Jio Recharge Price: Jio ಸಿಮ್ ಬಳಸುವವರಿಗೆ ಬೇಸರದ ಸುದ್ದಿ, ಇನ್ಮುಂದೆ ಕಟ್ಟಬೇಕು ಹೆಚ್ಚು ಹಣ.

ಜಿಯೋ ರಿಚಾರ್ಜ್ ದರಗಳ ಹೆಚ್ಚಳ ಈ ಕೆಳಗಿನಂತಿದೆ

Jio Recharge Price Hike: ದೇಶದಲ್ಲಿ ಸದ್ಯ Jio ಟೆಲಿಕಾಂ ಅತಿ ಹೆಚ್ಚು ಗ್ರಾಹಕರನ್ನು ಹೊಂದಿರುವ ಟೆಲಿಕಾಂ ನೆಟ್ವರ್ಕ್ ಆಗಿದೆ. ದೇಶದಲ್ಲಿ 5G ಸೇವೆಯನ್ನು ನೀಡುತ್ತಿರುವ ಜಿಯೋ ತನ್ನ ಗ್ರಾಹಕರಿಗೆ ಆಕರ್ಷಕ ಬೆಲೆಯಲ್ಲಿ ಪ್ರೀಪೈಡ್ ಮತ್ತು ಪೋಸ್ಟ್ ಪೈಡ್ ಯೋಜನೆಗಳನ್ನು ಜಾರಿಗೊಳಿಸಿತ್ತು.

ಜಿಯೋ ಬಳಕೆದಾರರು ಈವರೆಗೆ ಅತಿ ಅಗ್ಗದ ದರದಲ್ಲಿ ರಿಚಾರ್ಜ್ ಪ್ಲಾನ್ ಗಳನ್ನೂ ಪಡೆಯುತ್ತಿದ್ದರು. ಸದ್ಯ Jio ತನ್ನ ಬಳಕೆದಾರರಿಗೆ ಶಾಕಿಂಗ್ ಸುದ್ದಿಯನ್ನು ನೀಡಿದೆ. ಹೌದು, ಜಿಯೋ ತನ್ನ ರಿಚಾರ್ಜ್ ದರಗಳನ್ನು ಹೆಚ್ಚಿಸಲಿ ನಿರ್ಧರಿಸಿದೆ. ಇನ್ನುಮುಂದೆ ಜಿಯೋ ಬಳಕೆದಾರರು ಹೆಚ್ಚಿನ ಹಣವನ್ನು ನೀಡಿ ರಿಚಾರ್ಜ್ ಮಾಡಿಸಿಕೊಳ್ಳಬೇಕಾಗಿದೆ.

Jio Recharge Price Hike
Image Credit: Zeebiz

Jio ಸಿಮ್ ಬಳಸುವವರಿಗೆ ಬೇಸರದ ಸುದ್ದಿ
ರಿಲಯನ್ಸ್ ಜಿಯೋ ಗುರುವಾರ ತನ್ನ ಪ್ರಿಪೇಯ್ಡ್ ಯೋಜನೆಗಳ ಮೇಲೆ 20% ಸುಂಕ ಹೆಚ್ಚಳವನ್ನು ಘೋಷಿಸಿತು. ಎರಡೂವರೆ ವರ್ಷಗಳ ಬಳಿಕ ಇದು ಮೊದಲ ಬೆಲೆ ಏರಿಕೆಯಾಗಿದೆ. ಇತ್ತೀಚೆಗೆ ಮುಕ್ತಾಯಗೊಂಡ ಹರಾಜಿನಲ್ಲಿ 1800 MHz ಬ್ಯಾಂಡ್‌ ನಲ್ಲಿ 973 ಕೋಟಿ ರೂ.ಗೆ 14.4 MHz ಸ್ಪೆಕ್ಟ್ರಮ್ ಅನ್ನು Jio ಸ್ವಾಧೀನಪಡಿಸಿಕೊಂಡ ಒಂದು ದಿನದ ನಂತರ ಈ ಪ್ರಕಟಣೆ ಬಂದಿದೆ. ಒಟ್ಟಾರೆಯಾಗಿ ಜಿಯೋ ಪ್ರಿಪೇಯ್ಡ್ ಗ್ರಾಹಕರಿಗೆ ದೊಡ್ಡ ಆಘಾತವಾಗಿ ಸುಂಕದ ದರವು 20% ರಷ್ಟು ಹೆಚ್ಚಾಗಲಿದೆ. ಇದು ನಿಮ್ಮ ಜೇಬಿಗೆ ಕತ್ತರಿ ಹಾಕುವುದಂತೂ ಗ್ಯಾರಂಟಿಯಾಗಿದೆ.

