Jailer Collection: ಒಂದು ತಿಂಗಳಾದರೂ ಕಡಿಮೆ ಆಗಿಲ್ಲ ಜೈಲರ್ ಚಿತ್ರದ ಕಲೆಕ್ಷನ್, ಬಾಕ್ಸ್ ಆಫೀಸ್ ಧೂಳಿಪಟ ಮಾಡಿದ ರಜಿನಿ.

ಕೋಟಿ ಕಲೆಕ್ಷನ್ ಮಾಡಿ ಬಾಕ್ಸ್ ಆಫೀಸ್ ನಲ್ಲಿ ಜೈಲರ್ ದೂಳೆಬ್ಬಿಸಿದೆ.

Jailer Movie Worldwide Collection: ತಮಿಳಿನ ಖ್ಯಾತ ನಟ ರಜನಿಕಾಂತ್ (Rajinikanth) ಅವರ ಬಹುನಿರೀಕ್ಷಿತ ಜೈಲರ್(Jailer) ಸಿನಿಮಾ ಆಗಸ್ಟ್ 10 ರಂದು ಭರ್ಜರಿಯಾಗಿ ಬಿಡುಗಡೆಗೊಂಡಿದೆ. ರಜನಿಕಾಂತ್ ಅವರ ಯಾವುದೇ ಸಿನಿಮಾ ತೆರೆ ಕಂಡರೂ ಭರ್ಜರಿ ಸದ್ದು ಮಾಡುತ್ತದೆ. ರಜನಿಕಾಂತ್ ಅವರ ಅಭಿನಯಕ್ಕೆ ಕೋಟ್ಯಾಂತರ ಅಭಿಮಾನಿಗಳು ಮನಸೋತಿದ್ದಾರೆ.

ಬಿಡುಗಡೆಗೊಂಡು ಜೈಲರ್ ಸಿನಿಮಾ ಬಾಕ್ಸ್ ಆಫೀಸ್ ಅನ್ನು ಕೊಳ್ಳೆಹೊಡೆಯುತ್ತಿದೆ. ರಜನಿಕಾಂತ್ ಅಭಿನಯದ ಜೈಲರ್ ಸಿನಿಮಾ ಬಿಡುಗಡೆಗೊಂಡ ಕೆಲವೇ ದಿನಗಳಲ್ಲಿ ಕೋಟಿ ಕಲೆಕ್ಷನ್ ಮಾಡಿದೆ. ಈ ಮೂಲಕ ಬಾಕ್ಸ್ ಆಫೀಸ್ ನಲ್ಲಿ ಜೈಲರ್ ದೂಳೆಬ್ಬಿಸಿದೆ. ತಮಿಳು ಚಿತ್ರರಂಗದಲ್ಲಿ ಜೈಲರ್ ಚಿತ್ರ ಬಾರಿ ಸಂಚನ ಮೂಡಿಸಿದೆ. ಜೈಲರ್ ಚಿತ್ರ ತನ್ನ ಕಲೆಕ್ಷನ್ ಮೂಲಕ ಹೊಸ ದಾಖಲೆ ಬರೆದಿದೆ ಎಂದರೆ ತಪ್ಪಾಗಲಾರದು.

jailer movie worldwide collection
Image Credit: Livemint

ಬಾಕ್ಸ್ ಆಫೀಸ್ ನಲ್ಲಿ ಭರ್ಜರಿ ಸದ್ದು ಮಾಡುತ್ತಿದೆ ಜೈಲರ್
ಜೈಲರ್ ಚಿತ್ರಕ್ಕೆ ನೋಡುಗರಿಂದ ಒಳ್ಳೆಯ ರೆಸ್ಪಾನ್ಸ್ ಸಿಕ್ಕಿದ್ದು ಬಿಡುಗಡೆಯಾದ ಕೆಲವೇ ದಿನಗಳಲ್ಲಿ ದಾಖಲೆಯ ಕಲೆಕ್ಷನ್ ಮಾಡಿದೆ. ಬಿಡುಗಡೆಯಾದ ಮೊದಲ ದಿನವೇ ಸುಮಾರು 50 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದ ಜೈಲರ್ ಚಿತ್ರ ಎರಡನೆಯ ದಿನ ಸುಮಾರು 45 ಕೋಟಿ ಕಲೆಕ್ಷನ್ ಮಾಡಿದೆ ಎಂದು ಅಂದಾಜು ಮಾಡಲಾಗಿದೆ. ಇನ್ನು ಜೈಲರ್ ಚಿತ್ರ ಬಿಡುಗಡೆಯಾದ ಮೂರು ದಿನದಲ್ಲಿ ಸುಮಾರು 150 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಿದ್ದು ಹೊಸ ರೆಕಾರ್ಡ್ ಬರೆದಿದೆ.

