India Sim Card Limit Person: ಇತ್ತೀಚಿನ ದಿನಗಳಲ್ಲಿ ಚಿಕ್ಕ ಮಕ್ಕಳಿಂದ ಹಿಡಿದು ವಯೋವೃದ್ಧರು ಕೂಡ ಮೊಬೈಲ್ ಫೋನ್ ಅನ್ನು ಬಳಕೆ ಮಾಡುತ್ತಾರೆ. ಮೊಬೈಲ್ ಬಳಕೆ ಮಾಡಲು ಸಿಮ್ ಕಾರ್ಡ್ ಅತಿ ಅವಶ್ಯಕ. 18 ವರ್ಷ ಮೇಲ್ಪಟ್ಟವರು ಮಾತ್ರ ತಮ್ಮ ಹೆಸರಿನಲ್ಲಿ ಸಿಮ್ ಕಾರ್ಡ್ ಅನ್ನು ಪಡೆದುಕೊಳ್ಳಬಹುದಾಗಿದೆ. ಇದೀಗ ಎಲ್ಲರೂ ಕೇಳುವ ಸಾಮಾನ್ಯ ಪ್ರಶ್ನೆ ಅಂದರೆ, ಒಬ್ಬ ವ್ಯಕ್ತಿ ಎಷ್ಟು ಸಿಮ್ ಕಾರ್ಡ್ ಅನ್ನು ಖರೀದಿ ಮಾಡಬಹುದು..? ಇದೀಗ ನಾವು ಭಾರತ ಸರ್ಕಾರದ ನಿಯಮದ ಪ್ರಕಾರ ಒಬ್ಬ ವ್ಯಕ್ತಿ ತನ್ನ ದಾಖಲೆಯನ್ನ ಬಳಸಿಕೊಂಡು ಎಷ್ಟು ಸಿಮ್ ಅನ್ನ ಖರೀದಿ ಮಾಡಬಹುದು ಎನ್ನುವ ಬಗ್ಗೆ ಸಂಪೂರ್ಣವಾಗಿ ತಿಳಿದುಕೊಳ್ಳೋಣ.
ಭಾರತದಲ್ಲಿ ಸಿಮ್ ಕಾರ್ಡ್ ಮಿತಿ
ಭಾರತೀಯ ದೂರ ಸಂಪರ್ಕ ಇಲಾಖೆ ಹಾಗೆ TRAI ನಿಯಮದ ಪ್ರಕಾರ ಒಬ್ಬ ವ್ಯಕ್ತಿ ಗರಿಷ್ಠವಾಗಿ 9 ಸಿಮ್ ಕಾರ್ಡ್ ಅನ್ನು ಪಡೆದುಕೊಳ್ಳಬಹುದಾಗಿದೆ. ಈ ನಿಯಮ ದೇಶಾದ್ಯಂತ ಅನ್ವಯವಾಗುತ್ತದೆ, ಆದರೂ ಕೆಲವು ವಿಶೇಷ ಪ್ರದೇಶಗಳಾದ ಜಮ್ಮು- ಕಾಶ್ಮೀರ, ಅಸ್ಸಾಂ, ಮತ್ತು ಈಶಾನ್ಯ ರಾಜ್ಯದಲ್ಲಿ ಕೇವಲ 6 ಸಿಮ್ ಅನ್ನು ಒಬ್ಬ ವ್ಯಕ್ತಿ ಪಡೆದುಕೊಳ್ಳಬಹುದಾಗಿದೆ. ಈ ನಿಯಮವನ್ನ 2026 ರಿಂದ ಜಾರಿಗೆ ತರಲಾಗಿದೆ.
ಭಾರತದಲ್ಲಿ ಏಕೆ ಸಿಮ್ ಕಾರ್ಡ್ ಗಳಿಗೆ ಮಿತಿ ಹೇರಲಾಗಿದೆ?
ಅನಾಮದೇಯ ಹೆಸರಿನಲ್ಲಿ ಸಿಮ್ ಕಾರ್ಡ್ ಪಡೆದು ವಂಚನೆ ಮಾಡುತ್ತಿರುದು ನಿಮಗೆಲ್ಲ ತಿಳಿದೇ ಇದೆ, ದೇಶದ ಭದ್ರತೆಯ ದೃಷ್ಟಿಯಿಂದ ಭಾರತ ಸರ್ಕಾರ ಸಿಮ್ ಕಾರ್ಡ್ ಗಳಿಗೆ ಮಿತಿಯನ್ನ ಹೇರಿದೆ. ಒಬ್ಬ ವ್ಯಕ್ತಿ ತನ್ನ ಆಧಾರ್ ಕಾರ್ಡ್ ಮೂಲಕ ಕೇವಲ 9 ಸಿಮ್ ಗಳನ್ನ ಮಾತ್ರ ಪಡೆದುಕೊಳ್ಳಬಹುದಾಗಿದೆ, ಮಿತಿಗಿಂತ ಹೆಚ್ಚಿನ ಸಿಮ್ ಪಡೆಯಲು ಬಯಸಿದರೆ ಟೆಲಿಕಾಂ ಕಂಪನಿ ಅದನ್ನ ನಿರಾಕರಿಸುತ್ತದೆ. ನೀವು ಹೊಸ ಸಿಮ್ ಖರೀದಿ ಮಾಡುವಾಗ KYC ಪ್ರಕ್ರಿಯೆ ಕಡ್ಡಾಯವಾಗಿದೆ.
DoT ನಿಯಮಗಳು
ಕೆಲವು ಸಂದರ್ಭದಲ್ಲಿ ವ್ಯಾಪಾರಸ್ಥರಿಗೆ ಹೆಚ್ಚು ಸಿಮ್ ನ ಅವಶ್ಯಕತೆ ಇರುತ್ತದೆ, ಆದರೆ 9 ಕ್ಕಿಂತ ಹೆಚ್ಚು ಸಿಮ್ ಪಡೆಯಲು ಸಾಧ್ಯವಿಲ್ಲ. ನಿಮ್ಮ ಸಿಮ್ ನ ಸಂಖ್ಯೆಯನ್ನು ತಿಳಿದುಕೊಳ್ಳಲು *123# ಗೆ ಡೈಲ್ ಮಾಡಿ ಪರಿಶೀಲಿಸಿಕೊಳ್ಳಬಹುದಾಗಿದೆ. ನೀವು ಹೊಸ ಸಿಮ್ ಖರೀದಿಸುವ ಮೊದಲು ನಿಮ್ಮ ಆಧಾರ್ ಕಾರ್ಡ್ ನಲ್ಲಿ ಎಷ್ಟು ಸಿಮ್ ಲಿಂಕ್ ಆಗಿದೆ ಎನ್ನುದನ್ನ ನೀವು TAF-COP ಪೋರ್ಟಲ್ ನಲ್ಲಿ (https://sancharsaathi.gov.in/) ಪರಿಶೀಲಿಸಬಹುದು. ನಿಮ್ಮ ಯಾವುದೇ ಸಂದೇಹಗಳಿಗೆ ಟೆಲಿಕಾಂ ಕಂಪನಿ ಕಸ್ಟಮರ್ ಕೇರ್ ಗೆ ಕರೆ ಮಾಡಿ ಬಗೆಹರಿಸಿಕೊಳ್ಳಿ.
Disclaimer: This information is provided for awareness purposes only. For personalised legal advice, consult a qualified professional and refer to official government notifications.

