iPhone 14: ಅರ್ಧ ಬೆಲೆಗೆ ಖರೀದಿಸಿ ಐಫೋನ್ 14, ಐಫೋನ್ ಪ್ರಿಯರಿಗೆ ಈ ಆಫರ್ ಮತ್ತೆ ಸಿಗಲ್ಲ.

ಐಫೋನ್ 14 ಮೇಲೆ ಆಫರ್ ಘೋಷಣೆ, ಅರ್ಧ ಬೆಲೆಗೆ ಖರೀದಿಸಬಹುದು ಮೊಬೈಲ್

iPhone 14 Flipkart Offer: ದೇಶದ ದುಬಾರಿ ಬ್ರಾಂಡ್ ಆಗಿರುವ Apple ವರ್ಷಕ್ಕೆ ಒಂದರಂತೆ ಹೊಸ ಹೊಸ ಮಾದರಿಯ iPhone ಅನ್ನು ಬಿಡುಗಡೆ ಮಾಡುತ್ತಿರುತ್ತದೆ. ಇನ್ನು 2023 ರಲ್ಲಿ iPhone 15 ರ ಮಾದರಿ ಲಾಂಚ್ ಆಗಿದ್ದು ಭರ್ಜರಿ ಬೇಡಿಕೆ ಪಡೆದುಕೊಂಡಿದೆ. ಸದ್ಯ ಈ ವರ್ಷದಲ್ಲಿ ಈ iPhone 16 ಬಿಡುಗಡೆಗಾಗಿ ಕಂಪನಿ ಸಿದ್ಧತೆ ಮಾಡುತ್ತಿದೆ. ಈಗಾಗಲೇ iPhone 16 ನ ಫೀಚರ್ ನ ಬಗ್ಗೆ ಒಂದಿಷ್ಟು ಮಾಹಿತಿ ಕೂಡ ಸೋರಿಕೆಯಾಗಿದೆ. 

ಇನ್ನು ಕಂಪನಿಯು ಹೊಸ ಹೊಸ ಮಾದರಿಯನ್ನು ಲಾಂಚ್ ಮಾಡುತ್ತಿದ್ದಂತೆ ತನ್ನ ಹಳೆಯ ಮಾದರಿಗಳ ಬೆಲೆಯಲ್ಲಿ ಸ್ವಲ ಇಳಿಕೆ ಮಾಡುತ್ತದೆ. ಹಾಗೆಯೆ ವಿವಿಧ ಇ ಕಾಮರ್ಸ್ ವೆಬ್ ಸೈಟ್ ಗಳು ಕೂಡ ಐಫೋನ್ ಖಾರಿದಿಗೆ ಆಕರ್ಷಕ ರಿಯಾಯಿತಿಯನ್ನು ಕೂಡ ನೀಡುತ್ತವೆ. ಸದ್ಯ ಜನಪ್ರಿಯ ಇ ಕಾಮರ್ಸ್ ವೆಬ್ ಸೈಟ್ ಫ್ಲಿಪ್ ಕಾರ್ಟ್ ಇದೀಗ ಐಫೋನ್ 14 ಖರೀದಿಗೆ ಉತ್ತಮ ರಿಯಾಯಿತಿಯನ್ನು ನೀಡಿದೆ.

iphone 14 in offer sale
Image Credit: Original Source

ಅರ್ಧ ಬೆಲೆಗೆ ಖರೀದಿಸಿ ಐಫೋನ್ 14
ಜನಪ್ರಿಯ ಇ-ಕಾಮರ್ಸ್ ಪ್ಲಾಟ್‌ ಫಾರ್ಮ್ ಫ್ಲಿಪ್‌ ಕಾರ್ಟ್‌ ನಲ್ಲಿ ನಡೆಯುತ್ತಿರುವ ಬಿಗ್ ಸೇಲ್ ನಲ್ಲಿ ನೀವು ಐಫೋನ್ 14 ಅನ್ನು ಕಡಿಮೆ ಬೆಲೆಗೆ ಖರೀದಿಸಬಹುದು. iPhone 14 ಮಾರುಕಟ್ಟೆಯಲ್ಲಿ 79,900 ರೂ. ನಲ್ಲಿ ನಿಗದಿಯಾಗಿದೆ. ನೀವು 57 ಸಾವಿರಕ್ಕಿಂತ ಕಡಿಮೆ ಬೆಲೆಗೆ ಐಫೋನ್ 14 ಅನ್ನು ಖರೀದಿಸಬಹುದು. ಅಂದರೆ ನೀವು ಫ್ಲಿಪ್‌ ಕಾರ್ಟ್‌ ನಿಂದ 56,999 ರೂ. ಗೆ ಈ ಮಾದರಿಯನ್ನು ಖರೀದಿಸಬಹುದು. ಫ್ಲಿಪ್ ಕಾರ್ಟ್ ನಲ್ಲಿ ನೀವು 12,901 ರೂ.ಗಳ ನೇರ ರಿಯಾಯಿತಿಯನ್ನು ಪಡೆಯುತ್ತೀರಿ.

