iPhone 15: ಮಾರುಕಟ್ಟೆಗೆ ಗ್ರಾಂಡ್ ಎಂಟ್ರಿ ಕೊಡಲು ಸಜ್ಜಾದ iPhone 15, ಬೆಲೆ ಮತ್ತು ಫೀಚರ್ ಕಂಡು ದಂಗಾದ ಗ್ರಾಹಕರು.

15 ದಿನದಲ್ಲಿ ಗ್ರಾಹಕರ ಕೈ ಸೇರಲಿದೆ ಐಫೋನ್ 15.

iPhone 15 Feature: ದೇಶಿಯ ಮಾರುಕಟ್ಟೆಯಲ್ಲಿ Apple ಬ್ರಾಂಡ್ ಅತೀ ಹೆಚ್ಚು ಜನಪ್ರಿಯತೆ ಪಡೆದಿದೆ. ಕಂಪನಿಯು ವಿವಿಧ ಮಾದರಿಯ ಐಫೋನ್ ಗಳನ್ನು ಮಾರುಕಟ್ಟೆಗೆ ಪರಿಚಯಿಸುವ ಮೂಲಕ ತನ್ನ ಮಾರಾಟವನ್ನು ಹೆಚ್ಚಿಸಿಕೊಳ್ಳುತ್ತಿದೆ. iPhone ಮಾರುಕಟ್ಟೆಯಲ್ಲಿ ಲಭ್ಯವಿರುವ ಅತೀ ದುಬಾರಿ ಬ್ರಾಂಡ್ ಆಗಿದೆ. ಇತರ ಆಂಡ್ರಾಯ್ಡ್ ಸ್ಮಾರ್ಟ್ ಫೋನ್ ಗಳಿಗಿಂತ iPhone ಮೌಲ್ಯ ಅಧಿಕವಾಗಿರುತ್ತದೆ.

iPhone 15 launch on September 12
Image Credit: Economictimes

ಮಾರುಕಟ್ಟೆಗೆ iPhone 15 ಗ್ರಾಂಡ್ ಎಂಟ್ರಿ
iPhone ದುಬಾರಿ ಬ್ರಾಂಡ್ ಆದರೂ ಕೂಡ ಜನರು ಹೆಚ್ಚಾಗಿ iPhone ಖರೀದಿಗೆ ಮನಸ್ಸು ಮಾಡುತ್ತಾರೆ. ಏಕೆಂದರೆ iPhone ಬಳಕೆದಾರರಿಗೆ ಹೆಚ್ಚಿನ ಫಚರ್ ಅನ್ನು ನೀಡುತ್ತದೆ. iPhone ನಲ್ಲಿ ಪ್ರತಿ ಅಪ್ಲಿಕೇಶನ್ ಬಳಕೆ ಕೂಡ ವಿಶೇಷವಾಗಿರುತ್ತದೆ. ಇನ್ನು Apple ಕಂಪನಿಯು ಈಗಾಗಲೇ ಹಲವಾರು ಮಾದರಿಯಲ್ಲಿ iPhone ಅನ್ನು ಬಿಡುಗಡೆ ಮಾಡಿದೆ. ಸಧ್ಯ ಮಾರುಕಟ್ಟೆಯಲ್ಲಿ iPhone 15 ಬಾರಿ ವೈರಲ್ ಆಗುತ್ತಿದೆ.

ಸೆಪ್ಟೆಂಬರ್ 12 ಕ್ಕೆ iPhone 15 ಲಾಂಚ್
ಕಂಪನಿಯು iPhone 15 ಗೆ ದಿನಾಂಕ ನಿಗದಿ ಮಾಡಿದ್ದು ಇನ್ನು ಕೆಲವೇ ದಿನಗಳಲ್ಲಿ iPhone ಭಾರತೀಯ ಮಾರುಕಟ್ಟೆಯಲ್ಲಿ ದೂಳೆಬ್ಬಿಸಲಿದೆ. Septembar 12 ರ ರಾತ್ರಿ 10 :30 ಕ್ಕೆ iPhone 15 ಅಧಿಕೃತವಾಗಿ ಲಾಂಚ್ ಆಗಲಿದೆ. ಇನ್ನು ಕೇವಲ 8 ದಿನಗಳಲ್ಲಿ ಬಹುನಿರೀಕ್ಷಿತ iPhone 15 ಮಾರುಕಟ್ಟೆಗೆ ಬಂದು ಭರ್ಜರಿ ಸದ್ದು ಮಾಡಲಿದೆ. ಸದ್ಯ ಐಫೋನ್ 15 ನಲ್ಲಿ iPhone 15, iPhone 15 Pro, iPhone 15 Plus, iPhone 15 Pro Max ನಾಲ್ಕು ಮಾದರಿಯ ಫೋನ್ ಅನ್ನು ನೋಡಬಹುದಾಗಿದೆ.

iPhone 15 Special Feature
Image Credit: Republicworld

iPhone 15 Special Feature
iPhone 15 6.1 ಇಂಚಿನ XDR ಡಿಸ್ ಪ್ಲೇ ಹೊಂದಿದ್ದು Dual ಕ್ಯಾಮರವನ್ನು ಒಳಗೊಂಡಿದೆ. ಇನ್ನು ಡಿಸ್ ಪ್ಲೇ 120HZ ರಿಫ್ರೆಶ್ ರೆಟ್ ಮತ್ತು ಆಲ್ ವೇಸ್ ಆನ್ ಡಿಸ್ ಪ್ಲೇ ಫೀಚರ್ ಅನ್ನು ಹೊಂದಿದೆ. ಐಫೋನ್ 15 ಪವರ್ ಫುಲ್ Bionic A16 SoC Processor ಅನ್ನು ಹೊಂದಿದೆ. ಐಫೋನ್ 15 iPhone 14 ನ ಮಾದರಿಯನ್ನು ಹೊಲಲಿದೆ.

ಮಾರುಕಟ್ಟೆಯಲ್ಲಿ iPhone 15 ಬೆಲೆ ಎಷ್ಟಿದೆ ಗೊತ್ತಾ..?
ಇನ್ನು ಐಫೋನ್ 15 ಮಾದರಿಯು 1TB ಸ್ಟೋರೇಜ್ ಆಯ್ಕೆಯನ್ನು ಹೊಂದಲಿದೆ. ಐಫೋನ್ 15 48 ಮೆಗಾಪಿಕ್ಸೆಲ್ ರಿಯಲ್ ಕ್ಯಾಮರಾಗಳನ್ನು ಹೊಂದಲಿದೆ. ಐಫೋನ್ 15 ಸುಮಾರು 3877 mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿರಲಿದೆ ಎಂದು ವರದಿಯಾಗಿದೆ. ಇನ್ನು ಐಫೋನ್ 14 ಮಾದರಿಯ ಬೆಲೆಯ ಆಧಾರದ ಮೇಲೆ ಐಫೋನ್ 15 ಗೆ ಸರಿಸುಮಾರು 79,900 ರೂ ಆರಂಭಿಕ ಬೆಲೆಯನ್ನು ಅಂದಾಜಿಸಲಾಗಿದೆ. ಇನ್ನು ಕಂಪನಿಯು ಈ ಮಾದರಿಯ ಬೆಲೆಯ ಬಗ್ಗೆ ಅಧಿಕೃತ ಘೋಷಣೆ ಹೊರಡಿಸಿಲ್ಲ.

Join Nadunudi News WhatsApp Group

Join Nadunudi News WhatsApp Group