Jio And Airtel: ಒಂದು ಫ್ಯಾಮಿಲಿಗೆ ಒಂದು ರಿಚಾರ್ಜ್, Jio ಮತ್ತು Airtel ಗ್ರಾಹಕರಿಗೆ ಬಂಪರ್ ರಿಚಾರ್ಜ್ ಪ್ಲ್ಯಾನ್ ಘೋಷಣೆ

ಇಡೀ ಫ್ಯಾಮಿಲಿಗೆ ಒಂದೇ ಯೋಜನೆಯಲ್ಲಿ Unlimited ಕರೆ ಮತ್ತು ಡೇಟಾ ನೀಡುವ ಬೆಸ್ಟ್ Jio ಮತ್ತು Airtel ಪ್ಲಾನ್

Jio And Airtel Recharge Plans: ದೇಶದಲ್ಲಿ ಬಹಳ ಪ್ರಸಿದ್ದಿ ಪಡೆದ ಅತಿದೊಡ್ಡ ಟೆಲಿಕಾಂ ಕಂಪನಿಗಳಾಗಿರುವ ರಿಲಯನ್ಸ್ ಜಿಯೋ (Jio) ಮತ್ತು ಭಾರ್ತಿ ಏರ್ಟೆಲ್ (Airtel) ತಮ್ಮ ಬಳಕೆದಾರರಿಗೆ ಕೈಗೆಟಕುವ ಬೆಲೆಗೆ ಒಂದೇ ಯೋಜನೆಯಲ್ಲಿ ಮನೆಯವರಿಗೆಲ್ಲ ಹಂಚುವ ಅತ್ಯುತ್ತಮವಾದ ಫ್ಯಾಮಿಲಿ ಪೋಸ್ಟ್‌ಪೇಯ್ಡ್ ಪ್ಲಾನ್‌ಗಳನ್ನು ನೀಡುತ್ತಿವೆ.

ಈ ಪ್ಲಾನ್ ಬಗ್ಗೆ ಹೆಚ್ಚಿನವರಿಗೆ ತಿಳಿದಿಲ್ಲ ಹಾಗು ಈ ಪ್ಲಾನ್ ಬಗ್ಗೆ ಪ್ರಿಪೇಯ್ಡ್ ಬಳಕೆದಾರರಿಗೆ ಅಷ್ಟಾಗಿ ಮಾಹಿತಿ ಇಲ್ಲ. ಇಡೀ ಕುಟುಂಬಕ್ಕೆ ಅನುಕೂಲವಾಗುವ ಈ ಪ್ಲಾನ್ ಬಗ್ಗೆ ನೀವು ತಿಳಿದು ಈ ಬಂಪರ್ ಆಫರ್ ಅನ್ನು ಬಳಸಿಕೊಳ್ಳಿ.

Jio And Airtel
Image Credit: Deccanherald

ಕುಟುಂಬಕ್ಕೆ ಒಂದೇ ರಿಚಾರ್ಜ್ ಪ್ಲಾನ್ ಅನ್ನು ಅಳವಡಿಸಿಕೊಳ್ಳಿ

ಜಿಯೋ ಮತ್ತು ಏರ್‌ಟೆಲ್ ಸಿಮ್ ಬಳಕೆ ಮಾಡುವವರಿಗೆ ಮಾಸಿಕ ಪ್ಲಾನ್ ಬಹಳ ದುಬಾರಿ ಆಗಿರಬಹುದು ಹಾಗು ಮನೆಯ ಪ್ರತಿಯೊಬ್ಬ ಸದಸ್ಯರು ಪ್ರತ್ಯೇಕವಾಗಿ ರಿಚಾರ್ಜ್ ಮಾಡುವುದು ಬಹಳ ನಷ್ಟ ಆಗಿರುತ್ತದೆ. ಹಾಗಾಗಿ ಈ ಪ್ಲ್ಯಾನ್ ಮೂಲಕ ನೀವು ಇಡೀ ಕುಟುಂಬಕ್ಕೆ ಒಮ್ಮೆಲೇ ರಿಚಾರ್ಜ್ ಮಾಡಿಸಿಕೊಳ್ಳಬಹುದಾಗಿದೆ. ಹಾಗಾಗಿ ಜಿಯೋ ಮತ್ತು ಏರ್‌ಟೆಲ್‌ನ ಕುಟುಂಬ ಪೋಸ್ಟ್ ಪೇಯ್ಡ್ ಯೋಜನೆಯನ್ನು ತೆಗೆದುಕೊಳ್ಳಬೇಕು ಇದು ಮಾಸಿಕ ಮೊಬೈಲ್ ರೀಚಾರ್ಜ್ ಯೋಜನೆಯ ವೆಚ್ಚವನ್ನು ಕಡಿಮೆ ಮಾಡುವುದಲ್ಲದೆ ಎಲ್ಲರಿಗೂ ಸಹಾಯಕ್ಕೆ ಬರಲಿದೆ.

Jio And Airtel Recharge Plans
Image Credit: Connexionblog

ರಿಲಯನ್ಸ್ ಜಿಯೋ (Jio) 399 ಯೋಜನೆಗಳ ಸಂಪೂರ್ಣ ಮಾಹಿತಿ

Join Nadunudi News WhatsApp Group

ರಿಲಯನ್ಸ್ ಜಿಯೋ (Jio) 399 ಯೋಜನೆ ಪೋಸ್ಟ್‌ಪೇಯ್ಡ್ ಯೋಜನೆ ಆಗಿದ್ದು, ಈ ಯೋಜನೆ ಒಂದು ತಿಂಗಳ ಮಾನ್ಯತೆಯೊಂದಿಗೆ ಬರುತ್ತದೆ. ಇದರಲ್ಲಿ ಮುಖ್ಯ ಸಿಮ್ ಜೊತೆಗೆ 3 ಫ್ಯಾಮಿಲಿ ಸಿಮ್‌ಗಳನ್ನು ಸೇರಿಸಬಹುದು. ಪ್ರತಿ ಸಿಮ್‌ಗೆ ಪ್ರತ್ಯೇಕವಾಗಿ 99 ರೂಪಾಯಿ ಪಾವತಿಸಬೇಕಾಗುತ್ತದೆ. ಈ ಯೋಜನೆಯಲ್ಲಿ 75GB ಡೇಟಾ ಲಭ್ಯವಿದೆ. ಪ್ರತಿ ಸಿಮ್‌ನಲ್ಲಿ 5GB ಹೆಚ್ಚುವರಿ ಡೇಟಾವನ್ನು ಒದಗಿಸಲಾಗಿದೆ. ಈ ಯೋಜನೆಗಾಗಿ ಒಂದೇ ಬಾರಿಗೆ 500 ರೂಪಾಯಿ ಭದ್ರತಾ ಮೊತ್ತವನ್ನು ಪಾವತಿಸಬೇಕಾಗುತ್ತದೆ ಹಾಗೆಯೆ ಒಮ್ಮೆಲೇ ಕುಟುಂಬದ ಇನ್ನಿತರರು ಈ ಯೋಜನೆಯ ಲಾಭ ಪಡೆಯಬಹುದಾಗಿದೆ.

Join Nadunudi News WhatsApp Group