iPhone Feature: ಐಫೋನ್ ಬಳಸುವ ಸಾಕಷ್ಟು ಜನರಿಗೆ ಇನ್ನೂ ತಿಳಿದಿಲ್ಲ ಈ ಸೀಕ್ರೆಟ್ ಫೀಚರ್, ಈಗಲೇ ಸೆಟ್ಟಿಂಗ್ ಮಾಡಿಕೊಳ್ಳಿ

ಐಫೋನ್ ಬಳಕೆದಾರರೆ ಈ ಸೀಕ್ರೆಟ್ ಫೀಚರ್ ಗಳ ಬಗ್ಗೆ ನಿಮಗೆ ಗೊತ್ತೆ...?

iPhone Secret Feature: Featureಸದ್ಯ ದೇಶದಲ್ಲಿ iPhone ಗಳು ಹೆಚ್ಚು ಬೇಡಿಕೆಯನ್ನು ಪಡೆಯುತ್ತಿದೆ. ಜನರು ಹೆಚ್ಚಿನ ಸಂಖ್ಯೆಯಲ್ಲಿ ಐಫೋನ್ ಖರೀದಿಸುತ್ತಿದ್ದಾರೆ. ಇತರ Brand ಗಳ Smartphone ಅನ್ನು ಬಳಸುವುದಕ್ಕಿಂತ iPhone ಬಳಕೆಯು ಬಹಳ ಭಿನ್ನವಾಗಿರುತ್ತದೆ ಎನ್ನಬಹುದು. ಹೌದು, iPhone ನಲ್ಲಿ ಹಲವು ವಿಭಿನ್ನ Feature ಗಳು ಇರುವ ಕಾರಣ Smartphone ಗಿಂತ ಹೆಚ್ಚಿನ ಅನುಭವನ್ನು ನೀಡುತ್ತದೆ.

ಇನ್ನು iPhone ಬಳಸುವ ಸಾಕಷ್ಟು ಜನರಿಗೆ iPhone ನಾಲ್ ಇರುವಂತಹ ಅದೆಷ್ಟೋ Feature ಗಳ ಬಗ್ಗೆ ಮಾಹಿತಿ ತಿಳಿದಿರುವುದಿಲ್ಲ. ಇದೀಗ ನಾವು ಈ ಲೇಖನದಲ್ಲಿ iPhone ಬಳಕೆದಾರರಿಗೆ ಕೆಲವು Secret Feature ಗಳ ಬಗ್ಗೆ ಮಾಹಿತಿ ಹೇಳಲಿದ್ದೇವೆ. ನೀವು ಈ ಲೇಖನವನ್ನು ಓದುವ ಮೂಲಕ iPhone Feature ಗಳ ಬಗ್ಗೆ ಮಾಹಿತಿ ತಿಳಿದುಕೊಂಡು ಅದರ ಪ್ರಯೋಜನವನ್ನು ಬಳಸಿಕೊಳ್ಳಬಹುದು.

iPhone Secret Features
Image Credit: tomsguide

ಐಫೋನ್ ಬಳಕೆದಾರರೆ ಈ ಸೀಕ್ರೆಟ್ ಫೀಚರ್ ಗಳ ಬಗ್ಗೆ ನಿಮಗೆ ಗೊತ್ತೆ…?
•Contact Poster Share
ನೀವು Contact ವಿಭಾಗದಲ್ಲಿ ಹೊಸ ಅನುಭವವನ್ನು ಪಡೆಯಲು ಈ ವೈಶಿಷ್ಟ್ಯಗಳನ್ನು ಬಳಸಬಹುದು. ಇದು ಫುಲ್ ಡಿಸ್ಪ್ಲೇ ಗಾತ್ರದ ಚಿತ್ರಗಳು ಮತ್ತು ಕಸ್ಟಮ್ ಫಾಂಟ್ ಮತ್ತು ವಿಭಿನ್ನ ಗಾತ್ರಗಳಲ್ಲಿ Contact ಮಾಹಿತಿಯನ್ನು ತೋರಿಸುತ್ತದೆ. ನಿಮ್ಮ Contact Poster ಅನ್ನು ನೀವು ಸ್ನೇಹಿತರು ಮತ್ತು ಕುಟುಂಬದೊಂದಿಗೆ ಹಂಚಿಕೊಳ್ಳಬಹುದು. ಇದಕ್ಕಾಗಿ ನೀವು Contact ವಿಭಾಗಕ್ಕೆ ಹೋಗಿ ನಂತರ Profile ಮೇಲೆ ಕ್ಲಿಕ್ ಮಾಡಿ. ನಂತರ Contact Poster ಮತ್ತು ಫೋಟೋ ಆಯ್ಕೆಮಾಡಿ ಮತ್ತು ನಂತರ Share ಆಯ್ಕೆ ಮಾಡಿ.

