Indira Canteen: 5 ಗ್ಯಾರೆಂಟಿಗಳ ಕಾರಣ ರಾಜ್ಯದ ಅತಿ ದೊಡ್ಡ ಯೋಜನೆ ರದ್ದು, ಬೇಸರದಲ್ಲಿ ಜನತೆ

ಐದು ಉಚಿತ ಗ್ಯಾರಂಟಿ ಯೋಜನೆಯನ್ನು ಜಾರಿಗೊಳಿಸಿರುವ ಮದ್ಯೆ ಮಹತ್ವದ ಯೋಜನೆಯನ್ನೇ ಕೈಬಿಟ್ಟ ಸರ್ಕಾರ

Indira Canteen Latest News: ಸದ್ಯ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಐದು ಗ್ಯಾರಂಟಿ ಯೋಜನೆಗಳು ಜಾರಿಯಲ್ಲಿವೆ. ಲೋಕಸಭಾ ಚುನಾವಣೆಯ ಬಳಿಕ ರಾಜ್ಯದಲ್ಲಿ ಐದು ಗ್ಯಾರಂಟಿ ಯೋಜನೆಗಳು ಮುಂದುವರೆಯುವ ಬಗ್ಗೆ ಸಾಕಷ್ಟು ಪ್ರಶ್ನೆ ಹುಟ್ಟಿದವರು. ಕಾಂಗ್ರೆಸ್ ಕೆಲ ಶಾಸಕರು ಉಚಿತ ಗ್ಯಾರಂಟಿಗಳನ್ನು ಬಂದ್ ಮಾಡುವುದಾಗಿ ಹೇಳಿಕೆ ನೀಡಿದ್ದರು.

ರಾಜ್ಯದಲ್ಲಿ ಕಾಂಗ್ರೆಸ್ ಉಚಿತ ಗ್ಯಾರಂಟಿ ಯೋಜನೆಗಳು ರದ್ದಾಗುತ್ತದೆ ಎನ್ನುವ ಭೀತಿ ಜನರಲ್ಲಿ ಹೆಚ್ಚಾಗುತ್ತಿದ್ದಾರೆ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಯೋಜನೆಗಳನ್ನು ಮಧ್ಯದಲ್ಲೇ ನಿಲ್ಲಿಸುವುದಿಲ್ಲ ಎನ್ನುವ ಹೇಳಿಕೆಯನ್ನು ನೀಡಿದ್ದರು. ಇದರಿಂದ ಜನರು ಖುಷಿಯಲ್ಲಿದ್ದರು. ಆದರೆ ರಾಜ್ಯ ಸರ್ಕಾರ ಐದು ಉಚಿತ ಗ್ಯಾರಂಟಿ ಯೋಜನೆಯನ್ನು ಜಾರಿಗೊಳಿಸಿರುವ ಮದ್ಯೆ ರಾಜ್ಯದಲ್ಲಿ ಜಾರಿಗೆ ತರಬೇಕಾದ ಮಹತ್ವದ ಯೋಜನೆಯನ್ನೇ ಕೈಬಿಟ್ಟಿದೆ. ಈ ಬಗ್ಗೆ ಜನಸಮಾನ್ಯರು ಕರ್ನಾಟಕ ಸರ್ಕಾರವನ್ನು ದೂರುತ್ತಿದ್ದಾರೆ.

Indira Canteen Latest News
Image Credit: Indian Express

5 ಗ್ಯಾರೆಂಟಿಗಳ ಕಾರಣ ರಾಜ್ಯದ ಅತಿ ದೊಡ್ಡ ಯೋಜನೆ ರದ್ದು
ಸದ್ಯ ರಾಜ್ಯದಲ್ಲಿ ಸಿಎಂ ಕನಸಾಗಿದ್ದ ಇಂದಿರಾ ಕ್ಯಾಂಟೀನ್ ನಡೆಸುವ ಯೋಜನೆಯ ಬಗ್ಗೆ ಸಿದ್ದರಾಮಯ್ಯ ಅವರು ಹೆಚ್ಚು ಗಮನ ಹರಿಸುತ್ತಿಲ್ಲ ಎಂದು ಜನತೆ ದೂರುತ್ತಿದ್ದಾರೆ. ಇಂದಿರಾ ಮೊಬೈಲ್ ಕ್ಯಾಂಟೀನ್‌ ಗಳ ಸೇವೆ ಕಣ್ಮರೆಯಾಗುತ್ತಿದೆ. ಸಂಚಾರಿ ಕ್ಯಾಂಟೀನ್‌ ಗಳ ಇಂದಿನ ಸ್ಥಿತಿಯ ಬಗ್ಗೆ ಅಧಿಕಾರಿಗಳ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ. ಜಯನಗರ 9ನೇ ಬ್ಲಾಕ್‌ ನಲ್ಲಿರುವ ಸಂಚಾರಿ ಇಂದಿರಾ ಮೊಬೈಲ್ ಕ್ಯಾಂಟೀನ್‌ ನ ಬಾಗಿಲು ಮುರಿದಿದೆ.

