Rishabh Pant: ಭಾರತಕ್ಕೆ ಮೋಸ ಮಾಡಿದ ರಿಷಬ್ ಪಂತ್, ಕೇಳಿಬಂತು ಬಹುದೊಡ್ಡ ಆರೋಪ

ಭಾರತ ತಂಡಕ್ಕೆ ಮೋಸ ಮಾಡಿ ಸಿಕ್ಕಿ ಬಿದ್ರಾ ರಿಷಬ್ ಪಂತ್...!

Rishabh Pant Cheating: ಟಿ20 ವಿಶ್ವಕಪ್ ಚಾಂಪಿಯನ್ ಹಾಗೂ ಟೀಂ ಇಂಡಿಯಾದ ಸ್ಟಾರ್ ವಿಕೆಟ್ ಕೀಪರ್ ಬ್ಯಾಟರ್ ರಿಷಬ್ ಪಂತ್ ಸದ್ಯ ಹೊಸ ವಿಚಾರವಾಗಿ ಸುದ್ದಿಯಾಗಿದ್ದಾರೆ. ಸದ್ಯ ಪಂತ್ ವಿಚಾರವಾಗಿ ಹೊಸ ಆರೋಪ ಕೇಳಿ ಬರುತ್ತಿದೆ.

ಸ್ಟಾರ್ ವಿಕೆಟ್ ಕೀಪರ್ ಬ್ಯಾಟರ್ ರಿಷಬ್ ಪಂತ್ ಮೇಲಿರುವ ಆರೋಪ ವೈರಲ್ ಆಗುತ್ತಿದ್ದಂತೆ ಭಾರತ ತಂಡಕ್ಕೆ ಮೋಸ ಮಾಡಿದ್ದಾರಾ…? ಎನ್ನುವ ಚರ್ಚೆ ಕೇಳಿಬರುತ್ತಿದೆ. ಈ ಸುದ್ದಿ ಕೇಳಿಪಂತ್ ಅಭಿಮಾನಿಗಳು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಅಷ್ಟಕ್ಕೂ ರಿಷಬ್ ಪಂತ್ ಭಾರತ ತಂಡಕ್ಕೆ ಯಾವ ರೀತಿ ಮೋಸ ಮಾಡಿದ್ದಾರೆ ಎನ್ನುವ ಬಗ್ಗೆ ಮಾಹಿತಿ ಇಲ್ಲಿದೆ.

Rishabh Pant Cheating
Image Credit: Zee News

ಭಾರತ ತಂಡಕ್ಕೆ ಮೋಸ ಮಾಡಿ ಸಿಕ್ಕಿ ಬಿದ್ರಾ ರಿಷಬ್ ಪಂತ್…!
ಇದೀಗ ಸೋಶಿಯಲ್ ಮೀಡಿಯಾದಲ್ಲಿ  ಸ್ಟಾರ್ ವಿಕೆಟ್ ಕೀಪರ್ ಬ್ಯಾಟರ್ ರಿಷಬ್ ಪಂತ್ ವಿರುದ್ಧ ಗಂಭೀರ ಆರೋಪ ಕೇಳಿಬಂದಿದೆ. ಪಂತ್ ತನ್ನ ವಯಸ್ಸಿನ ಬಗ್ಗೆ ಬಿಸಿಸಿಐಗೆ ವಂಚನೆ ಮಾಡಿ ಸಿಕ್ಕಿಬಿದ್ದಿದ್ದಾರೆ ಎಂದು ಹೇಳಲಾಗುತ್ತಿದೆ. ಪಂತ್ ಬಿಸಿಸಿಐಗೆ ಮೋಸ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ತನಗೆ ಕೇವಲ 26 ವರ್ಷ ಎಂದು ಪಂತ್ ಬಿಸಿಸಿಐ ಮುಂದೆ ಹೇಳಿಕೊಂಡಿದ್ದಾರೆ. ಸದ್ಯ ಇದೆ ದೊಡ್ಡ ಸಮಸ್ಯೆಗೆ ಕಾರಣವಾಗಿದೆ. ಪಂತ್ ವಯಸ್ಸಿನ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಇದೀಗ ಪ್ರಶ್ನೆ ಎದ್ದಿದೆ.

ಬಿಸಿಸಿಐಗೆ ಮೋಸ ಮಡಿದ ರಿಷಬ್ ಪಂತ್
ಇದೀಗ ಸೋಶಿಯಲ್ ಮೀಡಿಯಾದಲ್ಲಿ ರಿಷಬ್ ಪಂತ್ BCCI ಗೆ ಮೋಸ ಮಾಡಿರುವ ಬಗ್ಗೆ ಮಾತುಗಳು ಕೇಳಿಬರುತ್ತಿದೆ.  ಪಂತ್ ಶಾಲೆಯಲ್ಲಿ ನನಗಿಂತ 3 ವರ್ಷ ಸೀನಿಯರ್. ನನಗೆ 27 ವರ್ಷ. ಇನ್ನು 30 ವರ್ಷ ವಯಸ್ಸು ಆಗಬೇಕಾದ ಪಂತ್  ಗೆ 26 ವರ್ಷ ಹೇಗೆ ಸಾಧ್ಯ…? ಎಂದು ನೆಟ್ಟಿಗರೊಬ್ಬರು ಪ್ರಶ್ನಿಸಿದ್ದಾರೆ.  ಸದ್ಯ ಪಂತ್ ಮೇಲಿನ ಈ ಆರೋಪ ತೀವ್ರ ಚರ್ಚೆಗೆ ಕಾರಣವಾಗಿದೆ. ಪಂತ್ ಬಿಸಿಸಿಐಗೆ ಮೋಸ ಮಾಡಿದ್ದು, ಈ ಬಗ್ಗೆ ತನಿಖೆಯಾಗಬೇಕು ಎಂದು ನೆಟಿಜನ್‌ಗಳು ಒತ್ತಾಯಿಸಿದ್ದಾರೆ.

Rishabh Pant Latest News
Image Credit: cnbctv18

Join Nadunudi News WhatsApp Group

Join Nadunudi News WhatsApp Group