ITR Filling: ಇನ್ಮುಂದೆ ಇಂತಹ ಜನರು ಆದಾಯ ತೆರಿಗೆ ಕಟ್ಟುವ ಅಗತ್ಯ ಇಲ್ಲ, ತೆರಿಗೆ ನಿಯಮದಲ್ಲಿ ಮತ್ತೆ ಬದಲಾವಣೆ.

ಇನ್ಮುಂದೆ ಇಂತಹ ಜನರು ಆದಾಯ ತೆರಿಗೆ ಕಟ್ಟುವ ಅಗತ್ಯ ಇಲ್ಲ.

ITR Filling Update: ಸದ್ಯ ದೇಶದಲ್ಲಿ ತೆರಿಗೆಗೆ ಸಂಬಂಧಿಸಿದ ನಿಯಮಗಳನ್ನು ಹೆಚ್ಚು ಕಠಿಣಗೊಳಿಸಲಾಗುತ್ತಿದೆ. ತೆರಿಗೆ ಪಾವತಿದಾರರು ತೆರಿಗೆ ಇಲಾಖೆಯ ಪ್ರತಿ ನಿಯಮವನ್ನು ಅನುಸರಿಸುವುದು ಕಡ್ಡಾಯವಾಗಿದೆ. ಇನ್ನು ಆದಾಯ ಇಲಾಖೆಯು ತೆರಿಗೆ ನಿಯವನ್ನು ಜಾರಿಗೊಳಿಸುವುದರ ಜೊತೆಗೆ ಕೆಲ ಆದಾಯಗಳಿಗೆ ತೆರಿಗೆ ವಿನಾಯಿತಿಯನ್ನು ಕೂಡ ಘೋಷಿಸಿದೆ.

ಆದಾಯ ಇಲಾಖೆಯ ನಿಯಮಾನುಸಾರ ತೆರಿಗೆ ಪಾವತಿದಾರರು ತೆರಿಗೆ ವಿನಾಯಿತಿಯನ್ನು ಪಡೆಯಬಹುದು. ಅದರಲ್ಲೂ ಮುಖ್ಯವಾಗಿ ಆದಾಯ ಇಲಾಖೆಯು ಹಿರಿಯ ನಾಗರಿಕರಿಗೆ ತೆರಿಗೆ ವಿನಾಯಿತಿಯನ್ನು ನೀಡುತ್ತಿದೆ. ಆದಾಯ್ ಇಲಾಖೆ ITR ಸಲ್ಲಿಕೆಗೆ ಹೊಸ ಯೋಜನೆಯನ್ನು ಬಿಡುಗಡೆ ಮಾಡಿದ್ದು, ಹಿರಿಯ ನಾಗರಿಕರಿಗೆ ಈ ಯೋಜನೆಯಡಿ ತೆರಿಗೆ ವಿನಾಯಿತಿಯನ್ನು ಪಡೆದುಕೊಳಬಹುದು.

ITR Filing Update
Image Credit: Paytm

ಇನ್ಮುಂದೆ ಇಂತಹ ಜನರು ಆದಾಯ ತೆರಿಗೆ ಕಟ್ಟುವ ಅಗತ್ಯ ಇಲ್ಲ
ಹಿರಿಯ ನಾಗರಿಕರು ಏನಂದ್ರೆ 60 ವರ್ಷಕ್ಕಿಂತ ಮೇಲ್ಪಟ್ಟವರು ಮತ್ತು ಹಿರಿಯ ನಾಗರಿಕರ ತೆರಿಗೆ ಸ್ಲ್ಯಾಬ್ ಅಡಿಯಲ್ಲಿ ತಮ್ಮ ತೆರಿಗೆಗಳನ್ನು ಪಾವತಿಸುತ್ತಾರೆ. ಪ್ರಸ್ತುತ 60 ರಿಂದ 80 ವರ್ಷದೊಳಗಿನ ನಿವೃತ್ತ ಉದ್ಯೋಗಿಗಳಿಗೆ ಮೂಲ ತೆರಿಗೆ ವಿನಾಯಿತಿ ಮಿತಿ 3 ಲಕ್ಷ ರೂ. ಆಗಿದೆ. ಇನ್ನು 60 ವರ್ಷಕ್ಕಿಂತ ಮೇಲ್ಪಟ್ಟವರು ನಿವೃತ್ತ ಉದ್ಯೋಗಿಗಳು ವಾರ್ಷಿಕ ಆದಾಯ 3 ಲಕ್ಷದ ಮೇಲೆ ITR ಸಲ್ಲಿಸುವ ಅಗತ್ಯವಿಲ್ಲ.

