Luggage Rules: ಈಗ ರೈಲಿನಲ್ಲಿ ಇಷ್ಟು ಲಗೇಜ್ ಮಾತ್ರ ಸಾಗಿಸಲು ಅವಕಾಶ, ಇಲ್ಲವಾದರೆ ಕಟ್ಟಬೇಕು ದಂಡ.

ರೈಲಿನಲ್ಲಿ ಭೋಗಿಗಳ ಆಧಾರದ ಮೇಲೆ ಲಗೇಜ್ ಮಿತಿ ಇದ್ದು ಪ್ರಯಾಣ ಮಾಡುವ ಮುನ್ನ ನಿಯಮಗಳನ್ನ ತಿಳಿದುಕೊಳ್ಳಬೇಕು.

Indian Railway Luggage Rules: ಇತ್ತೀಚಿನ ದಿನಗಳಲ್ಲಿ ಭಾರತೀಯ ರೈಲ್ವೆ (Indian Railway) ನಿಯಮದಲ್ಲಿ ಸಾಕಷ್ಟು ರೀತಿಯ ನಿಯಮಗಳು ಬದಲಾಗಿವೆ. ರೈಲ್ವೆ ನಿಯಮಗಳ ಬದಲಾವಣೆಯ ಜೊತೆಗೆ ರೈಲ್ವೆ ಇಲಾಖೆ ಪ್ರಯಾಣಿಕರಿಗಾಗಿ ಹೊಸ ಹೊಸ ಸೌಲಭ್ಯಗಳನ್ನು ಕೂಡ ನೀಡುತ್ತಿವೆ.

ಇದೀಗ ರೈಲ್ವೆ ಇಲಾಖೆ ರೈಲು ಪ್ರಯಾಣಕ್ಕೆ ಸಂಬಂಧಿಸಿದಂತೆ ಹೊಸ ನಿಯಮವನ್ನು ಜಾರಿಗೊಳಿಸಿದೆ. ಪ್ರಯಾಣಿಕರು ರೈಲಿನಲ್ಲಿ ಲಗೇಜ್ ಸಾಗಿಸುವಲ್ಲಿ ಹೊಸ ನಿಯಮವನ್ನು ರೈಲ್ವೆ ಇಲಾಖೆ ಪರಿಚಯಿಸಿದೆ. ಲಗೇಜ್ ಗೆ ಸಂಭಂದಿಸಿದಂತೆ ರೈಲ್ವೆ ಇಲಾಖೆಯ ಹೊಸ ನಿಯಮದ ಬಗ್ಗೆ ತಿಳಿಯೋಣ.

Indian Railway Luggage Rules
Image Source: DNA India

ರೈಲಿನಲ್ಲಿ ಇಷ್ಟು ಲಗೇಜ್ ಮಾತ್ರ ಸಾಗಿಸಲು ಅವಕಾಶ
ಇದೀಗ ಭಾರತೀಯ ರೈಲ್ವೆ ಲಗೇಜ್ ಸಂಭಂದಿತ ಹೊಸ ನಿಯಮವನ್ನು ಜಾರಿಗೆ ತಂದಿದೆ. ರೈಲಿನಲ್ಲಿ ಎಷ್ಟು ಲಗೇಜ್ ತಗೆದುಕೊಂಡು ಹೋಗಬೇಕು ಅನ್ನುವುದರ ಬಗ್ಗೆ ನಿಯಮಗಳು ಇದ್ದು ಅದನ್ನ ತಿಳಿದುಕೊಂಡು ರೈಲಿನಲ್ಲಿ ಪ್ರಯಾಣ ಮಾಡುವುದು ಅತ್ಯವಶ್ಯಕವಾಗಿದೆ.

