Jio Prepaid: ಇನ್ನೊಂದು ಆಕರ್ಷಕ ರಿಚಾರ್ಜ್ ಪ್ಲ್ಯಾನ್ ಘೋಷಿಸಿದ ಜಿಯೋ, ಉಚಿತ ಕರೆ ಜೊತೆಗೆ 168 GB ಡೇಟಾ ಉಚಿತ.

ತನ್ನ ಬಳಕೆದಾರರಿಗೆ ವಿಶೇಷ ಯೋಜನೆಯನ್ನು ಪರಿಚಯಿಸಿದ Jio.

Jio Prepaid Plan Details: ಟೆಲಿಕಾಂ ಕ್ಷೇತ್ರದಲ್ಲಿ ಅಗ್ರಸ್ಥಾನದಲ್ಲಿರುವ Reliance Jio ಸದ್ಯ ದೇಶದಲ್ಲಿ ಅತಿ ಹೆಚ್ಚು ಬಳಕೆದಾರರನ್ನು ಪಡೆದಿದೆ ಎನ್ನಬಹುದು. ಇತ್ತೀಚೆಗೆ Jio 5G ಕ್ರಾಂತಿ ದೇಶದಲ್ಲಿ ಬಾರಿ ಸದ್ದು ಮಾಡುತ್ತಿದೆ. ಆಕರ್ಷಕ ಬೆಲೆಯಲ್ಲಿ ಪ್ರಿಪೈಡ್ ಮತ್ತು ಪೋಸ್ಟ್ ಪೈಡ್ (Post Paid) ರಿಚಾರ್ಜ್ ಪ್ಲಾನ್ (Recharge Plan) ಗಳನ್ನೂ ನೀಡುತ್ತಾ ಜಿಯೋ ಗ್ರಾಹಕರಿಗೆ ಇನ್ನಷ್ಟು ಹತ್ತಿರವಾಗುತ್ತಿದೆ.

ಜಿಯೋ ತನ್ನ ಬಳಕೆದಾರರಿಗೆ 149 ರೂ. ಗಳಿಂದ ಹಿಡಿದು ರೂ. 2879 ಬೆಲೆಯ ವಾರ್ಷಿಕ ರಿಚಾರ್ಜ್ ಪ್ಲಾನ್ ಅನ್ನು ಕೂಡ ನೀಡುತ್ತಿದೆ. ಇದೀಗ ಜಿಯೋ ದೀಪಾವಳಿಯ ವಿಶೇಷಕ್ಕೆ ಈವರೆಗೆ ಯಾವುದೇ ಟೆಲಿಕಾಂ ಕಂಪನಿ ನೀಡಿರದ ಹೊಸ ಪ್ಲಾಟ್ ಫಾರ್ಮ್ ನ ಚಂದಾದಾರಿಕೆಯನ್ನು ನೀಡಲು ಮುಂದಾಗಿದೆ. ಸದ್ಯ ಜಿಯೊದ ಈ ಹೊಸ ರಿಚಾರ್ಜ್ ಪ್ಲಾನ್ ಯಾವುದು..? ಎಷ್ಟು ಬೆಲೆ..? ಹಾಗೂ ಈ ರಿಚಾರ್ಜ್ ಪ್ಲಾನ್ ನಿಂದ ಏನೆಲ್ಲಾ ಪ್ರಯೋಜನ ಸಿಗಲಿದೆ ಎನ್ನುವ ಬಗ್ಗೆ ವಿವರ ಇಲ್ಲಿದೆ.

jio prepaid plan details
Image Credit: Informalnewz

ಇನ್ನೊಂದು ಆಕರ್ಷಕ ರಿಚಾರ್ಜ್ ಪ್ಲ್ಯಾನ್ ಘೋಷಿಸಿದ ಜಿಯೋ
Jio ಇದೀಗ ತನ್ನ ಬಳಕೆದಾರರಿಗೆ ವಿಶೇಷ ಯೋಜನೆಯನ್ನು ಪರಿಚಯಿಸಿದೆ. Jio ಕಂಪನಿಯು ತನ್ನ ಹೊಸ ಯೋಜನೆಯನ್ನು ಪರಿಚಯಿಸಿದ್ದು, ಈ ಯೋಜನೆಯಲ್ಲಿ Swiggy One ನ ಚಂದಾದಾರಿಕೆಯನ್ನು ಪಡೆಯಬಹುದಾಗಿದೆ. ಟೆಲಿಕಾಂ ಕಂಪನಿಯು ಆಹಾರ ವಿತರಣಾ ಸೇವೆಯೊಂದಿಗೆ ಪಾಲುದಾರಿಕೆ ಮಾಡಿಕೊಂಡಿರುವುದು ವಿಶೇಷವಾಗಿದೆ.