ಹಾಗೆಯೆ ಬ್ಯಾಂಕ್ ಆಫರ್ ಮೂಲಕ ನೀವು ಫ್ಲಿಪ್‌ ಕಾರ್ಟ್ ಆಕ್ಸಿಸ್ ಬ್ಯಾಂಕ್ ಕಾರ್ಡ್‌ನೊಂದಿಗೆ ಐಫೋನ್ ಖರೀದಿಸಿದರೆ ನೀವು 5% ಕ್ಯಾಶ್‌ ಬ್ಯಾಕ್ ಪಡೆಯುತ್ತೀರಿ. ಇದಲ್ಲದೇ ಎಕ್ಸ್ ಚೇಂಜ್ ಆಫರ್ ಅಡಿಯಲ್ಲಿ ರೂ . 48 ಸಾವಿರ ರಿಯಾಯಿತಿ ಕೂಡ ಲಭ್ಯವಿದೆ. ಇದಲ್ಲದೇ, UPI ವಹಿವಾಟಿನ ಮೇಲೆ ನೀವು ರೂ. 750 ರಿಯಾಯಿತಿ ಪಡೆಯಬಹುದು. ನೀವು iPhone 14 ಅನ್ನು ಫ್ಲಿಪ್ ಕಾರ್ಟ್ ನಲ್ಲಿ ಖರೀದಿಸಿದರೆ ಸಾಕಷ್ಟು ಹಣವನ್ನು ಉಳಿಸಬಹುದು.

Iphone 14 online offer sale
Image Credit: Original Source

iPhone 14 ನಲ್ಲಿ ಏನೆಲ್ಲಾ ಫೀಚರ್ ಇದೆ ಗೋತ್ತಾ..?
iPhone 14 ಮಾದರಿಯು A15 ಬಯೋನಿಕ್ ಚಿಪ್‌ ಸೆಟ್‌ ನೊಂದಿಗೆ ಬರುತ್ತದೆ. ಇದರ ಪಿಕ್ಸೆಲ್ ರೆಸಲ್ಯೂಶನ್ 2532×1170 ಆಗಿದೆ. ಇದರಲ್ಲಿ ನೀವು 12MP ಡ್ಯುಯಲ್ ಕ್ಯಾಮೆರಾಗಳನ್ನು ಪಡೆಯುತ್ತೀರಿ. ಗ್ರಾಹಕರು 128GB, 256GB ಮತ್ತು 512GB ಸ್ಟೋರೇಜ್ ರೂಪಾಂತರಗಳ ಆಯ್ಕೆಯನ್ನು ಪಡೆಯುತ್ತೀರಿ. ಇದು ಸೆರಾಮಿಕ್ ಶೀಲ್ಡ್ನ ಭದ್ರತೆಯೊಂದಿಗೆ ಬರುತ್ತದೆ. iPhone 14 3279mAh ಬ್ಯಾಟರಿ ಅವಧಿಯನ್ನು ಹೊಂದಿದೆ. ಇದು 15W ವೈರ್‌ ಲೆಸ್ ಚಾರ್ಜಿಂಗ್ ಬೆಂಬಲದೊಂದಿಗೆ ಬರಲಿದೆ.

Join Nadunudi News WhatsApp Group

iphone 14 new in offer price
Image Credit: Original Source

Join Nadunudi News WhatsApp Group