ಆದರೆ ಅತ್ಯಂತ ಹಿರಿಯ ನಾಗರಿಕರಿಗೆ ಈ ಮಿತಿ 5 ಲಕ್ಷ ರೂ. ಆಗಿದೆ. ಪಿಂಚಣಿ ಅಥವಾ ಬ್ಯಾಂಕ್ ಬಡ್ಡಿ ಆದಾಯವನ್ನು ಮಾತ್ರ ಅವಲಂಬಿಸಿರುವ 75 ವರ್ಷಕ್ಕಿಂತ ಮೇಲ್ಪಟ್ಟ ನಾಗರಿಕರು 5 ಲಕ್ಷ ರೂ. ವರೆಗೆ ITR ಸಲ್ಲಿಸುವ ಅಗತ್ಯ ಇರುವುದಿಲ್ಲ. ಪಿಂಚಣಿ ಅಥವಾ ಬ್ಯಾಂಕ್ ಬಡ್ಡಿ ಆದಾಯವನ್ನು ಹೊರತುಪಡಿಸಿ ಬೇರೆ ಯಾವುದೇ ಆದಾಯವಿದ್ದರೆ ಐಟಿಆರ್ ಸಲ್ಲಿಸುವುದು ಅವಶ್ಯಕವಾಗಿದೆ.

Income Tax Return Latest News
Image Credit: a2ztaxcorp

ತೆರಿಗೆ ವಿನಾಯಿತಿಯನ್ನು ಹೇಗೆ ಪಡೆಯಬಹುದು..?
ಆದಾಯ ತೆರಿಗೆಯು ಮುಂಗಡ ತೆರಿಗೆ ಪಾವತಿಯ ಮೇಲೆ ಹಿರಿಯ ನಾಗರಿಕರಿಗೆ ಪರಿಹಾರವನ್ನು ನೀಡುತ್ತದೆ. ಹಿರಿಯ ನಾಗರಿಕರಿಗೆ ವ್ಯಾಪಾರ ಅಥವಾ ವೃತ್ತಿಯಿಂದ ಯಾವುದೇ ಆದಾಯವಿಲ್ಲದಿದ್ದರೆ, ಅವರು ಮುಂಗಡ ತೆರಿಗೆ ಪಾವತಿಸಬೇಕಾಗಿಲ್ಲ. ಹಿರಿಯ ನಾಗರಿಕರು ಉಳಿತಾಯ ಬ್ಯಾಂಕ್ ಖಾತೆ ಮತ್ತು ಸ್ಥಿರ ಠೇವಣಿಗಳಿಂದ ಪಡೆದ ಬಡ್ಡಿಯ ಮೇಲೆ ವಾರ್ಷಿಕವಾಗಿ ರೂ. 50,000 ವರೆಗೆ ಕಡಿತವನ್ನು ಪಡೆಯಬಹುದು.

Join Nadunudi News WhatsApp Group

ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 80DDB ಅಡಿಯಲ್ಲಿ ಅನಾರೋಗ್ಯದ ವೆಚ್ಚಗಳಿಗಾಗಿ ಹಿರಿಯ ನಾಗರಿಕರು 1 ಲಕ್ಷದವರೆಗೆ ಕಡಿತವನ್ನು ಪಡೆಯಬಹುದು. ಇದರ ಜೊತೆಗೆ 80 ವರ್ಷಕ್ಕಿಂತ ಮೇಲ್ಪಟ್ಟ ಹಿರಿಯ ನಾಗರಿಕರು ತಮ್ಮ ರಿಟರ್ನ್ ಅನ್ನು ಐಟಿಆರ್ 1 ಅಥವಾ ಐಟಿಆರ್ 4 ರಲ್ಲಿ ಸಲ್ಲಿಸುತ್ತಿದ್ದರೆ, ಅವರು ಅದನ್ನು ಪೇಪರ್ ಮೋಡ್‌ ನಲ್ಲಿ ಮಾಡಬಹುದು. ಇದಕ್ಕೆ ಇ-ಫೈಲಿಂಗ್ ಕಡ್ಡಾಯ ಇರುವುದಿಲ್ಲ.

Join Nadunudi News WhatsApp Group