Jio Annual Plan: 365 ದಿನ ಉಚಿತ OTT ಮತ್ತು ಅನಿಯಮಿತ 5G ಡೇಟಾ, Jio ಗ್ರಾಹಕರಿಗೆ ಭರ್ಜರಿ ಪ್ಲ್ಯಾನ್ ಘೋಷಣೆ.

Jio ಗ್ರಾಹಕರಿಗೆ 365 ದಿನ ಉಚಿತ OTT ಮತ್ತು ಅನಿಯಮಿತ 5G ಡೇಟಾ

Jio 3227 Annual Recharge Plan: ಇದೀಗ ದೇಶದಲ್ಲಿ ಏರ್ಟೆಲ್, ವೊಡಾಫೋನ್, ಐಡಿಯಾ, ಬಿಎಸ್ಎನ್ಎಲ್, ನಂತಹ ಪ್ರಮುಖ ಟೆಲಿಕಾಂ ಕಂಪನಿಗಳು ಜನರಿಗೆ ಉತ್ತಮ ನೆಟ್ವರ್ಕ್ ಅನ್ನು ನೀಡುತ್ತಿದೆ. ದೇಶದಲ್ಲಿ ಅತಿ ಹೆಚ್ಚು ಗ್ರಾಹಕರನ್ನು ಹೊಂದಿರುವ ಟೆಲಿಕಾಂ ಕಂಪನಿ ಎಂದರೆ ಅದು Jio.

Jio ತನ್ನ ಉತ್ತಮ ಸೇವೆಗಳ ಮೂಲಕ ಗ್ರಾಹಕರನ್ನು ಸೆಳೆಯುತ್ತಿದೆ. ಜಿಯೋ ಗ್ರಾಹಕರು ಅನಿಯಮಿತ ಡೇಟಾ ಪ್ರಯೋಜನಗಳನ್ನು ಅತಿ ಕಡಿಮೆ ಬೆಲೆಗೆ ಪಡೆಯುತ್ತಿದ್ದಾರೆ. ಮಾಸಿಕ, ತ್ರೈಮಾಸಿಕ, ಅರ್ಧ ವಾರ್ಷಿಕ, ವಾರ್ಷಿಕ ಯೋಜನೆಗಳು ಜಿಯೋ ಗ್ರಾಹಕರಿಗೆ ಕಡಿಮೆ ಬೆಲೆಗೆ ಸಿಗುತ್ತಿದೆ. ಇದೀಗ ಜಿಯೋ ತನ್ನ ವಾರ್ಷಿಕ ವ್ಯಾಲಿಡಿಟಿ ರಿಚಾರ್ಜ್ ಪ್ಲಾನ್ ಅನ್ನು ಹೆಚ್ಚಿನ ಪ್ರಯೋಜನಗಳೊಂದಿಗೆ ಕಡಿಮೆ ಬೆಲೆಯಲ್ಲಿ ಪರಿಚಯಿಸಿದೆ.

Jio Annual Recharge Plan
Image Credit: Thebegusarai

Jio ಗ್ರಾಹಕರಿಗೆ ಭರ್ಜರಿ ಪ್ಲ್ಯಾನ್ ಘೋಷಣೆ
Jio Network ತನ್ನ ಬಳಕೆದಾರರಿಗೆ ವಿವಿಧ ರೀತಿಯ ವಾರ್ಷಿಕ ರಿಚಾರ್ಜ್ ಪ್ಲ್ಯಾನ್ ಅನ್ನು ಬಿಡುಗಡೆ ಮಾಡಿದೆ. Jio ಬಳಕೆದಾರರಿಗೆ ಒಂದು ದಿನದ 15 ರೂ. ರಿಚಾರ್ಜ್ ಪ್ಲಾನ್ ನಿಂದ 365 ದಿನಗಳ 3227 ರೂ. ಯೋಜನೆಗಳು ಕೂಡ ಲಭ್ಯವಿದೆ. ಇನ್ನು ಬಳಕೆದಾರರಿಗೆ ಮಾಸಿಕ ಪ್ಲಾನ್ ಗಿಂತ ವಾರ್ಷಿಕ ಪ್ಲಾನ್ ಗಳು ಹೆಚ್ಚಿನ ಹಣವನ್ನು ಉಳಿಸುತ್ತದೆ ಎನ್ನಬಹುದು.

