Jio New Feature Phone: 2000 ರೂಪಾಯಿಗೂ ಕಡಿಮೆ ಬೆಲೆಗೆ ಇನ್ನೊಂದು 4G ಮೊಬೈಲ್ ಲಾಂಚ್, ಅಂಬಾನಿ ಕಡೆಯಿಂದ

2000 ಕ್ಕೂ ಕಡಿಮೆ ಬಜೆಟ್ ನಲ್ಲಿ ಲಾಂಚ್ ಆಯ್ತು ಜಿಯೋ 4G ಫೋನ್

Jio Bharat J1 4G: ದೇಶದಲ್ಲಿ Jio ಅತಿ ಹೆಚ್ಚು ಗ್ರಾಹಕರನ್ನು ಹೊಂದಿದ್ದು ಪ್ರಮುಖ ಟೆಲಿಕಾಂ ಕಂಪನಿಯಾಗಿದೆ. ಜಿಯೋ (Jio) ಇದೀಗ 5G ನೆಟ್ ವರ್ಕ್ ನೊಂದಿಗೆ ಹೆಚ್ಚಿನ ಗ್ರಾಹಕರನ್ನು ಸೆಳೆಯುತ್ತಿದೆ. ಜಿಯೋ ರಿಲಯನ್ಸ್ ಗ್ರಾಹಕರಿಗೆ ಹೆಚ್ಚಿನ ಅನುಕೂಲವನ್ನು ಮಾಡಿಕೊಟ್ಟಿದೆ.

ಇನ್ನು ಈಗಾಗಲೇ ಜಿಯೋ ಫೋನ್ ಕೂಡ ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. ಲಕ್ಷಾಂತರ ಜನರು ಜಿಯೋ ಫೋನ್ ಅನ್ನು ಬಳಸುತ್ತಿದ್ದಾರೆ. ಇದೀಗ ಜಿಯೋ ರಿಲಯನ್ಸ್ ಮತ್ತೊಂದು ಅತ್ಯಾಕರ್ಷಕ ಜಿಯೋ ಫೋನ್ ಅನ್ನು ಮಾರುಕಟ್ಟೆಯಲ್ಲಿ ಪರಿಚಯಿಸಿದೆ. ಜಿಯೋ ಕಂಪನಿಯ ನೂತನ 4G ಫೋನ್ ನ ಬಗ್ಗೆ ತಿಳಿಯಲು ಈ ಲೇಖನವನ್ನು ಓದಿ.

Jio Bharat J1 4G
Image Credit: Banglahunt

2000 ಕ್ಕೂ ಕಡಿಮೆ ಬಜೆಟ್ ನಲ್ಲಿ ಲಾಂಚ್ ಆಯ್ತು ಜಿಯೋ 4G ಫೋನ್
ಇದೀಗ ರಿಲಯನ್ಸ್ ಜಿಯೋ ಮತ್ತೊಂದು ಅಗ್ಗದ ಫೀಚರ್ ಫೋನ್ ಅನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಈ ಫೀಚರ್ ಫೋನ್ ಅನ್ನು Jio Bharat J1 4G ಹೆಸರಿನೊಂದಿಗೆ ಬಿಡುಗಡೆ ಮಾಡಲಾಗಿದೆ. ಕಳೆದ ವರ್ಷ ಅಂದರೆ 2023 ರಲ್ಲಿ ಕಂಪನಿಯು ಜಿಯೋ ಭಾರತ್ ಸರಣಿಯನ್ನು ಪ್ರಾರಂಭಿಸಿತು. ಅಂದಿನಿಂದ ಈ ಸರಣಿಯಲ್ಲಿ ಭಾರತ್ ವಿ2, ಭಾರತ್ ವಿ2 ಕಾರ್ಬನ್ ಮತ್ತು ಭಾರತ್ ಬಿ1 ಫೋನ್‌ ಗಳನ್ನು ಬಿಡುಗಡೆ ಮಾಡಿದೆ. ಈಗ Jio Bharat J1 4G ಮಾರುಕಟ್ಟೆಯನ್ನು ಪ್ರವೇಶಿಸಿದೆ. ಈ ಹಿಂದೆ ಬಿಡುಗಡೆಯಾದ ಫೋನ್‌ ಗಳಿಗಿಂತ ಸ್ವಲ್ಪ ಹೆಚ್ಚಿನ ಬೆಲೆಯಲ್ಲಿ ಇದನ್ನು ಬಿಡುಗಡೆ ಮಾಡಲಾಗಿದೆ.