ಒಂದು ಟೈರ್ ಕಾಣೆಯಾಗಿದೆ. ಎಲ್ಲೆಂದರಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿರುವ ವಸ್ತುಗಳು, ಸ್ವಚ್ಛತೆ ಮರೀಚಿಕೆಯಾಗಿದೆ. ಇಲ್ಲಿನ ಇಂದಿರಾ ಸಂಚಾರಿ ಕ್ಯಾಂಟೀನ್ ದುಸ್ಥಿತಿಗೆ ತಲುಪಿದ್ದು, ಜನರಿಗೆ ಊಟ, ತಿಂಡಿ ನೀಡಲು ಸಾಧ್ಯವಾಗುತ್ತಿಲ್ಲ. ಚಾಮರಾಜಪೇಟೆಯ ಹನುಮಂತನಗರದಲ್ಲಿ ಎರಡು ವರ್ಷಗಳಿಂದ ಇಂದಿರಾ ಮೊಬೈಲ್ ಕ್ಯಾಂಟೀನ್ ನಿಂತಿದೆ. ಗಾಡಿ ತುಕ್ಕು ಹಿಡಿದಿದ್ದು, ಗುಜರಿಗೆ ಗೆ ಸೇರಿದೆ. ಈ ಕ್ಯಾಂಟೀನ್ ಅನ್ನು ಶ್ರೀನಗರ ಬಸ್ ನಿಲ್ದಾಣದಲ್ಲಿ ಸಾವಿರಾರು ಜನರು ಬಳಸುತ್ತಿದ್ದರು. ಕಳೆದ ಎರಡು ವರ್ಷಗಳಿಂದ ಇದನ್ನು ನಿಲ್ಲಿಸಲಾಗಿದ್ದು, ಬಡವರು ಅನ್ನಕ್ಕಾಗಿ ಪರದಾಡುತ್ತಿದ್ದಾರೆ.

Indira Canteen Close
Image Credit: The Hans India

BBMP ಅಧಿಕಾರಿಗಳ ನಿರ್ಲಕ್ಷ್ಯವೇ ಇದಕ್ಕೆ ಕಾರಣ
ಇಂದಿರಾ ಕ್ಯಾಂಟೀನ್ ದುಸ್ತಿಗೆ ಬಿಬಿಎಂಪಿ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಒಟ್ಟಾರೆ ಸುಮಾರು 16 ಇಂದಿರಾ ಸಂಚಾರಿ ಕ್ಯಾಂಟೀನ್ ಗಳು ನಿರ್ವಹಣೆ ಕೊರತೆಯಿಂದ ಕೆಟ್ಟು ಹೋಗಿವೆ. ದುರಸ್ತಿ ಮಾಡಿ ಮತ್ತೆ ಆರಂಭಿಸುವಂತೆ ಕಳೆದ ವರ್ಷ ಆಗಸ್ಟ್ ನಲ್ಲಿ ಸರಕಾರ ಸೂಚನೆ ನೀಡಿತ್ತು.

Join Nadunudi News WhatsApp Group

ಅದರಂತೆ ಬಿಬಿಎಂಪಿ 1.22 ಕೋಟಿ ರೂ. ಖರ್ಚು ಮಾಡುತ್ತಿವೆ ಎನ್ನುವ ಬಗ್ಗೆ ಹೇಳಿಕೆ ನೀಡಿತ್ತು. ಆದರೆ ಕ್ಯಾಂಟೀನ್ ಸ್ಥಿತಿ ಇನ್ನೂ ಬದಲಾಗಿಲ್ಲ. ಅಲ್ಲಿ ಯಾವುದೇ ರೀತಿಯ ಬೆಳವಣಿಗೆ ನಡೆದಿಲ್ಲ. ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡುವ ಬರದಲ್ಲಿ ರಾಜ್ಯದ ಜನತೆಯನ್ನು ಈ ದೊಡ್ಡ ಯೋಜನೆಯಿಂದ ವಂಚಿತರಾಂಗುವಂತೆ ಸರ್ಕಾರ ಮಾಡಿದೆ ಎಂದು ಜನರು ದೂರುತ್ತಿದ್ದಾರೆ. ಇಂದಿರಾ ಕ್ಯಾಂಟೀನ್ ಬಗ್ಗೆ ಸಿದ್ದರಾಮಯ್ಯ ಅವರು ಗಮನ ಹರಿಸಬೇಕು ಎಂದು ಮನವಿ ಮಾಡಲಾಗಿದೆ.

Indira Canteen Latest News
Image Credit: Daijiworld

Join Nadunudi News WhatsApp Group