Megha Shetty: ಮುಕ್ತಾಯವಾಯಿತು ಜೊತೆ ಜೊತೆಯಲಿ ಧಾರವಾಹಿ ಕಥೆ, ಕೊನೆಯ ಎಪಿಸೋಡ್ ಬಗ್ಗೆ ಹೇಳಿದ ಅನು ಸಿರಿಮನೆ.

ಜೊತೆ ಜೊತೆಯಲಿ ಧಾರವಾಹಿ ಕಥೆ ಮುಕ್ತಾಯವಾಗಿದ್ದು ಇನ್ನೇನು ಕೆಲವೇ ದಿನಗಳಲ್ಲಿ ಧಾರವಾಹಿ ಮುಕ್ತಾಯವಾಗಲಿದೆ ಎಂದು ನಟಿ ಮೇಘ ಶೆಟ್ಟಿ ಹೇಳಿದ್ದಾರೆ.

Megha Shetty About Serial: ಜೀ ವಾಹಿನಿಯಲ್ಲಿ (Zee Channel) ಪ್ರಸಾರವಾಗುತ್ತಿರುವ ಜೊತೆ ಜೊತೆಯಲಿ ಧಾರಾವಾಹಿ (Jote Joteyali Serial) ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿದೆ. ಜೊತೆ ಜೊತೆಯಲಿ ಧಾರಾವಾಹಿಯ ಪ್ರತಿಯೊಂದು ಪಾತ್ರವು ಕೂಡ ಅಭಿಮಾನಿಗಳ ಮನ ಮುಟ್ಟಿದೆ.

ಜೀ ವಾಹಿನಿಯ ಜೊತೆ ಜೊತೆಯಲಿ ಧಾರಾವಾಹಿ ಅತೀ ಹೆಚ್ಚು ಟಿ ಆರ್ ಪಿ ಪಡೆದಿದೆ. ಕನ್ನಡಿಗರ ನೆಚ್ಚಿನ ಧಾರಾವಾಹಿಯಾಗಿ ಜೊತೆ ಜೊತೆಯಲಿ ಮೂಡಿಬರುತ್ತಿದೆ. ಸದ್ಯ ಜೊತೆ ಜೊತೆಯಲಿ ಈಗ ಮುಕ್ತಾಯದ ಹಂತವನ್ನ ತಲುಪಿದ್ದು ಇನ್ನೇನು ಕೆಲವೇ ದಿನಗಳಲ್ಲಿ ಧಾರವಾಹಿ ಮುಕ್ತಾಯವಾಗಲಿದೆ. 

Actress Megha Shetty has said that the story of the serial of Doth Dothdayali is over and the serial will end in a few days.
Image Credit: news18

ಶೀಘ್ರದಲ್ಲಿ ಅಂತ್ಯವಾಗಲಿದೆ ಜೀ ವಾಹಿನಿಯ ಜೊತೆ ಜೊತೆಯಲಿ
ಇನ್ನು ಜೊತೆ ಜೊತೆಯಲಿ ಧಾರಾವಾಹಿಯಲ್ಲಿ ಮೇಘಾ ಶೆಟ್ಟಿ (Megha Shetty) ಹಾಗೂ ಹರೀಶ್ ರಾಜ್ (Harish Raj) ಮುಖ್ಯ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಸತತ ನಾಲ್ಕು ವರ್ಷಗಳ ಕಾಲ ಜೊತೆ ಜೊತೆಯಲಿ ಧಾರಾವಾಹಿ ಪ್ರಸಾರವಾಗಿ ವಿಕ್ಷರನ್ನು ಸೆಳೆದಿದೆ.

ಇದೀಗ ಜೊತೆ ಜೊತೆಯಲಿ ಧಾರಾವಾಹಿ ಮುಕ್ತಾಯ ಹಂತಕ್ಕೆ ತಲುಪಿದೆ. ಈ ಕುರಿತು ಧಾರಾವಾಹಿ ಪ್ರಿಯರು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಜೊತೆ ಜೊತೆಯಲಿ ಧಾರಾವಾಹಿ ಅಂತ್ಯಗೊಳ್ಳಲು ಕಾರಣ ಏನು ಎನ್ನುವ ಬಗ್ಗೆ ತಿಳಿಯೋಣ.

