Jio Prepaid Plan: Jio ಗ್ರಾಹಕರಿಗೆ ಬಂಪರ್ ಪ್ಲ್ಯಾನ್ ಘೋಷಣೆ, ಒಂದೇ ರಿಚಾರ್ಜ್ ನಲ್ಲಿ ಎಲ್ಲವೂ ಉಚಿತ.

ಜಿಯೋ ಗ್ರಾಹಕರಿಗೆ ಇನ್ನೊಂದು ಬಂಪರ್ ರಿಚಾರ್ಜ್ ಪ್ಲಾನ್

Jio Prepaid Plans Details: ದೇಶದಲ್ಲಿ ಅತಿ ಹೆಚ್ಚು ಬಳಕೆದಾರರನ್ನು ಹೊಂದಿರುವ Jio ಸದ್ಯ ತನ್ನ ಬಳಕೆದಾರರಿಗೆ ಆಕರ್ಷಕ ರಿಚಾರ್ಜ್ ಪ್ಲಾನ್ ಗಳನ್ನೂ ನೀಡುತ್ತದೆ. ಜಿಯೋ ಬಳಕೆದಾರರು ವಿವಿಧ ರಿಚಾರ್ಜ್ ಪ್ಲಾನ್ ಗಳ ಲಾಭವನ್ನು ಪಡೆಯುತ್ತಿದ್ದಾರೆ. ಸದ್ಯ ಜಿಯೋ ತನ್ನ ಗ್ರಾಹಕರ ಅನುಕೂಲಕ್ಕಾಗಿ ಒಂದೇ ಬೆಲೆಯ ರಿಚಾರ್ಜ್ ನಲ್ಲಿ ಎಲ್ಲ ಪ್ರಯೋಜನಗಳನ್ನು ನೀಡಲು ನೀಡಲು ಮುಂದಾಗಿದೆ.

ಇದಕ್ಕಾಗಿ ಜಿಯೋ ಬಳಕೆದಾರರಿಗೆ ಹೊಸ ರಿಚಾರ್ಜ್ ಪ್ಲಾನ್ ಅನ್ನು ಘೋಷಣೆ ಮಾಡಲಾಗಿದೆ. ಜಿಯೋ ಬಳಕೆದಾರರು ಇನ್ನುಮುಂದೆ ಈ ಹೊಸ ಪ್ಲಾನ್ ಅನ್ನು ಸಕ್ರಿಯಗೊಳಿಸಿಕೊಂಡರೆ ಎಲ್ಲ ರೀತಿಯ ಪ್ರಯೋಜನವನ್ನು ಪಡೆದುಕೊಳ್ಳಬಹುದು. ಜಿಯೊದ ಈ ಹೊಸ ರಿಚಾರ್ಜ್ ಪ್ಲಾನ್ ನ ಬೆಲೆ ಎಷ್ಟು…? ಈ ಪ್ಲಾನ್ ನಲ್ಲಿ ಏನೆಲ್ಲಾ ಸೌಲಭ್ಯ ಸಿಗಲಿದೆ..? ಈ ಪ್ಲಾನ್ ಎಷ್ಟು ದಿನದ ಮಾನ್ಯತೆ ಹೊಂದಿದೆ..? ಎನ್ನುವ ನಿಮ್ಮ ಪ್ರಶ್ನೆಗೆ ಈ ಲೇಖನದಲ್ಲಿ ಉತ್ತರ ಇದೆ.

Jio Prepaid Plans Details
Image Credit: Hindustantimes

Jio ಗ್ರಾಹಕರಿಗೆ ಬಂಪರ್ ಪ್ಲ್ಯಾನ್ ಘೋಷಣೆ, ಒಂದೇ ರಿಚಾರ್ಜ್ ನಲ್ಲಿ ಎಲ್ಲವೂ ಉಚಿತ
•ಜಿಯೋ 398 ರಿಚಾರ್ಜ್ ಪ್ಲಾನ್ ಡಿಟೈಲ್ಸ್
ಜಿಯೋ ಬಳಕೆದಾರರು 398 ಕೇವಲ ರೂ. ರಿಚಾರ್ಜ್ ಮಾಡಿಸಿಕೊಂಡರೆ ZEE5, ಡಿಸ್ಕವರಿ, ಸನ್ ನೆಕ್ಸ್ಟ್ (ಸನ್ NXT), ಜಿಯೋ ಸಿನಿಮಾವನ್ನು ರೀಚಾರ್ಜ್ ಮಾಡಿದ ನಂತರ ಮಾತ್ರ ಉಚಿತವಾಗಿ ಬಳಸಬಹುದು. ಈ ಪ್ರಿಪೇಯ್ಡ್ ಯೋಜನೆಯ ಮಾನ್ಯತೆಯು ಕೇವಲ 8 ದಿನಗಳು. ದೈನಂದಿನ 2 GB (ಹೈ ಸ್ಪೀಡ್) ಡೇಟಾ, ದೈನಂದಿನ ಮಿತಿ ಮುಗಿದ ನಂತರ 64 Kbps ವೇಗದ ಇಂಟರ್ನೆಟ್ ಸೌಲಭ್ಯ.