ರೈಲಿನ ಪ್ರಯಾಣಿಕರು ವಿವಿಧ ಕೋಚ್ ಗಳನ್ನೂ ನಿಗದಿಪಡಿಸಿರುತ್ತಾರೆ. ಪ್ರಯಾಣಿಕರು ನಿಗದಿಪಡಿಸಿದ ಕೋಚ್ ಗಳಿಗೆ ಅನುಗುಣವಾಗಿ ಲಗೇಜ್ ಗಳಿಗೆ ಹೊಸ ನಿಯಮವನ್ನು ತರಲಾಗಿದೆ. ವಿವಿಧ ವರ್ಗದ ಕೋಚ್ ಗಳಿಗೆ ನಿಗದಿಪಡಿಸಿದ ಮಿತಿಯ ವರೆಗೆ ಉಚಿತವಾಗಿ ಲಗೇಜ್ ಅನ್ನು ಇರಿಸಬಹುದು. ಮಿತಿಗಿಂತ ಹೆಚ್ಚಿನ ಲಗೇಜ್ ಸಾಗಿಸಿದ್ದಲ್ಲಿ ದಂಡ ವಿದಿಸಬೇಕಾಗುತ್ತದೆ.

Indian Railway Luggage Rules
Image Source: Hindusthan times

ರೈಲಿನಲ್ಲಿ ಲಗೇಜ್ ಇರಿಸಲು ಹೊಸ ನಿಯಮ
ವರ್ಗದ ಆಧಾರ್ ಮೇಲೆ ಲಗೇಜ್ ಗಳನ್ನೂ ಇರಿಸಲಾಗುತ್ತದೆ. ಎಸಿ 1 ಶ್ರೇಣಿಯ ಪ್ರಯಾಣಿಕರು 70 ಕೆಜಿ ಲಗೇಜ್ ಅನ್ನು ಉಚಿತವಾಗಿ ಸಾಗಿಸಬಹುದು ಮತ್ತು ಗರಿಷ್ಟ 150 ಕೆಜಿ ಲಗೇಜ್ ಅನ್ನು ಸಾಗಿಸಬಹುದು. ಎಸಿ 2 ಶ್ರೇಣಿಯ ಪ್ರಯಾಣಿಕರು 50 ಕೆಜಿ ಲಗೇಜ್ ಅನ್ನು ಉಚಿತವಾಗಿ ಸಾಗಿಸಬಹುದು ಮತ್ತು ಗರಿಷ್ಟ 100 ಕೆಜಿ ಲಗೇಜ್ ಅನ್ನು ಸಾಗಿಸಬಹುದು.

Join Nadunudi News WhatsApp Group

ಎಸಿ 3 ಅಥವಾ ಎಸಿ ಚೆರ್ ಕಾರ್ ಶ್ರೇಣಿಯ ಪ್ರಯಾಣಿಕರು 40 ಕೆಜಿ ಲಗೇಜ್ ಅನ್ನು ಉಚಿತವಾಗಿ ಸಾಗಿಸಬಹುದು ಮತ್ತು ಗರಿಷ್ಟ 40 ಕೆಜಿ ಲಗೇಜ್ ಅನ್ನು ಸಾಗಿಸಬಹುದು. ಸ್ಲೀಪರ್ ಕೋಚ್ ನ ಪ್ರಯಾಣಿಕರು 40 ಕೆಜಿ ಲಗೇಜ್ ಅನ್ನು ಉಚಿತವಾಗಿ ಸಾಗಿಸಬಹುದು ಮತ್ತು ಗರಿಷ್ಟ 80 ಕೆಜಿ ಲಗೇಜ್ ಅನ್ನು ಸಾಗಿಸಬಹುದು. ಎರಡನೇ ತರಗತಿಯ ಪ್ರಯಾಣಿಕರು 35 ಕೆಜಿ ಲಗೇಜ್ ಅನ್ನು ಉಚಿತವಾಗಿ ಸಾಗಿಸಬಹುದು ಮತ್ತು ಗರಿಷ್ಟ 70 ಕೆಜಿ ಲಗೇಜ್ ಅನ್ನು ಸಾಗಿಸಬಹುದು.

Indian Railway Luggage Rules
Image Source: Zee News

Join Nadunudi News WhatsApp Group