IRCTC Ticket Booking: IRCTC ಯಲ್ಲಿ ಟಿಕೆಟ್ ಬುಕ್ ಮಾಡುವವರಿಗೆ ಸಿಹಿಸುದ್ದಿ, ಈಗ ಒಂದೇ ಬಾರಿಗೆ ಇಷ್ಟು ಟಿಕೆಟ್ ಬುಕ್ ಮಾಡಬಹುದು.

IRCTC ಯಲ್ಲಿ ಟಿಕೆಟ್ ಬುಕ್ ಮಾಡುವವರಿಗೆ ಸಿಹಿಸುದ್ದಿ

IRCTC Ticket Booking Facility: ಸಾಮಾನ್ಯವಾಗಿ ರೈಲು ಪ್ರಯಾಣಕ್ಕೆ ಮುಖ್ಯವಾಗಿ ಟಿಕೆಟ್ ನ ಅಗತ್ಯ ಇರುತ್ತದೆ. ರೈಲ್ವೆ ಇಲಾಖೆಯು ಈ ಟಿಕೆಟ್ ಪಡೆಯುವ ಪ್ರಕ್ರಿಯೆಗೆ ಅದರದ್ದೇ ಆದ ನಿಯಮವನ್ನು ಅಳವಡಿಸಿರುತ್ತದೆ. ಇನ್ನು ಸಾರ್ವಜನಿಕ ವಲಯದ ಸಂಸ್ಥೆಯಾದ IRCTC ಸರ್ಕಾರೀ ಸ್ವಾಮ್ಯದ ಭಾರತೀಯ ರೈಲ್ವೆಗೆ ಟಿಕೆಟಿಂಗ್, ಕ್ಯಾಟರಿಂಗ್ ಮತ್ತು ಪ್ರವಾಸೋದ್ಯಮ ಸೇವೆಯನ್ನು ಒದಗಿಸುತ್ತದೆ.

ಹೆಚ್ಚಿನ ಜನರಿಗೆ IRCTC ID ಬಳಸಿ ಟಿಕೆಟ್ ಬುಕ್ ಮಾಡುತ್ತಾರೆ. ಸುಲಭ ವಿಧಾನದ ಮೂಲಕ ಟಿಕೆಟ್ ಬುಕಿಂಗ್ ಮಾಡಿಕೊಳ್ಳಬಹುದು. ಸದ್ಯ IRCTC ಟಿಕೆಟ್ ಬುಕಿಂಗ್ ಮಾಡುವವರಿಗೆ ಸಿಹಿ ಸುದ್ದಿ ನೀಡಿದೆ. ಇನ್ನುಮುಂದೆ ಟಿಕೆಟ್ ಬುಕಿಂಗ್ ಇನ್ನಷ್ಟು ಸರಳವಾಗಲಿದೆ.

IRCTC Ticket Booking Facility
Image Credit: Businesstoday

IRCTC ಯಲ್ಲಿ ಟಿಕೆಟ್ ಬುಕ್ ಮಾಡುವವರಿಗೆ ಸಿಹಿಸುದ್ದಿ
ವಾಸ್ತವವಾಗಿ ರೈಲ್ವೆ ಕಾಯಿದೆಯ ಸೆಕ್ಷನ್ 143 ರ ಪ್ರಕಾರ, ಅಧಿಕೃತವಾಗಿ ನೇಮಕಗೊಂಡ ವ್ಯಕ್ತಿ ಮಾತ್ರ ತಮ್ಮ ಐಡಿಯನ್ನು ಬಳಸಿಕೊಂಡು ಇತರರಿಗೆ ಟಿಕೆಟ್‌ ಗಳನ್ನು ಬುಕ್ ಮಾಡಬಹುದು. ಒಬ್ಬ ಸಾಮಾನ್ಯ ವ್ಯಕ್ತಿ ತನ್ನ ಕುಟುಂಬ ಮತ್ತು ತನ್ನ ವೈಯಕ್ತಿಕ ಐಡಿಯೊಂದಿಗೆ ಅದೇ ಹೆಸರನ್ನು ಹೊಂದಿರುವ ವ್ಯಕ್ತಿಗಳಿಗೆ ಮಾತ್ರ ಟಿಕೆಟ್‌ ಗಳನ್ನು ಬುಕ್ ಮಾಡಬಹುದು. ನಿಮ್ಮ ಸ್ನೇಹಿತರಿಗೆ ಅಥವಾ ಇತರರಿಗೆ ಟಿಕೆಟ್ ಬುಕ್ ಮಾಡಿದರೆ 10,000. ದಂಡ ಅಥವಾ 3 ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಲಾಗುತ್ತದೆ.

ಈಗ ಒಂದೇ ಬಾರಿಗೆ ಇಷ್ಟು ಟಿಕೆಟ್ ಬುಕ್ ಮಾಡಬಹುದು
IRCTC ವೆಬ್‌ ಸೈಟ್‌ ಪ್ರಕಾರ, ಒಬ್ಬ ವ್ಯಕ್ತಿ ಒಂದು ID ಯಲ್ಲಿ ಒಂದು ತಿಂಗಳಲ್ಲಿ 24 ಟಿಕೆಟ್‌ ಗಳನ್ನು ಬುಕ್ ಮಾಡಬಹುದು. ಆದರೆ ಅವರ ಐಡಿಯನ್ನು ಆಧಾರ್ ಕಾರ್ಡ್‌ಗೆ ಲಿಂಕ್ ಮಾಡಬೇಕು. ನಿಮ್ಮ ಐಡಿಗೆ ಆಧಾರ್ ಲಿಂಕ್ ಮಾಡದಿದ್ದರೆ ನೀವು ಅವರ ಐಡಿ ಯಿಂದ ತಿಂಗಳಿಗೆ 12 ಟಿಕೆಟ್‌ ಗಳನ್ನು ಮಾತ್ರ ಬುಕ್ ಮಾಡಲು ಅವಕಾಶವಿದೆ. ಆದರೆ ಆ 12 ಟಿಕೆಟ್‌ ಗಳು ನಿಮಗೆ ಮತ್ತು ನಿಮ್ಮ ಕುಟುಂಬಕ್ಕೆ ಮಾತ್ರ ಮೀಸಲಿಡಬೇಕು. ನೀವು IRCTC ID ಬಳಸಿ ತತ್ಕಾಲ್ AC ಟಿಕೆಟ್ ಅನ್ನು ಬುಕ್ ಮಾಡಲು ಬಯಸಿದರೆ ನೀವು 10 ಗಂಟೆಯ ನಂತರ ಪ್ರಾರಂಭಿಸಬೇಕು. ಅಲ್ಲದೇ ನಾನ್ ಎಸಿ ಟಿಕೆಟ್ ಬುಕ್ ಮಾಡುವವರು ಬೆಳಗ್ಗೆ 11 ಗಂಟೆಯ ನಂತರ ಬುಕ್ ಮಾಡಬಹುದು.

IRCTC Ticket Booking
Image Credit: Informalnewz

Join Nadunudi News WhatsApp Group

Join Nadunudi News WhatsApp Group