Isha Ambani Necklace: ತಮ್ಮನ ಮದುವೆಯಲ್ಲಿ ಇಶಾ ಅಂಬಾನಿ ಧರಿಸಿದ ನೆಕ್ಲೆಸ್ ಬೆಲೆ ಎಷ್ಟು ಗೊತ್ತಾ…? ದುಬಾರಿ ನೆಕ್ಲೆಸ್

ಇಶಾ ಅಂಬಾನಿ ಧರಿಸಿದ ನೆಕ್ಲೆಸ್ ಬೆಲೆಯೆಷ್ಟು ಗೊತ್ತಾ...?

Isha Ambani Necklace Price: ದೇಶದ ಶ್ರೀಮಂತ ವ್ಯಕ್ತಿಯಾಗಿರುವ ಮುಕೇಶ್ ಅಂಬಾನಿ ತಮ್ಮ ಕಿರಿಯ ಮಗನ ಮದುವೆಯನ್ನು ಇಡೀ ದೇಶವೇ ತಿರುಗಿ ನೋಡುವಂತೆ ಮಾಡಿದ್ದಾರೆ. ಅನಂತ್ ಅಂಬಾನಿ ಹಾಗೂ ರಾಧಿಕಾ ಮದುವೆ ಜುಲೈ 12 ರಂದು ಬಹಳ ವಿಜೃಂಭಣೆಯಿಂದ ನಡೆಯಿತು. ಸದ್ಯ ಅನಂತ್ ಅಂಬಾನಿ ಮದುವೆ ಮುಗಿದಿದೆ. ಆದರು ಕೂಡ ಇವರ ಮದುವೆಯ ಬಗ್ಗೆ ಈಗಲೂ ಚರ್ಚೆ ನಡೆಯುತ್ತಲೇ ಇದೆ.

ಸರಿಸುಮಾರು 5 ಸಾವಿರ ಕೋಟಿ ಖರ್ಚು ಮಾಡಿ ಮುಕೇಶ್ ಅಂಬಾನಿ ತಮ್ಮ ಮಗನ ಮದುವೆಯನ್ನು ಮಾಡಿಸಿದ್ದಾರೆ. ಇನ್ನು ಅನಂತ್ ಮದುವೆಯ ಸುದ್ದಿಯ ಜೊತೆಗೆ ಅಂಬಾನಿ ಕುಟುಂಬ ಮದುವೆಗಾಗಿ ಧರಿಸಿದ ವಸ್ತ್ರಾಭರಣಗಳ ಬಗ್ಗೆ ಕೂಡ ಚರ್ಚೆ ಜೋರಾಗಿಯೇ ನಡೆಯುತ್ತಿದೆ. ಅನಂತ್ ಅಂಬಾನಿ ಮದುವೆಯಲ್ಲಿ ಇಶಾ ಅಂಬಾನಿ ದುಬಾರಿ ಬೆಲೆಯ ನೆಕ್ಲೆಸ್ ಧರಿಸಿ ಎಲ್ಲರ ಗಮನ ಸೆಳೆದಿದ್ದರು. ಸದ್ಯ ನಾವೀಗ ಈ ಲೇಖನದಲ್ಲಿ ಇಶಾ ಅಂಬಾನಿ ಧರಿಸಿದ ನೆಕ್ಲೆಸ್ ಬಗ್ಗೆ ಮಾಹಿತಿ ನೀಡಲಿದ್ದೇವೆ.

