New Jio Plan: 28 ದಿನಗಳ ಪ್ರತಿನಿತ್ಯ 3GB ಡೇಟಾ ಜೊತೆಗೆ ಎಲ್ಲಾ OTT ಕೂಡ ಫ್ರೀ, Jio ಗ್ರಾಹಕರಿಗೆ ಇನ್ನೊಂದು ಅಗ್ಗದ ಪ್ಲ್ಯಾನ್.

ಜಿಯೋ ಗ್ರಾಹಕರಿಗೆ ಪ್ರತಿ ನಿತ್ಯ 3GB ಡೇಟಾ ಲಭ್ಯವಿರುವ ಅಗ್ಗದ ರಿಚಾರ್ಜ್ ಪ್ಲ್ಯಾನ್.

Jio 399 Rs Recharge Plan Details: ಭಾರತದಲ್ಲಿ Reliance jio ಅತಿ ಹೆಚ್ಚು ಗ್ರಾಹಕರನ್ನು ಪಡೆದಿದೆ. Jio ತನ್ನ 5G ಸೇವೆಯ ಮೂಲಕ ಜನರಿಗೆ ಇನ್ನಷ್ಟು ಹತ್ತಿರವಾಗುತ್ತಿದೆ. ವಿವಿಧ ಟೆಲಿಕಾಂ ಕಂಪನಿಗಳಿಗೆ ಹೋಲಿಸಿದರೆ Jio ಅತಿ ಬೇಗದ ನೆಟ್ವರ್ಕ್ ಅನ್ನು ನೀಡುತ್ತದೆ ಎನ್ನಬಹುದು. Jio ಬಳಕೆದಾರರು ಹೈ ಸ್ಪೀಡ್ ನೆಟ್ವರ್ಕ್ ನ ಜೊತೆಗೆ ಹೆಚ್ಚಿನ ರಿಚಾರ್ಜ್ ಪ್ಲಾನ್ ಗಳನ್ನೂ ಪಡೆಯುತ್ತಿದ್ದಾರೆ.

ಇನ್ನು ಇತ್ತೀಚಿಗೆ ಪರಿಚಯಿಸಿರುವ 5G ಸೆಬೆಯು ಬಳಕೆದಾರರಿಗೆ ಅನಿಯಮಿತ ಡೇಟಾವನ್ನು ನೀಡುತ್ತಿದೆ. ಸದ್ಯ ಜಿಯೋದಲ್ಲಿ ಭರ್ಜರಿ ಮಾಸಿಕ ಪ್ಲಾನ್ ಒಂದು ಪರಿಚಯವಾಗಿದೆ. ನೀವು ಈ ಯೋಜನೆಯಲ್ಲಿ ಅನಿಯಮಿತ ಪ್ರಯೋಜನವನ್ನು ಪಡೆಯುವುದರ ಜೊತೆಗೆ OTT ಚಂದಾದಾರಿಕೆಯನ್ನು ಉಚಿತವಾಗಿ ಪಡೆಯಬಹುದು.

Jio 399 Rs Recharge Plan
Image Credit: Telecomtalk

ಪ್ರತಿನಿತ್ಯ 3GB ಡೇಟಾ ಜೊತೆಗೆ ಎಲ್ಲಾ OTT ಕೂಡ ಫ್ರೀ
ಇದೀಗ ಜಿಯೋದ ಪ್ರತಿ ನಿತ್ಯ 3GB ಡೇಟಾ ಲಭ್ಯವಿರುವ ಅಗ್ಗದ ರಿಚಾರ್ಜ್ ಪ್ಲ್ಯಾನ್ ಅನ್ನು ಗ್ರಾಹಕರಿಗೆ ಪರಿಚಯಿಸಿದೆ. ಜಿಯೋದ ಈ ಎಲ್ಲಾ ರಿಚಾರ್ಜ್ ಪ್ಲ್ಯಾನ್ ಗಳಲ್ಲಿ ಬಳಕೆದಾರರು jio TV, Jio Cinema ಹಾಗೆ jio Cloud ನ ಚಂದಾದಾರಿಕೆಯನ್ನು ಪಡೆಯಬಹುದಾಗಿದೆ.

ರಿಲಯನ್ಸ್ ಜಿಯೋ ಹಲವು ಯೋಜನೆಗಳನ್ನು ಹೊಂದಿದ್ದು, ಇದೀಗ ಕಡಿಮೆ ಬೆಲೆಗೆ 3GB ಡೇಟಾ ಜೊತೆಗೆ ಅನಿಯಮಿತ ಕರೆ ಲಭ್ಯವಾಗುವ ಯೋಜನೆ ಪರಿಚಯಿಸಿದೆ. ಈ ಯೋಜನೆಯನ್ನು ಸಕ್ರಿಯಗೊಳಿಸಿದರೆ ಬಳಕೆದಾರರು Bonus Data ವನ್ನು ಪಡೆಯಬಹುದು. Jio ಯಾವ ಯೋಜನೆಯಲ್ಲಿ ಈ ಎಲ್ಲ ಪ್ರಯೋಜನ ಲಭ್ಯವಿದೆ ಎನ್ನುವ ಬಗ್ಗೆ ವಿವರ ಇಲ್ಲಿದೆ.

Jio 399 Rs Recharge Plan Details
Image Credit: Gadgets360

28 ದಿನಗಳ ಮಾನ್ಯತೆಯೊಂದಿಗೆ Jio ಗ್ರಾಹಕರಿಗೆ ಇನ್ನೊಂದು ಅಗ್ಗದ ಪ್ಲ್ಯಾನ್
ಜಿಯೋದ 399 ರೂಪಾಯಿ ಯೋಜನೆ 28 ದಿನಗಳ ಮಾನ್ಯತೆಯನ್ನು ಪಡೆದಿದೆ. ಈ ಯೋಜನೆಯಲ್ಲಿ ಪ್ರತಿದಿನ 3GB ಡೇಟಾವನ್ನು ಪಡೆಯಬಹುದು. Jio ಈ 399 ಯೋಜನೆಯಲ್ಲಿ ನಿಮಗೆ 84GB ಡೇಟಾ ಹಾಗೂ ಪ್ರತಿದಿನ 100 SMS ಗಳ ಜೊತೆಗೆ ಉಚಿತ ಕರೆ ಲಭ್ಯವಿರುತ್ತದೆ. ಈ ಯೋಜನೆಯನ್ನು ಸಕ್ರಿಯಗೊಳಿಸಿಕೊಂಡರೆ ಹೆಚ್ಚುವರಿಯಾಗಿ 6GB ಡೇಟಾವನ್ನು ಪಡೆದು ಒಟ್ಟಾರೆ 90GB ಬಳಸಿಕೊಳ್ಳಬಹುದು. ಇನ್ನು 5G ಸೇವೆ ಲಭ್ಯವಿರುವವರು ಅನಿಯಮಿತ 5G ಡೇಟಾವನ್ನು ಬಳಸಿಕೊಳ್ಳಬಹುದು.

Join Nadunudi News WhatsApp Group

Join Nadunudi News WhatsApp Group