ಜೊತೆ ಜೊತೆಯಲಿ ಧಾರಾವಾಹಿ ಬಗ್ಗೆ ಮಾತನಾಡಿದ ನಟಿ ಮೇಘಾ ಶೆಟ್ಟಿ
ಜೊತೆ ಜೊತೆಯಲಿ ಧಾರಾವಾಹಿ ಮುಗಿಯುತ್ತಿರುವುದರಿಂದ ನಟಿ ಮೇಘಾ ಶೆಟ್ಟಿ ಭಾವುಕರಾಗಿದ್ದಾರೆ. ಇದು ಎರಡನೇ ಕುಟುಂಬದಂತೆ ಇತ್ತು ಎಂದು ಮೇಘಾ ಶೆಟ್ಟಿ ಹೇಳಿದ್ದಾರೆ. ತಮ್ಮ ಕಿರುತೆರೆ ಪ್ರಯಾಣವು ನನಗೆ ಬಹಳಷ್ಟು ಕಲಿಸಿದೆ, ಇದರಿಂದ ನನಗೆ ಸಿನಿಮಾಗಳಲ್ಲಿ ಬ್ರೇಕ್ ಸಿಕ್ಕಿದೆ.

Join Nadunudi News WhatsApp Group

Megha Shetty About Serial
Image Credit:

ಈ ಪ್ರಯಾಣದಲ್ಲಿ ಅಪಾರ ಬೆಂಬಲ ನೀಡಿದ ತನ್ನ ಅಭಿಮಾನಿಗಳಿಗೆ ಧನ್ಯವಾದವನ್ನೂ ತಿಳಿಸಿದ್ದಾರೆ. ಮೇಘಾ ಶೆಟ್ಟಿ ತಮ್ಮ ಸಿನಿಮಾ ವೃತ್ತಿ ಜೀವನದತ್ತ ಗಮನ ಹರಿಸಲು ಕಿರುತೆರೆಗೆ ವಿದಾಯ ಹೇಳುತ್ತಿದ್ದಾರೆ. ನಾಲ್ಕು ವರ್ಷಗಳಿಂದ ಇಡೀ ತಂಡ ಒಂದು ಕುಟುಂಬದಂತೆ ಇತ್ತು. ಕೊನೆಗೂ ಧಾರಾವಾಹಿ ಮುಗಿಸುವ ಸಮಯ ಬಂದಿದೆ.

ಕೊನೆಯ ದಿನ ಶೂಟಿಂಗ್ ವೇಳೆ ಎಲ್ಲರೂ ಭಾವುಕರಾದರು ಎಂದು ಮೇಘಾ ಶೆಟ್ಟಿ ಹೇಳಿದ್ದಾರೆ. ಸದ್ಯಕ್ಕೆ ಯಾವುದೇ ಧಾರಾವಾಹಿ ಒಪ್ಪಿಕೊಂಡಿಲ್ಲ. 2 ಸಿನಿಮಾಗಳು ಕೈಯಲ್ಲಿವೆ. ಮತ್ತೊಂದಷ್ಟು ಸಿನಿಮಾ ಕಥೆಗಳನ್ನು ಕೇಳುತ್ತಿದ್ದೇನೆ. ಧಾರಾವಾಹಿಯಲ್ಲಿ ಮತ್ತೆ ನಟಿಸುವ ಬಗ್ಗೆ ಸದ್ಯಕ್ಕೆ ಯೋಚಿಸಿಲ್ಲ ಎಂದು ಮೇಘಾ ಶೆಟ್ಟಿ ಹೇಳಿದ್ದಾರೆ.

Join Nadunudi News WhatsApp Group