Reliance Jio: 84 ದಿನ ರಿಚಾರ್ಜ್ ಮಾಡುವ ಅಗತ್ಯ ಇಲ್ಲ, ಜಿಯೋ ಗ್ರಾಹಕರಿಗೆ 84 ದಿನಗಳ ರಿಚಾರ್ಜ್ ಪ್ಲ್ಯಾನ್ ಬಿಡುಗಡೆ

OTT ಆಫರ್ ಜೊತೆಗೆ 84 ದಿನಗಳ ರಿಚಾರ್ಜ್ ಘೋಷಣೆ ಮಾಡಿದ ಜಿಯೋ

Jio Free Netflix Subscription: ದೇಶದ ಪ್ರತಿಷ್ಠಿತ ಟೆಲಿಕಾಂ ಕಂಪನಿಯಾದ Reliance Jio ದಿನದಿಂದ ದಿನಕ್ಕೆ ತನ್ನ ಗ್ರಾಹಕರನ್ನು ಹೆಚ್ಚಿಸಿಕೊಳ್ಳುತ್ತಿದೆ. ಸದ್ಯ ದೇಶದಲ್ಲಿ Reliance Jio ಬಳಕೆದಾರರಿಗೆ ಹೈ ಸ್ಪೀಡ್ ನೆಟ್ವರ್ಕ್ ಅನ್ನು ನೀಡುತ್ತಿದೆ. ಇನ್ನು Jio 5G Network ಸೇವೆ ಲಭ್ಯವಾದಾಗಿಂತ ಬಳಕೆದಾರರು ಹೆಚ್ಚಾಗಿದ್ದಾರೆ ಎನ್ನಬಹುದು. ಬಳಕೆದಾರರು ಅನಿಯಮಿತ ಡೇಟಾವನ್ನು 5G ಸೇವೆಯ ಮೂಲಕ ಆನಂದಿಸುತ್ತಿದ್ದಾರೆ. ಇದೀಗ ಜಿಯೋ ಹೊಸ ಪ್ರಿಪೇಯ್ಡ್ ಯೋಜನೆಯನ್ನು ಬಿಡುಗಡೆ ಮಾಡಿದೆ.

Free Netflix In Jio 1099 Plan
Image Credit: Times Now

ನೆಟ್ ಫ್ಲಿಕ್ಸ್ ನೊಂದಿಗೆ ವಿಶ್ವದ ಮೊದಲ ಮೊಬೈಲ್ ಪ್ರಿಪೇಯ್ಡ್ ಪಾಲುದಾರಿಕೆ
ರಿಲಯನ್ಸ್ ಜಿಯೋ 1099 ಹಾಗೂ 1499 ಬೆಲೆಯ ಹೊಸ ಪ್ರಿಪೇಯ್ಡ್ ಪ್ಲಾನ್ ಅನ್ನು ಬಿಡುಗಡೆ ಮಾಡಿದೆ. ಕಂಪನಿ ಇದರ ಜೊತೆಗೆ ನೆಟ್ ಫ್ಲಿಕ್ಸ್ ಚಂದಾದಾರಿಕೆಯನ್ನು ಸಹ ನೀಡುತ್ತದೆ. ನೆಟ್ ಫ್ಲಿಕ್ಸ್ ನೊಂದಿಗೆ ಇದು ವಿಶ್ವದ ಮೊದಲ ಮೊಬೈಲ್ ಪ್ರಿಪೇಯ್ಡ್ ಪಾಲುದಾರಿಕೆಯಾಗಿದೆ.

ಜಿಯೋದ 1099 ರೂಪಾಯಿ ಯೋಜನೆಯಲ್ಲಿ ಉಚಿತ ನೆಟ್ ಫ್ಲಿಕ್ಸ್
ರಿಲಯನ್ಸ್ ಜಿಯೋ ತನ್ನ ಗ್ರಾಹಕರಿಗೆ 1099 ರೂಪಾಯಿಯ ಹೊಸ ಯೋಜನೆಯನ್ನು ಪರಿಚಯಿಸಿದೆ. ಹಾಗೆ ಈ ಯೋಜನೆಯಲ್ಲಿ ಉಚಿತ ನೆಟ್ ಫ್ಲಿಕ್ಸ್ ಚಂದಾದಾರಿಕೆಯನ್ನು ಸಹ ನೀಡುತ್ತಿದ್ದೆ. ಇದರ ಜೊತೆಗೆ ಜಿಯೋದ 1099 ಯೋಜನೆಯಲ್ಲಿ ದಿನಕ್ಕೆ 2GB ಡೇಟಾ, ಅನಿಯಮಿತ ಕರೆ ಸೌಲಭ್ಯವನ್ನು ಪಡೆಯಬಹುದು. ಇದಲ್ಲದೆ ಅನಿಯಮಿತ 5G ಡೇಟಾವನ್ನು ಸಹ ನೀಡುತ್ತಿದೆ. ನೀವು Netflix ಮೊಬೈಲ್ ಚಂದಾದಾರಿಕೆಯನ್ನು ಪ್ರತ್ಯೇಕವಾಗಿ ಖರೀದಿಸಿದರೆ ಇದು ತಿಂಗಳಿಗೆ 149 ರೂ ದರದಲ್ಲಿ ಬರುತ್ತದೆ ಮತ್ತು ಇದರಲ್ಲಿ ನೀವು ಮೊಬೈಲ್ ನಲ್ಲಿ ಮಾತ್ರ ವಿಷಯವನ್ನು ವೀಕ್ಷಿಸಬಹುದು.

Jio Free Netflix Subscription
Image Credit: Gizbot

ಜಿಯೋದ 1,499 ರೂಪಾಯಿ ಯೋಜನೆಯಲ್ಲಿ ಉಚಿತ ನೆಟ್ ಫ್ಲಿಕ್ಸ್
ರಿಲಯನ್ಸ್ ಜಿಯೋ ತನ್ನ ಗ್ರಾಹಕರಿಗೆ 1499 ರೂಪಾಯಿಯ ಹೊಸ ಯೋಜನೆಯನ್ನು ಪರಿಚಯಿಸಿದೆ. ಇದರ ಜೊತೆಗೆ ನೆಟ್ ಫ್ಲಿಕ್ಸ್ ಚಂದಾದಾರಿಕೆಯನ್ನು ನೀಡಿದೆ. ಈ ಯೋಜನೆಯಲ್ಲಿ ಬಳಕೆದಾರರು ಮೊಬೈಲ್ ಅಥವಾ ಟಿವಿ ಡಿವೈಸ್ ಗಳಲ್ಲಿ ನೆಟ್ ಫ್ಲಿಕ್ಸ್ ಅನ್ನು ನೋಡಬಹುದಾಗಿದೆ. ಮತ್ತು ಗ್ರಾಹಕರು ಈ ಯೋಜನೆಯಲ್ಲಿ ದಿನಕ್ಕೆ 3GB ಡೇಟಾವನ್ನು ಪಡೆಯಬಹುದು. ಈ ಯೋಜನೆ 84 ದಿನಗಳ ಮಾನ್ಯತೆಯನ್ನು ಪಡೆದುಕೊಂಡಿದೆ. ನೀವು ಪ್ರತ್ಯೇಕವಾಗಿ ಖರೀದಿಸಿದರೆ ಭಾರತದಲ್ಲಿ ನೆಟ್ ಫ್ಲಿಕ್ಸ್ ನ ಮೂಲ ಯೋಜನೆ 199 ರೂಪಾಯಿ ಆಗುತ್ತದೆ.

Join Nadunudi News WhatsApp Group

Join Nadunudi News WhatsApp Group