ಬಂಪರ್ ಗುಡ್ ನ್ಯೂಸ್ ಕೊಟ್ಟ ಮೋದಿ ಸರ್ಕಾರ
ನಗರ ಪ್ರದೇಶಗಳಲ್ಲಿ ಸಣ್ಣ ಮನೆಗಳ ನಿರ್ಮಾಣಕ್ಕಾಗಿ ಮುಂದಿನ 5 ವರ್ಷಗಳಲ್ಲಿ ರೂ. 60,000 ಕೋಟಿ ಮೊತ್ತದ ಬಡ್ಡಿ ಸಹಾಯಧನದ ಗೃಹ ಸಾಲ ಯೋಜನೆ ಜಾರಿಗೊಳಿಸಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ. 2024 ರ ಸಾವ್ರತಿಕ ಚುನಾವಣೆಯ ಮುಂಚಿತವಾಗಿ ಬ್ಯಾಂಕುಗಳು ಒಂದು ತಿಂಗಳುಗಳ ಮುಂಚಿತವಾಗಿ ಈ ಯೋಜನೆಯನ್ನು ಜಾರಿಗೆ ತರಲಿವೆ.

ಇನ್ನು ದೇಶದ ಪ್ರಧಾನಿ Narendra Modi ಅವರು August 15 ರಂದು ಬಡ್ಡಿ ಸಹಾಯಧನದ ಗೃಹ ಸಾಲ ಯೋಜನೆಯನ್ನು ಬಿಡುಗಡೆ ಮಾಡುವ ಬಗ್ಗೆ ಘೋಷಣೆ ಹೊರಡಿಸಿದ್ದರು. ಕಳೆದ ತಿಂಗಳಿನಿಂದ ಕೇಂದ್ರ ಸರ್ಕಾರ ಈ ಯೋಜನೆಯ ಕುರಿತು ಅಪ್ಡೇಟ್ ನೀಡುತ್ತದೆ ಇದೆ. ಶೀಘ್ರದಲ್ಲೇ ನಗರ ಪ್ರದೇಶದ ಬಡ ಮತ್ತು ಮಧ್ಯಮ ವರ್ಗದವರಿಗೆ ಸರ್ಕಾರವು 60,000 ಕೋಟಿ ರೂ. ಸಬ್ಸಿಡಿಯನ್ನು ಪ್ರಾರಂಭಿಸಲಿದೆ.

Housing Scheme Latest Update
Image Source: India Today

ಸಾಲದ ಮೊತ್ತಕ್ಕೆ ಸಿಗಲಿದೆ ಇಷ್ಟು ಬಡ್ಡಿ ರಿಯಾಯಿತಿ
ಒಟ್ಟು ಸಾಲದಲ್ಲಿ 9 ಲಕ್ಷದ ವರೆಗಿನ ಮೊತ್ತಕ್ಕೆ ವಾರ್ಷಿಕ ಶೇ.  3 ರಿಂದ ಶೇ. 6.5 ರ ವರೆಗೆ ಬಡ್ಡಿ ಸಹಾಯಧನ ಸಿಗಲಿದೆ. ರೂ. 50 ಲಕ್ಷಕ್ಕಿಂತ ಕಡಿಮೆ ಮೊತ್ತದ ಗೃಹ ಸಾಲವನ್ನು 20 ವರ್ಷಗಳ ವರೆಗೆ ಪಡೆದಿರುವವರು ಪ್ರಸ್ತಾಪಿತ ಯೋಜನೆಗೆ ಅರ್ಹರಾಗಿರುತ್ತಾರೆ ಎಂದು ಮೂಲಗಳಿಂದ ಮಾಹಿತಿ ಲಭಿಸಿದೆ. ಬಡ್ಡಿ ಸಹಾಯಧನದ ಮೊತ್ತವನ್ನು ಫಲಾನುಭವಿಗಳಿವೆ ಮುಂಗಡವಾಗಿ ನೀಡಲಾಗುತ್ತದೆ. ಸದ್ಯದಲ್ಲೇ ಈ ಯೋಜನೆ ಅರ್ಹರಿಗೆ ತಲುಪುವ ಬಗ್ಗೆ ಕೇಂದ್ರ ಸರ್ಕಾರ ಆದೇಶ ಹೊರಡಿಸಲಿದೆ.

Join Nadunudi News WhatsApp Group

Join Nadunudi News WhatsApp Group