Isha Ambani Pink Diamond Necklace
Image Credit: News9live

ದುಬಾರಿ ನೆಕ್ಲೆಸ್ ಧರಿಸಿದ ಇಶಾ ಅಂಬಾನಿ
ಆಧುನಿಕತೆ ಮತ್ತು ಐಷಾರಾಮಿ ಪ್ರತಿರೂಪವಾಗಿರುವ ಇಶಾ ಅಂಬಾನಿ ತಮ್ಮ ಸಹೋದರ ಅನಂತ್ ಅಂಬಾನಿ ಅವರ ಮದುವೆಯಲ್ಲಿ ಐತಿಹಾಸಿಕ ಪ್ರದರ್ಶನ ನೀಡುವ ಮೂಲಕ ಎಲ್ಲರ ಗಮನ ಸೆಳೆದರು. ಈ ಸಂದರ್ಭದಲ್ಲಿ ಕಾಂತಿಲಾಲ್ ಛೋಟಾಲಾಲ್ ವಿನ್ಯಾಸಗೊಳಿಸಿದ ಅತ್ಯಂತ ದುಬಾರಿ ವಜ್ರಾಭರಣ “ಗಾರ್ಡನ್ ಆಫ್ ಲವ್” ಧರಿಸಿ ಎಲ್ಲರನ್ನೂ ಆಶ್ಚರ್ಯಗೊಳಿಸಿದರು. ಈ ಸಂದರ್ಭದಲ್ಲಿ ಇಶಾ ಧರಿಸಿರುವ ಈ ಆಭರಣವು ಗುಲಾಬಿ, ನೀಲಿ, ಹಸಿರು ಮತ್ತು ಕಿತ್ತಳೆ ಬಣ್ಣಗಳಲ್ಲಿ ಅಮೂಲ್ಯವಾದ ವಜ್ರಗಳಿಂದ ಕೂಡಿದ ವಿಶಿಷ್ಟ ಸೃಷ್ಟಿಗೆ ಹೆಸರುವಾಸಿಯಾಗಿದೆ.

ಇಶಾ ಅಂಬಾನಿ ಧರಿಸಿದ ನೆಕ್ಲೆಸ್ ಬೆಲೆಯೆಷ್ಟು ಗೊತ್ತಾ…?
ಇದು ಹೂಬಿಡುವ ಉದ್ಯಾನದ ಅನುಭವವನ್ನು ನೀಡುತ್ತದೆ. ಇನ್ನೂ ಇದನ್ನು ತಯಾರಿಸಲು 4000 ಗಂಟೆಗಳು ತೆಗೆದುಕೊಳ್ಳಲಾಗಿದೆಯಂತೆ. ಇನ್ನು ನೆಕ್ಲೆಸ್ ಅದರ ಮಧ್ಯದಲ್ಲಿ ಆಕರ್ಷಕ ಹೃದಯದ ಆಕಾರದ ನೀಲಿ ವಜ್ರವನ್ನು ಹೊಂದಿದೆ. ಇದು ಸಮೃದ್ಧಿಯ ಸಂಕೇತವಾಗಿದೆ. ಇನ್ನು ಇಶಾ ಅಂಬಾನಿ ಧರಿಸಿರುವ ನೆಕ್ಲೆಸ್ ಬೆಲೆ ಸರಿಸುಮಾರು 6 ರಿಂದ 7 ಕೋಟಿ ರೂ. ಆಗಿದೆ. ಇದು ಸಂಪೂರ್ಣವಾಗಿ ಕಟ್ ಡೈಮಂಡ್ಸ್ ನಿಂದ ಮಾಡಲ್ಪಟ್ಟಿದೆ. ಇದು ಈ ಆಭರಣವನ್ನು ಇನ್ನಷ್ಟು ವಿಶಿಷ್ಟಗೊಳಿಸುತ್ತದೆ. ವಜ್ರದ ಕಿವಿಯೋಲೆಗಳು ಮತ್ತು ಬೆರಗುಗೊಳಿಸುವ ಮಾಂಗ್ ಟಿಕ್ಕಾ ಜೊತೆಗೆ, ಈ ಆಭರಣಗಳು ಇಶಾ ತನ್ನ ಸಹೋದರನ ಮದುವೆಯಲ್ಲಿ ಆಕರ್ಷಕವಾಗಿ ಕಾಣುವಂತೆ ಮಾಡಿತು.

Isha Ambani Necklace Price
Image Credit: Bollywoodshaadis

Join Nadunudi News WhatsApp Group

Join Nadunudi News WhatsApp Group