ಬಳಕೆದಾರರು ವಾರ್ಷಿಕ ಪ್ಲ್ಯಾನ್ ನಲ್ಲಿ ಯಾವ ರಿಚಾರ್ಜ್ ಪ್ಲ್ಯಾನ್ ಆಯ್ಕೆ ಮಾಡಿಕೊಳ್ಳುವುದು ಎನ್ನುವ ಗೊಂದಲ್ಲಿರಬಹುದು. ಇದೀಗ Jio ಪರಿಚಯಿಸಿರುವ ಎಲ್ಲಾ ವಾರ್ಷಿಕ ಯೋಜನೆಗಳಲ್ಲಿ ಬೆಸ್ಟ್ ರಿಚಾರ್ಜ್ ಪ್ಲ್ಯಾನ್ ಯಾವುದೇ ಎನ್ನುವ ಬಗ್ಗೆ ವಿವರ ತಿಳಿಯೋಣ. ನೀವು jio ಬಳಕೆದಾರರಾಗಿದ್ದರೆ ಈ ರಿಚಾರ್ಜ್ ಪ್ಲ್ಯಾನ್ ಅನ್ನು ಬಳಸಿಕೊಂಡು ಒಂದು ವರ್ಷದವರೆಗೆ ಎಲ್ಲ ಪ್ರಯೋಜನವನ್ನು ಪಡೆಯಬಹುದು.

365 ದಿನ ಉಚಿತ OTT ಮತ್ತು ಅನಿಯಮಿತ 5G ಡೇಟಾ
•ಜಿಯೋ ತನ್ನ ಗ್ರಾಹಕರಿಗಾಗಿ 365 ದಿನಗಳ ಮಾನ್ಯತೆಯ ರಿಚಾರ್ಜ್ ಪ್ಲ್ಯಾನ್ ಅನ್ನು ಘೋಷಿಸಿದ್ದು, ರೂ. 3227 ರಿಚಾರ್ಜ್ ಮಾಡಿದರೆ ಅನ್ಲಿಮಿಟೆಡ್ ಪ್ಲ್ಯಾನ್ ನ ಪ್ರಯೋಜನವನ್ನು ಪಡೆಯಬಹುದು.

Join Nadunudi News WhatsApp Group

•ಪ್ರತಿನಿತ್ಯ 2.5GB ಡೇಟಾ ಜೊತೆಗೆ 100 SMS ಗಳ ಪ್ರಯೋಜನವನ್ನು ಪಡೆಯಬಹುದು.

•ಜಿಯೊದ ಈ ವಾರ್ಷಿಕ ಯೋಜನೆಯು ಬಳಕೆದಾರರಿಗೆ ಒಟ್ಟಾರೆ 730GB ಡೇಟಾವನ್ನು ನೀಡುತ್ತಿದೆ.

•ಈ ವಾರ್ಷಿಕ ರಿಚಾರ್ಜ್ ಪ್ಲಾನ್ ನಲ್ಲಿ Jio Cinema, Jio Security , Jio Cloud ಸೇರಿದಂತೆ Amazon Prime ನ ಉಚಿತ ಚಂದಾದಾರಿಕೆಯನ್ನು ಪಡೆಯಬಹುದು.

•Netflix, Disney+ Hotstar, SonyLIV ಯೋಜನೆಗಳು, ZEE5 ಯೋಜನೆಗಳು ಮತ್ತು ZEE5-SonyLIV ಕಾಂಬೊ ಯೋಜನೆಗಳೊಂದಿಗೆ ವಿವಿಧ ಯೋಜನೆಗಳನ್ನು ಜಿಯೊದ ಈ 3227 ಪ್ಲಾನ್ ಬಳಕೆದಾರರಿಗೆ ಒದಗಿಸುತ್ತದೆ.

Jio 3227 Annual Recharge Plan
Image Credit: Jagran

Join Nadunudi News WhatsApp Group