ಬಿಡುಗಡೆಯಾಗಿ 27 ದಿನ ಕಳೆದರು ಮುಗಿದಿಲ್ಲ ಜೈಲರ್ ಚಿತ್ರದ ಗಳಿಕೆ
ಜೈಲರ್ ಚಿತ್ರ ಬಿಡುಗಡೆಫಾಂಡು ಇಂದಿಗೆ 27 ದಿನಗಳು ಕಳೆದಿದೆ. ಆದರೂ ಕೂಡ ಕಬಾಲಿಯ ಜೈಲರ್ ಹವಾ ಇನ್ನು ಕಡಿಮೆಯಾಗಿಲ್ಲ. ಜೈಲರ್ 500 ಕೋಟಿ ಹಣ ಗಳಿಸಿ 2022 ರ ನಂತರ 500 ಕೋಟಿ ಕ್ಲಬ್ ಸೇರಿದ ಮೂರನೇ ಚಿತ್ರ ಎನ್ನುವ ಹೆಗ್ಗಳಿಕೆ ಪಾಡೆದುಕೊಂಡಿದೆ. ರಜನಿಕಾಂತ್ ಅಭಿನಯದ ಜಾಗತಿಕ ಮಟ್ಟದಲ್ಲಿ ಭರ್ಜರಿ 640 ಕೋಟಿ ಹಣ ಕಬಳಿಸಿದೆ. ಇನ್ನು ಕೂಡ ಜೈಲರ್ ಚಿತ್ರದ ಮೇಲಿನ ಕ್ರೇಜ್ ಹಾಗೆ ಇದ್ದು ಮುಂದಿನ ದಿನಗಳಲ್ಲಿ 650 ಕೋಟಿ ಕ್ಲಬ್ ಸೇರುವುದರಲ್ಲಿ ಯಾವುದೇ ಸಂದೇಹವಿಲ್ಲ.

jailer movie worldwide collection
Image Credit: Bhaskar

ಜೈಲರ್ ಚಿತ್ರದ ರಜನಿಕಾಂತ್ ಜೊತೆ ಶಿವಣ್ಣ
ಇನ್ನು ಮನೋಬಾಲ ವಿಜಯಬಾಲನ್ ಅವರು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಂಚಿಕೊಳ್ಳುವ ಮೂಲಕ ಜೈಲರ್ ಚಿತ್ರದ ಬಾಕ್ಸ್ ಆಫೀಸ್ ಗಳಿಕೆಯ ಬಗ್ಗೆ ಮಾಹಿತಿ ನೀಡಿದ್ದಾರೆ. ಇನ್ನು ಜೈಲರ್ ಚಿತ್ರ ಹಲವು ಭಾಷೆಗಳಲ್ಲಿ ರಿಲೀಸ್ ಆಗಿದ್ದು, ಜೈಲರ್ ನಲ್ಲಿ ಶಿವರಾಜ್ ಕುಮಾರ್ (Shiva Rajkumar) ಇರುವ ಕಾರಣ ಕನ್ನಡಿಗರು ಚಿತ್ರಕ್ಕೆ ಭರ್ಜರಿ ರೆಸ್ಪಾನ್ಸ್ ನೀಡಿದ್ದಾರೆ.

Join Nadunudi News WhatsApp Group

ಇನ್ನು ಜೈಲರ್ ಚಿತ್ರದಲ್ಲಿ ಶಿವರಾಜ್ ಕುಮಾರ್ ರಜನಿಕಾಂತ್ ಅವರ ಗೆಳೆಯನ ಪಾತ್ರ ಮಾಡಿದ್ದು ಚಿತ್ರದ ಕ್ಲೈಮ್ಯಾಕ್ಸ್ ನಲ್ಲಿ ಶಿವಣ್ಣ ಎಲ್ಲರ ಗಮನ ಸೆಳೆದಿದ್ದಾರೆ. ಇನ್ನು ಮುಂದಿನ ದಿನಗಳಲ್ಲಿ ಜೈಲರ್ ಚಿತ್ರ ಎಷ್ಟು ಕಲೆಕ್ಷನ್ ಮಾಡಲಿದೆ ಎನ್ನುವುದನ್ನು ಕಾದು ನೋಡಬೇಕಿದೆ.

Join Nadunudi News WhatsApp Group