Housing Scheme: ಈಗ ವಿಮಾನ ನಿಲ್ದಾಣದ ಬಳಿ ಮನೆ ಖರೀದಿಸಬಹುದು, ದೇಶದಲ್ಲಿ ಜಾರಿಗೆ ಬಂತು ಸರ್ಕಾರೀ ವಸತಿ ಯೋಜನೆ.

ಜೇವಾರ್ ವಿಮಾನ ನಿಲ್ದಾಣದ ಬಳಿ ಮನೆ ಖರೀದಿಸುವವರಿಗೆ ಹೊಸ ಮಾಹಿತಿ.

Housing Scheme: ಸಾಕಷ್ಟು ಜನರು ಇರಲು ಮನೆಯಿಲ್ಲದೆ ಗುಡಿಸಲುಗಳಲ್ಲಿ ವಾಸಿಸುತ್ತಿದ್ದಾರೆ. ಸರ್ಕಾರದಿಂದ ಪ್ರತಿ ವರ್ಷ ವಸತಿ ಯೋಜನೆ ಜಾರಿಯಾದರು ಸಹ ಇದರ ಉಪಯೋಗ ಪಡೆದುಕೊಳ್ಳಲಾಗದೆ ಅನೇಕ ಜನರು ಸಣ್ಣ ಸಣ್ಣ ಗುಡಿಸಲು ಗಳಲ್ಲಿ ವಾಸ ಮಾಡುತ್ತಾರೆ. ಭಾರತದಲ್ಲಿ ಮನೆ ಇಲ್ಲದೆ ಇರುವವ ಜನರು ಹೆಚ್ಚಾಗಿ ಇದ್ದಾರೆ. ಇಂತವರಿಗೆ ಇದೀಗ ಸರ್ಕಾರದಿಂದ ಹೊಸ ಮಾಹಿತಿ ಲಭಿಸಿದೆ.

ಜೇವಾರ್ ವಿಮಾನ ನಿಲ್ದಾಣದ ಬಳಿ ಮನೆ ಖರೀದಿಸುವವರಿಗೆ ಬಿಗ್ ಅಪ್ಡೇಟ್
ನೀವು ಏನ್ ಸಿ ಆರ್ ನಲ್ಲಿ ನೆಲೆಸುವ ಕನಸು ಕಾಣುತ್ತಿದ್ದರೆ ಈ ಕನಸನ್ನು ನನಸಾಗಿಸುವ ಸಮಯ ಇದೀಗ ಬಂದಿದೆ. ಈಗ ನೀವು ಜೇವಾರ್ ವಿಮಾನ ನಿಲ್ದಾಣದ ಬಳಿ ಮನೆ ಖರೀದಿಸಬಹುದು. ಡಿಡಿಎ ನಂತರ ಈಗ ಯಮುನಾ ಪ್ರಾಧಿಕಾರವು ಸಾಮಾನ್ಯ ಜನರಿಗೆ ಅಗ್ಗದ ಫ್ಲಾಟ್ ಗಳನ್ನೂ ಒದಗಿಸಲು ವಸತಿ ಯೋಜನೆಯನ್ನು ಪ್ರಾರಂಭಿಸಿದೆ.

New information for home buyers near Jewar Airport
Image Credit: India

ಇನ್ನು ಈ ಯೋಜನೆಯ ವಿಶೇಷತೆ ಎಂದರೆ ಈ ಯೋಜನೆಯನ್ನು ಮೊದಲಿಗೆ ಬಂದವರಿಗೆ ಮೊದಲು ಸೇವೆ ಆಧಾರದ ಮೇಲೆ ತೆಗೆದುಕೊಳ್ಳಲಾಗಿದೆ. ಯೋಜನೆಯಲ್ಲಿ ಮೊದಲು ಅರ್ಜಿ ಸಲ್ಲಿಸುವವರಿಗೆ ಫ್ಲ್ಯಾಟ್ ನೀಡಲಾಗುತ್ತದೆ. ಯಮುನಾ ನಗರದ ಸೆಕ್ಟರ್ 22 ಡಿಯಲ್ಲಿ 16 ಅಂತಸ್ತಿನ ಕಟ್ಟಡದಲ್ಲಿ ನಿರ್ಮಿಸಲಾದ 462 ಫ್ಲಾಟ್ ಗಳನ್ನೂ ಹಂಚಿಕೆ ಮಾಡಲಾಗುವುದು. ಈ ಎಲ್ಲ ಫ್ಲಾಟ್ ಗಳು ಬೀಚ್ ಹೆಚ್ ಕೆಯಲ್ಲಿವೆ ಎನ್ನಲಾಗುತ್ತಿದೆ.

