Jio Best Plan: 336 ದಿನ ರಿಚಾರ್ಜ್ ಮಾಡುವ ಅಗತ್ಯ ಇಲ್ಲ, Jio ಗ್ರಾಹಕರಿಗೆ ಬಂಪರ್ ರಿಚಾರ್ಜ್ ಪ್ಲ್ಯಾನ್

Jio ಗ್ರಾಹಕರಿಗೆ ಬಂಪರ್ ರಿಚಾರ್ಜ್ ಪ್ಲ್ಯಾನ್

JioPhone Recharge Plan Details: ದೇಶದ ಜನಪ್ರಿಯ ಟೆಲಿಕಾಂ ಕಂಪನಿಯಾದ Jio ತನ್ನ ಉತ್ತಮ ಸೇವೆಗಳ ಮೂಲಕ ಗ್ರಾಹಕರನ್ನು ಸೆಳೆಯುತ್ತಿದೆ. ಜಿಯೋ ಗ್ರಾಹಕರು ಅನಿಯಮಿತ ಡೇಟಾ ಪ್ರಯೋಜನಗಳನ್ನು ಅತಿ ಕಡಿಮೆ ಬೆಲೆಗೆ ಪಡೆಯುತ್ತಿದ್ದಾರೆ.

ಮಾಸಿಕ, ತ್ರೈಮಾಸಿಕ, ಅರ್ಧ ವಾರ್ಷಿಕ, ವಾರ್ಷಿಕ ಯೋಜನೆಗಳು ಜಿಯೋ ಗ್ರಾಹಕರಿಗೆ ಕಡಿಮೆ ಬೆಲೆಗೆ ಸಿಗುತ್ತಿದೆ. ಸದ್ಯ JIo ತನ್ನ ಗ್ರಾಹಕರಿಗೆ ವರ್ಷದ ಅನಿಯಮಿತ ರಿಚಾರ್ಜ್ ಪ್ಲ್ಯಾನ್ ಘೋಷಣೆ ಮಾಡಿದೆ. ಅತಿ ಕಡಿಮೆ ಬೆಲೆ ಜಿಯೋ ಬಳಕೆದಾರರು ವರ್ಷದ ಮಾನ್ಯತೆಯನ್ನು ಪಡೆದುಕೊಳ್ಳಬಹುದು. ಇದೀಗ ನಾವು ಜಿಯೊದ ಈ ಹೊಸ ರಿಚಾರ್ಜ್ ಪ್ಲಾನ್ ನ ಬಗ್ಗೆ ಮಾಹಿತಿ ತಿಳಿದುಕೊಳ್ಳೋಣ. ನೀವು ಜಿಯೋ ಬಳಕೆದಾರರೆ ಈ ಲೇಖನವನ್ನು ಓದುವ ಮೂಲಕ ಯೋಜನೆಯ ಸಂಪೂರ್ಣ ವಿವರವನ್ನು ತಿಳಿದುಕೊಳ್ಳಿ.