ಇನ್ಮುಂದೆ ಕಟ್ಟಬೇಕು ಹೆಚ್ಚು ಹಣ
ಜಿಯೋ ಪೋಸ್ಟ್‌ ಪೇಯ್ಡ್ ಯೋಜನೆಗಳು ಸಹ ಹೆಚ್ಚು ದುಬಾರಿಯಾಗಿದೆ. ಈಗಾಗಲೇ 30GB ಡೇಟಾವನ್ನು ಒದಗಿಸಿದ ರೂ. 299 ಯೋಜನೆಯು ಈಗ ಪ್ರತಿ ಬಿಲ್ಲಿಂಗ್ ಸೈಕಲ್‌ ಗೆ ರೂ. 349 ಆಗಿದೆ. ಹಾಗೆಯೆ 75 ಜಿಬಿ ಡೇಟಾದೊಂದಿಗೆ ರೂ. 399 ಪ್ಲಾನ್ ಈಗ ರೂ. 449 ಆಗಿದೆ. ಇದರ ಜೊತೆಗೆ ಜಿಯೋ ಎರಡು ಹೊಸ ಅಪ್ಲಿಕೇಶನ್ ಅನ್ನು ಪ್ರಾರಂಭಿಸಿದೆ. ಜಿಯೋ ಬಳಕೆದಾರರು ಈ ಅಪ್ಲಿಕೇಶನ್‌ಗಳನ್ನು ಒಂದು ವರ್ಷದವರೆಗೆ ಉಚಿತವಾಗಿ ಪಡೆಯಬಹುದು.

Jio Recharge Price Hike News
Image Credit: 91mobiles

ಜಿಯೋ ರಿಚಾರ್ಜ್ ದರಗಳ ಹೆಚ್ಚಳ ಈ ಕೆಳಗಿನಂತಿದೆ
•ಪ್ರಸ್ತುತ ರೂ.15 ರ ಬೆಲೆಯನ್ನು ಪ್ರತಿ 1ಜಿಪಿ ಡೇಟಾಗೆ ರೂ.19 ಕ್ಕೆ ಹೆಚ್ಚಿಸಲಾಗಿದೆ.

Join Nadunudi News WhatsApp Group

•ರೂ.25ಕ್ಕೆ ನೀಡಲಾಗುತ್ತಿದ್ದ 2ಜಿಬಿ ಡೇಟಾ ದರವನ್ನೂ ರೂ.29ಕ್ಕೆ ಹೆಚ್ಚಿಸಲಾಗಿದೆ.

•ರೂ.61ಕ್ಕೆ ನೀಡಲಾಗುತ್ತಿದ್ದ 6ಜಿಬಿ ಡೇಟಾ ದರವನ್ನು ರೂ.69ಕ್ಕೆ ಹೆಚ್ಚಿಸಲಾಗಿದೆ.

•ರೂ.155ಕ್ಕೆ ನೀಡಲಾಗುತ್ತಿದ್ದ 28 ದಿನಗಳ ವ್ಯಾಲಿಡಿಟಿ ಮತ್ತು 2 ಜಿಬಿ ಪ್ಲಾನ್ ಅನ್ನು ರೂ.189ಕ್ಕೆ ಹೆಚ್ಚಿಸಲಾಗಿದೆ.

•28 ದಿನಗಳ ಪ್ಲಾನ್ ದರವನ್ನು ರೂ.209 ರಿಂದ ರೂ.249ಕ್ಕೆ ಹೆಚ್ಚಿಸಿದ್ದರೆ, ರೂ.239ರಿಂದ ರೂ.299ಕ್ಕೆ ಹೆಚ್ಚಿಸಲಾಗಿದೆ.

•ದಿನಕ್ಕೆ 3ಜಿಬಿ ಡೇಟಾ, 28 ದಿನಗಳ ವ್ಯಾಲಿಡಿಟಿ ರೂ.395 ಪ್ಲಾನ್ ರೂ. 449ಕ್ಕೆ ಏರಿಕೆಯಾಗಿದೆ, 56 ದಿನಗಳ ಮಾನ್ಯತೆಯೊಂದಿಗೆ ರೂ.533 ರ ದರವನ್ನು ರೂ.629 ಕ್ಕೆ ಹೆಚ್ಚಿಸಲಾಗಿದೆ.

•ದಿನಕ್ಕೆ 1.5 ಜಿಬಿ ಡೇಟಾದಂತೆ 84 ದಿನಗಳ ವ್ಯಾಲಿಡಿಟಿಯೊಂದಿಗೆ ರೂ. 666 ಬೆಲೆಯನ್ನು ರೂ. 799 ಕ್ಕೆ ಹೆಚ್ಚಿಸಲಾಗಿದೆ.

Jio Recharge Price Hike Update
Image Credit: Live Mint

Join Nadunudi News WhatsApp Group