ಯಮುನಾ ಪ್ರಾಧಿಕಾರವು ಮಂಜೂರು ಮಾಡಲಿರುವ ಈ ಎರಡು ಬಿ ಎಚ್ ಕೆ ಫ್ಲಾಟ್ ಗಳ ಬೆಲೆಯನ್ನು 42 .34 ಲಕ್ಷಗಳಲ್ಲಿ ಇರಿಸಲಾಗಿದೆ. ವಿಶೇಷವೆಂದರೆ ಒಂದನೇ ಮಹಡಿಯಿಂದ ಆರನೇ ಅಂತಸ್ತಿನಲ್ಲಿ ನಿರ್ಮಿಸಿರುವ ಫ್ಲಾಟ್ ಗಳಿಗೆ ಹೆಚ್ಚಿನ ಬೆಲೆ ತೆರೆಯಬೇಕಾಗುತ್ತದೆ.

New information for home buyers near Jewar Airport
Image Credit: Timesofindia

ಮೊದಲ ಮತ್ತು ಎರಡನೇ ಮಹಡಿಗೆ ಪ್ರತಿ ಚದರ ಅಡಿ ಹೆಚ್ಚುವರಿಯಾಗಿ 100 ರೂ. ಅದೇ ರೀತಿ ಮೂರು ಮತ್ತು ನಾಲ್ಕನೇ ಮಹಡಿಗೆ ಚದರ ಅಡಿಗೆ 75 ರೂ., ಐದು ಮತ್ತು ಆರನೇ ಮಹಡಿಗೆ 50 ರೂ. ಹೆಚ್ಚಿಗೆ ಪಾವತಿಸಬೇಕಾಗುತ್ತದೆ.

Join Nadunudi News WhatsApp Group

ಈ ಫ್ಲಾಟ್ ನಲ್ಲಿ ಇರುವ ಸೌಲಭ್ಯಗಳು
ಈ ಫ್ಲಾಟ್ ಸಂಪೂರ್ಣವಾಗಿ ನಿರ್ಮಿಸಲಾಗಿದೆ. ಈ ಫ್ಲ್ಯಾಟ್ ಗಳಲ್ಲಿ ವಾಸಿಸುವವರಿಗೆ ಕಾರ್ ಪಾರ್ಕಿಂಗ್, ಆಟದ ಮೈದಾನ, ಪಾರ್ಕ್ ಸೇರಿದಂತೆ ಎಲ್ಲ ರೀತಿಯ ಸೌಲಭ್ಯಗಳು ಲಭ್ಯವಾಗಲಿದೆ. 16 ಅಂತಸ್ತಿನ ಈ ಯೋಜನೆಯಲ್ಲಿ ಭೂ ಸ್ವಾಧೀನಪಡಿಸಿಕೊಂಡಿರುವ ರೈತರಿಗೆ ಶೇಕಡಾ 17 .5, ಪರಿಶಿಷ್ಟ ಜಾತಿಗೆ ಶೇಕಡಾ 21 ಪರಿಶಿಷ್ಟ ಪಂಗಡಕ್ಕೆ ಶೇಕಡಾ 2 ಮತ್ತು ದಿವ್ಯಂಗಗರಿಗೆ ಶೇಕಡಾ 3 ಮೀಸಲಾತಿಯನ್ನು ಕಾಯ್ದಿರಿಸಲಾಗಿದೆ.

Join Nadunudi News WhatsApp Group