iPhone 14: ಕೇವಲ 38000 ಸಾವಿರಕ್ಕೆ ಖರೀದಿಸಿ ಐಫೋನ್ 14, ಐಫೋನ್ ಪ್ರಿಯರಿಗೆ ಭರ್ಜರಿ ಆಫರ್ ಘೋಷಣೆ

ಐಫೋನ್ 14 ಮೇಲೆ ಭರ್ಜರಿ ಆಫರ್, 38 ಸಾವಿರಕ್ಕೆ ಖರೀದಿಸಿ ಐಫೋನ್ 14

iPhone 14 Flipkart Offer: ದೇಶದಲ್ಲಿ ಐಫೋನ್ (iPhone) ಖರೀದಿ ಮಾಡುವವರ ಸಂಖ್ಯೆ ಹೆಚ್ಚುತ್ತಿದೆ. ಹೆಚ್ಚಿನವರಿಗೆ ಐಫೋನ್ ಖರೀದಿ ಮಾಡಬೇಕು ಎಂಬ ಕನಸಿರುತ್ತದೆ ಆದರೆ ಎಲ್ಲರಿಗೂ ಬಹಳ ದುಬಾರಿಯಾಗಿರುವ ಐಫೋನ್ ಅನ್ನು ಖರೀದಿ ಮಾಡಲು ಸಾಧ್ಯ ಆಗುವುದಿಲ್ಲ. ಆದರೆ ಇನ್ನುಮುಂದೆ ಹಾಗಿಲ್ಲ ಯಾರು ಬೇಕಾದರೂ ಐಫೋನ್ ಖರೀದಿ ಮಾಡಬಹುದಾಗಿದೆ. ಐಫೋನ್ 14 ಉತ್ತಮ ಆಫರ್ ನೊಂದಿಗೆ ಇನ್ನು ನಿಮ್ಮ ಕೈ ಸೇರಲಿದೆ. ಈ ಆಫರ್ ನ ಪ್ರಯೋಜನ ಪಡೆದು ಐಫೋನ್ ಖರೀದಿ ಮಾಡುವವರು ರಿಯಾಯಿತಿಯ ಬಗ್ಗೆ ಸಂಪೂರ್ಣ ಮಾಹಿತಿ ಪಡೆದುಕೊಳ್ಳಿ.

iPhone 14 Price In India
Image Credit: Hindustantimes

ಐಫೋನ್ 14 ಅನ್ನು ಬಹಳ ಅಗ್ಗದ ಬೆಲೆಯಲ್ಲಿ ಖರೀದಿ ಮಾಡಿ

ಐಫೋನ್ 14 ಖರೀದಿ ಮಾಡಲು ನಿಮಗೊಂದು ಸುವರ್ಣ ಅವಕಾಶ ಇಲ್ಲಿದೆ. E-Commerce ತಾಣವಾದ Flipkart Big Budget ಧಮಾಲ್ ಸೇಲ್‌ ನಲ್ಲಿ ಆಪಲ್ ಐಫೋನ್ 21, 800 ರೂ. ಭಾರೀ ಕಡಿತದೊಂದಿಗೆ ಸಿಗಲಿದೆ. ಈಗಾಗಲೇ ಮಾರುಕಟ್ಟೆಗೆ ಐಫೋನ್ 15 ಪರಿಚಯವಾಗಿದ್ದು, ಇದರ ಬಿಡುಗಡೆ ನಂತರ‌ ಐಫೋನ್ 14 ರ ಬೆಲೆ ಗಮನಾರ್ಹವಾಗಿ ಕಡಿಮೆಯಾಗ್ತಿದ್ದು, 2024 ರ ಹೊಸ ವರ್ಷದ ಆರಂಭದಲ್ಲಿ ಫ್ಲಿಪ್‌ಕಾರ್ಟ್ ಮೊದಲ ಬಾರಿಗೆ ಐಫೋನ್ 14 ಅನ್ನು ಕಡಿಮೆ ಬೆಲೆಗೆ ನೀಡುತ್ತಿದೆ.

21, 800 ರೂ. ಭಾರೀ ಕಡಿತದೊಂದಿಗೆ ಐಫೋನ್ 14 ಇದೀಗ ಗ್ರಾಹಕರಿಗೆ ಫ್ಲಿಪ್ ಕಾರ್ಟ್ ನಲ್ಲಿ ಕೇವಲ 38,199 ರೂ. ಗೆ ಸಿಗಲಿದೆ. ಸದ್ಯ ಫ್ಲಿಪ್‌ಕಾರ್ಟ್‌ನಲ್ಲಿ ಐಫೋನ್ 14 ಪ್ರಸ್ತುತ ಬೆಲೆ 59,999 ರೂ ಆಗಿದೆ. 2022 ರಲ್ಲಿ ಬಿಡುಗಡೆಯಾದ ಐಫೋನ್ ಪ್ರೊ, ಫೋನ್ ಮ್ಯಾಕ್ಸ್ ಆರಂಭಿಕ ಬೆಲೆ 79,900 ರೂ. ಇತ್ತು. ಆಪಲ್ ಐಫೋನ್ 15 ಸರಣಿಯ ಚೊಚ್ಚಲ ಬಿಡುಗಡೆ ನಂತರ ಐಫೋನ್ 14 ಬೆಲೆ 10,000 ರೂಪಾಯಿಗಳ ಕಡಿತ ಪಡೆಯಿತು. ಸದ್ಯ ಫ್ಲಿಪ್‌ಕಾರ್ಟ್‌ನಲ್ಲಿ ಐಫೋನ್ 14 ಪ್ರಸ್ತುತ ಬೆಲೆ 59,999 ರೂ ಇದ್ದು, ಅಧಿಕೃತ ಸ್ಟೋರ್ ಗಳಲ್ಲಿ 9,901 ರೂ.ಗಳ ರಿಯಾಯಿತಿಯನ್ನು ಹೊಂದಿದೆ. ಇದರೊಂದಿಗೆ ಬ್ಯಾಂಕ್ ಕೊಡುಗೆಗಳು ಸಹ ಲಭ್ಯವಿದೆ.

iPhone 14 Flipkart Offer
Image Credit: Moneycontrol

ಐಫೋನ್ 14 ಖರೀದಿ ಮಾಡಲು ಬ್ಯಾಂಕ್ ಆಫರ್ ಪಡೆಯಿರಿ

Join Nadunudi News WhatsApp Group

ಐಫೋನ್ 14 ಖರೀದಿ ಮಾಡುವವರು ಬ್ಯಾಂಕ್ ಆಫ್ ಬರೋಡಾ ಕ್ರೆಡಿಟ್ ಕಾರ್ಡ್ ಇಎಂಐ ವಹಿವಾಟುಗಳ ಮೂಲಕ ಹೆಚ್ಚುವರಿ ರೂ. 1,500 ರಿಯಾಯಿತಿಯನ್ನು ಪಡೆಯಬಹುದು. ಇದರಿಂದಾಗಿ ಮೊಬೈಲ್ ಬೆಲೆ 58,499 ರೂ. ಆಗಲಿದೆ. ಅಷ್ಟೇ ಅಲ್ಲದೇ ಹಳೆಯ ಸ್ಮಾರ್ಟ್‌ಫೋನ್‌ಗಳ ವಿನಿಮಯ ಮಾಡಿಕೊಂಡರೆ ಫ್ಲಿಪ್‌ಕಾರ್ಟ್ ರೂ. 20,300 ವರೆಗೆ ರಿಯಾಯಿತಿಯನ್ನು ನೀಡುತ್ತಿದೆ.

Join Nadunudi News WhatsApp Group