•Limiting Battery Charge
ನೀವು iOS 17 ಅಥವಾ ಹೊಸ ಆವೃತ್ತಿಯಲ್ಲಿ ರನ್ ಆಗುತ್ತಿರುವ iPhone ಅನ್ನು ಬಳಸುತ್ತಿದ್ದರೆ ಈ ವೈಶಿಷ್ಟ್ಯವೂ ಲಭ್ಯವಿರುತ್ತದೆ. ಅಂದರೆ ಬ್ಯಾಟರಿ ಚಾರ್ಜ್ ಅನ್ನು 80% ಗೆ ಸೀಮಿತಗೊಳಿಸಬಹುದು. ಇದು ಬ್ಯಾಟರಿಯ ಆರೋಗ್ಯವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಇದಕ್ಕಾಗಿ ನೀವು ಸೆಟ್ಟಿಂಗ್ಸ್ ವಿಭಾಗಕ್ಕೆ ಹೋಗಿ ನಂತರ ಬ್ಯಾಟರಿ ಆಯ್ಕೆಯನ್ನು ಕ್ಲಿಕ್ ಮಾಡಿ ನಂತರ Health and charging ಅನ್ನು ಕ್ಲಿಕ್ ಮಾಡಿ. ಇದರ ನಂತರ ನೀವು ಚಾರ್ಜಿಂಗ್ Optimization ಆಯ್ಕೆಯನ್ನು ನೋಡುತ್ತೀರಿ. ಅಲ್ಲಿ 80% ಗೆ ಮಿತಿ ಆಯ್ಕೆ ಸಿಗುತ್ತದೆ.

iPhone Secret Feature 2024
Image Credit: Sixcolors

•One handed mode
ನೀವು ಒಂದೇ ಕೈಯಿಂದ ಫೋನ್ ಬಳಸಬೇಕಾದರೆ ಈ ವೈಶಿಷ್ಟ್ಯಗಳು ಉಪಯುಕ್ತವಾಗುತ್ತವೆ. ಡಿಸ್ಪ್ಲೇಯ ಸುತ್ತಲೂ ಚಲಿಸಲು ನಿಮ್ಮ ಬೆರಳು ತುಂಬಾ ಚಿಕ್ಕದಾಗಿದ್ದರೆ ಡಿಸ್ಪ್ಲೇಯ ಕೆಳಗಿನಿಂದ ಕೆಳಕ್ಕೆ ಸ್ವೈಪ್ ಮಾಡುವ ಮೂಲಕ ಈ ವೈಶಿಷ್ಟ್ಯಗಳನ್ನು ಸಕ್ರಿಯಗೊಳಿಸಿ. ಹಾಗೆಯೇ ಪೂರ್ಣ ಪರದೆಯ ಮೋಡ್‌ ಗೆ ಹಿಂತಿರುಗಲು ಕೆಳಗಿನಿಂದ ಮೇಲಕ್ಕೆ ಸ್ವೈಪ್ ಮಾಡಿ.

Join Nadunudi News WhatsApp Group

•Screenshot Backup
ನಿಮ್ಮ ಐಫೋನ್‌ ನ ರಿಯರ್ ಪ್ಯಾನಲ್ ಅನ್ನು ಟ್ಯಾಪ್ ಮಾಡುವ ಮೂಲಕ Screenshot ಅನ್ನು ತೆಗೆದುಕೊಳ್ಳಬಹುದು. ಇದನ್ನು ಸಕ್ರಿಯಗೊಳಿಸಲು, ಸೆಟ್ಟಿಂಗ್‌ಗಳ ವಿಭಾಗದಲ್ಲಿ Accessibility ಕ್ಲಿಕ್ ಮಾಡಿ, Touch ಆಯ್ಕೆ ಮಾಡಿ ಮತ್ತು ನಂತರ ಬ್ಯಾಕ್ ಟ್ಯಾಪ್ ಕ್ಲಿಕ್ ಮಾಡಿ. ಇದರ ನಂತರ ಡಬಲ್ ಟ್ಯಾಪ್ ಮೇಲೆ ಕ್ಲಿಕ್ ಮಾಡಿ ನಂತರ ಸ್ಕ್ರೀನ್‌ ಶಾಟ್ ಅನ್ನು ಸಕ್ರಿಯಗೊಳಿಸಿ.

Join Nadunudi News WhatsApp Group