•ಜಿಯೋ 857 ರಿಚಾರ್ಜ್ ಪ್ಲಾನ್ ಡಿಟೈಲ್ಸ್
ಜಿಯೋ 857 ರಿಚಾರ್ಜ್ ಪ್ಲಾನ್ 84 ದಿನಗಳ ಮಾನ್ಯತೆಯನ್ನು ಹೊಂದಿದೆ. ನಿಮ್ಮ ಮೊಬೈಲ್ 5G ಅನ್ನು ಬೆಂಬಲಿಸಿದರೆ ನೀವು ಅನಿಯಮಿತ 5G ಡೇಟಾವನ್ನು ಸಹ ಪಡೆಯಬಹುದು. ಜಿಯೋ ಟಿವಿ, ಜಿಯೋ ಸಿನಿಮಾ ಮತ್ತು ಜಿಯೋ ಕ್ಲೌಡ್ ಅನ್ನು ಬಳಸಬಹುದು.

Jio 398 Rs Recharge Plan
Image Credit: Telecomtalk

•ಜಿಯೋ 1099 ರಿಚಾರ್ಜ್ ಪ್ಲಾನ್ ಡಿಟೈಲ್ಸ್
ಜಿಯೋ 1099 ರಿಚಾರ್ಜ್ ಪ್ಲಾನ್ 84 ದಿನಗಳ ಮಾನ್ಯತೆಯನ್ನು ಹೊಂದಿದೆ. 2 GB ಡೇಟಾ (ಮಿತಿ ನಂತರ 64 Kbps ಇಂಟರ್ನೆಟ್) ಲಭ್ಯವಿದೆ. ವಿಶೇಷವಾಗಿ ನೀವು ನೆಟ್‌ಫ್ಲಿಕ್ಸ್ ಮೊಬೈಲ್‌ ಗೆ ಚಂದಾದಾರರಾಗಬಹುದು. ಜಿಯೋ ಟಿವಿ, ಜಿಯೋ ಸಿನಿಮಾ ಮತ್ತು ಜಿಯೋ ಕ್ಲೌಡ್ ಜೊತೆಗೆ, ಜಿಯೋ ಅಪ್ಲಿಕೇಶನ್‌ ಗಳನ್ನು ಬಳಸಬಹುದು.

Join Nadunudi News WhatsApp Group

•ಜಿಯೋ 1198 ರಿಚಾರ್ಜ್ ಪ್ಲಾನ್ ಡಿಟೈಲ್ಸ್
ಇನ್ನು 1198 ಪ್ಲಾನ್ ಜಿಯೋ ಬಳಕೆದಾರರಿಗೆ ನೀಡಲಾಗುವ ಬೆಸ್ಟ್ ಪ್ರಿಪೇಯ್ಡ್ ಯೋಜನೆಯಾಗಿದೆ. ಇದು 84 ದಿನಗಳ ವ್ಯಾಲಿಡಿಟಿಯನ್ನು ಸಹ ಹೊಂದಿದೆ. ಜಿಯೋ ಸಿನಿಮಾ ಪ್ರೀಮಿಯಂನೊಂದಿಗೆ ನೀವು 5G ಡೇಟಾವನ್ನು ಪಡೆಯಬಹುದು. ಅಲ್ಲದೆ, ನೀವು ಪ್ರೈಮ್ ವಿಡಿಯೋ ಮೊಬೈಲ್, ಡಿಸ್ನಿ ಹಾಟ್‌ಸ್ಟಾರ್ ಮೊಬೈಲ್, ಸೋನಿ ಎಲ್ಐವಿ, ಜಿ5, ಲಯನ್ಸ್‌ಗೇಟ್ ಪ್ಲೇ ಸೇರಿದಂತೆ ಇತರ OTT ಅಪ್ಲಿಕೇಶನ್‌ಗಳಿಗೆ 3 ತಿಂಗಳವರೆಗೆ ಚಂದಾದಾರರಾಗಬಹುದು.

•ಜಿಯೋ 3227 ರಿಚಾರ್ಜ್ ಪ್ಲಾನ್ ಡಿಟೈಲ್ಸ್
ಇನ್ನು ರೂ. 3,227 ರ ವಾರ್ಷಿಕ ಯೋಜನೆ ಕೂಡ ನಿಮಗೆ ಲಭ್ಯವಿದೆ. ಈ ಪ್ರಿಪೇಯ್ಡ್ ಯೋಜನೆ ಅಡಿಯಲ್ಲಿ, ಗ್ರಾಹಕರು ವರ್ಷವಿಡೀ ಪ್ರಯೋಜನಗಳನ್ನು ಪಡೆಯಬಹುದು. ಜೊತೆಗೆ ಒಂದು ವರ್ಷದ ವಿಶೇಷ ಪ್ರೈಮ್ ವಿಡಿಯೋ ಮೊಬೈಲ್ ಚಂದಾದಾರಿಕೆ ಲಭ್ಯವಿದೆ. ಅಲ್ಲದೆ, ಜಿಯೋ ಟಿವಿ, ಜಿಯೋ ಸಿನಿಮಾ ಮತ್ತು ಜಿಯೋ ಕ್ಲೌಡ್ ಅಪ್ಲಿಕೇಶನ್‌ ಗಳನ್ನು ಸಹ ಉಚಿತವಾಗಿ ಬಳಸಬಹುದು.

Jio Prepaid Plans List
Image Credit: The Hans India

Join Nadunudi News WhatsApp Group