Swiggy ಚಂದಾದಾರಿಕೆಯು ಕೇವಲ 99 ರೂ ಗಳಲ್ಲಿ ಬರುತ್ತದೆ. ಜಿಯೋ ಇವೆರೆಗೂ Disney Hotstar, SonyLIV, Zee5, Amazon Prime ಮತ್ತು Netflix ನಂತಹ OTT ಚಂದಾದಾರಿಕೆಯನ್ನು ನೀಡುತ್ತಿತ್ತು, ಇದೀಗ ಹೊಸ ಪ್ಲಾನ್ ನ ಮೂಲಕ Swiggy One ನ ಚಂದಾದಾರಿಕೆ ನೀಡುವ ಮೂಲಕ Jio ಇನ್ನೊಂದು ಹೆಜ್ಜೆ ಮುಂದಿಟ್ಟಿದೆ ಎನ್ನಬಹುದು.

Jio Prepaid Plans
Image Credit: Telecomtalk

ಉಚಿತ ಕರೆ ಜೊತೆಗೆ 168 GB ಡೇಟಾ ಉಚಿತ
ರಿಲಯನ್ಸ್ ಜಿಯೋದ ಹೊಸ ಪ್ರಿಪೇಯ್ಡ್ ಯೋಜನೆಯ 84 ದಿನಗಳ ಮಾನ್ಯತೆ ಪಡೆದುಕೊಂಡಿದೆ. ಈ ಯೋಜನೆಯಲ್ಲಿ 2GB 4G ದೈನಂದಿನ ಡೇಟಾವನ್ನು ಪಡೆಯಬಹುದು. ಅಂದರೆ ಗ್ರಾಹಕರು ಈ ಪ್ಯಾಕ್‌ ನಲ್ಲಿ ಒಟ್ಟು 168GB 4G ಡೇಟಾವನ್ನು ಬಳಸಿಕೊಳ್ಳಬಹುದು.

Join Nadunudi News WhatsApp Group

ಈ ಪ್ಯಾಕ್‌ ನಲ್ಲಿ ಗ್ರಾಹಕರು ಅನಿಯಮಿತ ಧ್ವನಿ ಕರೆ ಸೌಲಭ್ಯವನ್ನು ಪಡೆಯಬಬಹುದು. ಇನ್ನು ಜಿಯೋ ಬಳಕೆದಾರರಿಗೆ 5G ಸೇವೆ ನೀಡುತ್ತಿರುವ ಕಾರಣ ನೀವು Jio ವೆಲ್‌ ಕಮ್ ಆಫರ್ ಅಡಿಯಲ್ಲಿ ಅನಿಯಮಿತ 5G ಡೇಟಾವನ್ನು ಖರ್ಚು ಬಳಸಬಹುದು. ಈ ಯೋಜನೆಯಲ್ಲಿ ನೀವು Swiggy One Lite ಚಂದಾದಾರಿಕೆಯನ್ನು 3 ತಿಂಗಳ ಮಾನ್ಯತೆಯೊಂದಿಗೆ ಪಡೆಯಬಹುದಾಗಿದೆ. ನೀವು Jio ಬಳಕೆದಾರರಾಗಿದ್ದರೆ ಇಂದೇ ಈ ಯೋಜನೆಯನ್ನು ಸಕ್ರಿಯಗೊಳಿಸುವ ಮೂಲಕ Swiggy ಚಂದಾದಾರಿಕೆಯನ್ನು ಉಚಿತವಾಗಿ ಪಡೆಯಿರಿ.

Join Nadunudi News WhatsApp Group