ಇನ್ನು Jio Bharat J1 4G ಬೆಲೆ 1799 ರೂ. ಆಗಿದೆ. ಇದು ಕಪ್ಪು ಅಥವಾ ಬೂದು ಬಣ್ಣದ ಆಯ್ಕೆಗಳಲ್ಲಿ ಲಭ್ಯವಿದೆ. ನೀವು ಈ ಫೋನ್ ಅನ್ನು ಇ-ಕಾಮರ್ಸ್ ಪ್ಲಾಟ್‌ ಫಾರ್ಮ್ ಅಮೆಜಾನ್‌ ನಲ್ಲಿ ಖರೀದಿಸಬಹುದು. ಜಿಯೋ ಭಾರತ್ J1 4G ಫೋನ್ ಹೊಸ ವಿನ್ಯಾಸ ಮತ್ತು ವೈಶಿಷ್ಟ್ಯಗಳೊಂದಿಗೆ 4G ಕೀಪ್ಯಾಡ್ ಆಗಿದ್ದು ಗ್ರಾಹಕರ ಕೈಯಲ್ಲಿದೆ. UPI ವಹಿವಾಟುಗಳಿಗಾಗಿ JioPay, ಕಂಟೆಂಟ್ ಸ್ಟ್ರೀಮಿಂಗ್‌ ಗಾಗಿ JioCinema ಆಯ್ಕೆಯೂ ಇದೆ. ಇದಲ್ಲದೆ, ಜಿಯೋ ಅಪ್ಲಿಕೇಶನ್‌ ನ ಎಲ್ಲಾ ಸೇವೆಗಳು ಈ ಫೋನ್‌ ನಲ್ಲಿ ಲಭ್ಯವಿದೆ. ಜಿಯೋದ ಈ ಫೋನ್ ಅತ್ಯಂತ ಕೈಗೆಟುಕುವ ಬೆಲೆಯಲ್ಲಿ ಲಭ್ಯವಿರುತ್ತದೆ.

Jio New Feature Phone
Image Credit: tv9telugu

ಈ 4G ಫೋನ್ ಗಾಗಿ ಅಗ್ಗದ ರಿಚಾರ್ಜ್ ಪ್ಲಾನ್ ಕೂಡ ಲಭ್ಯ
ಇನ್ನು Jio Bharat J1 4G ಹೊಸ ವಿನ್ಯಾಸದೊಂದಿಗೆ ಬರುತ್ತದೆ. ಈ ಫೋನ್ 2.8 ಇಂಚಿನ ಡಿಸ್ಪ್ಲೇ ಹೊಂದಿದೆ. ಇದು 2,500mAh ಸಾಮರ್ಥ್ಯದ ದೊಡ್ಡ ಬ್ಯಾಟರಿಯನ್ನು ಹೊಂದಿದೆ. ಬಳಕೆದಾರರ ಅನುಕೂಲಕ್ಕಾಗಿ, ಈ ಮೊಬೈಲ್‌ನೊಂದಿಗೆ ನೀವು ಕೇವಲ 123 ರೂ. ಗಳ ಅಗ್ಗದ ಯೋಜನೆಯನ್ನು ಸಹ ಪಡೆಯಬಹುದು. ಇದು 4G ರೀಚಾರ್ಜ್ ಯೋಜನೆಯಾಗಿದ್ದು, ಇದು 28 ದಿನಗಳ ಮಾನ್ಯತೆಯೊಂದಿಗೆ ಬರುತ್ತದೆ. ಈ ಜಿಯೋ ಭಾರತ್ ಯೋಜನೆಯಲ್ಲಿ, ಯಾವುದೇ ದೈನಂದಿನ ಮಿತಿಯಿಲ್ಲದೆ ಬಳಸಬಹುದಾದ 14GB ಡೇಟಾ ಲಭ್ಯವಿದೆ. ಅದೇ ಸಮಯದಲ್ಲಿ, ಈ ರೀಚಾರ್ಜ್ ಇಡೀ ತಿಂಗಳು ಅನಿಯಮಿತ ಕರೆ ಸೌಲಭ್ಯವನ್ನು ನೀಡುತ್ತದೆ.

Join Nadunudi News WhatsApp Group

Jio Bharat J1 4G Phone
Image Credit: 91mobiles

Join Nadunudi News WhatsApp Group