JioPhone Recharge Plan
Image Credit: NDTV

Jio ಗ್ರಾಹಕರಿಗೆ ಬಂಪರ್ ರಿಚಾರ್ಜ್ ಪ್ಲ್ಯಾನ್
ಜಿಯೋ ತನ್ನ ಬಳಕೆದಾರರ ಹಣ ಉಳಿಸಲು ಇದೀಗ 895  ರೂ ಗಳ ಈ ವಾರ್ಷಿಕ ಯೋಜನೆಯನ್ನು ಪರಿಚಯಿಸಿದೆ. ನಿಮ್ಮ ಬಜೆಟ್‌ ನಲ್ಲಿ ಪೂರ್ಣ ಒಂದು ವರ್ಷದ ಮಾನ್ಯತೆಯೊಂದಿಗೆ ಅಗ್ಗದ ಪ್ರಿಪೇಯ್ಡ್ ರೀಚಾರ್ಜ್ ಯೋಜನೆಯನ್ನು ಪಡೆದುಕೊಳ್ಳಬಹುದು. ರಿಲಯನ್ಸ್ ಜಿಯೋ ಪಟ್ಟಿಯು ಬಳಕೆದಾರರು ಕಡಿಮೆ ಬೆಲೆಯಲ್ಲಿ ಸುಮಾರು ಒಂದು ವರ್ಷದ ಮಾನ್ಯತೆಯನ್ನು ಪಡೆಯುವ ಯೋಜನೆಯನ್ನು ಸಹ ಒಳಗೊಂಡಿದೆ. ಈ ಯೋಜನೆಯು ಮುಖ್ಯವಾಗಿ ಕೇವಲ JioPhone ಬಳಕೆದಾರರಿಗೆ ಮಾತ್ರ ಲಭ್ಯವಿರುತ್ತದೆ ಮತ್ತು ಕಡಿಮೆ ಬೆಲೆಯಲ್ಲಿ ಅನೇಕ ಪ್ರಯೋಜನಗಳನ್ನು ಪಡೆಯಬಹುದು. ಒಮ್ಮೆ ಈ ರಿಲಯನ್ಸ್ ಜಿಯೋ ರೀಚಾರ್ಜ್ ಮಾಡಿದರೆ ಒಂದು ವರ್ಷ ರೀಚಾರ್ಜ್ ಮಾಡುವ ಅಗತ್ಯ ಇರುವುದಿಲ್ಲ.

336 ದಿನ ರಿಚಾರ್ಜ್ ಮಾಡುವ ಅಗತ್ಯ ಇಲ್ಲ
ಈ ಯೋಜನೆಯಲ್ಲಿ ಬಳಕೆದಾರರು ಒಟ್ಟು 24GB ಡೇಟಾವನ್ನು ಪಡೆಯುತ್ತಾರೆ. ಈ ಡೇಟಾವನ್ನು ನೀವು ಒಂದೇ ಬಾರಿಗೆ ಪಡೆಯುವುದಿಲ್ಲ ಎಂಬುದನ್ನು ನೆನಪಿಟ್ಟುಕೊಳ್ಳುವುದು ಬಹಳ ಮುಖ್ಯ. ಒಂದು ತಿಂಗಳಲ್ಲಿ ನೀವು ಕೇವಲ 2GB ಡೇಟಾವನ್ನು ಮಾತ್ರ ಬಳಸಬಹುದು.

ಈ ಯೋಜನೆಯಲ್ಲಿ ನೀವು ಯಾವುದೇ ನೆಟ್‌ ವರ್ಕ್‌ ನಲ್ಲಿ ಉಚಿತ ಕರೆ ಮಾಡುವ ಪ್ರಯೋಜನವನ್ನು ಪಡೆಯಬಹುದು. ಇದರೊಂದಿಗೆ ಕಂಪನಿಯು ಗ್ರಾಹಕರಿಗೆ 28 ದಿನಗಳವರೆಗೆ 50 SMS ಅನ್ನು ನೀಡುತ್ತದೆ. ಜಿಯೋದ ರೂ 895 ಪ್ಲಾನ್‌ ನಲ್ಲಿ ಬಳಕೆದಾರರು ಎಲ್ಲಾ ಸಾಮಾನ್ಯ ಯೋಜನೆಗಳಂತೆ ಜಿಯೋ ಟಿವಿ, ಜಿಯೋ ಸಿನಿಮಾ ಮತ್ತು ಜಿಯೋ ಕ್ಲೌಡ್‌ ಗೆ ಪ್ರವೇಶವನ್ನು ಪಡೆಯಬಹುದು. ಜಿಯೋ ಫೋನ್ ಮತ್ತು ಜಿಯೋ ಫೋನ್ ಪ್ರೈಮಾ ಬಳಕೆದಾರರಿಗೆ ಮಾತ್ರ ಈ ಯೋಜನೆ ಲಾಭವಾಗಲಿದೆ ಎನ್ನುವುದು ನಿಮಗೆ ತಿಳಿದಿರಲಿ.

Join Nadunudi News WhatsApp Group

JioPhone Recharge Plan Details
Image Credit: 91mobiles

Join Nadunudi News WhatsApp Group