OPS Update: ನೌಕರರಿಗೆ OPS ಸಿಗಲು ಈ ಷರತ್ತುಗಳು ಕಡ್ಡಾಯ, ಕರ್ನಾಟಕ ಸರ್ಕಾರದ ಆದೇಶ.

ನೌಕರರು ಹಳೆಯ ಪಿಂಚಣಿ ಲಾಭ ಪಡೆಯಲು ಈ ದಾಖಲೆಗಳು ಕಡ್ಡಾಯ

Old Pension Scheme Latest Update: ದೇಶದಲ್ಲಿ ಫೆಬ್ರವರಿ 1 2024 ರಂದು 2024 ಬಜೆಟ್ ಘೋಷಣೆಯಾಗಲಿದೆ. ವಿತ್ತ ಸಚಿವೆ ನಿರ್ಮಾಣ ಸೀತಾರಾಮನ್ ಆರನೇ ಬಾರಿಗೆ ಬಜೆಟ್ ಘೋಷಣೆ ಮಾಡಲಿದ್ದಾರೆ. ಈ ಬಜೆಟ್ ನಲ್ಲಿ ಸರ್ಕಾರ ಸಾಕಷ್ಟು ಘೋಸಹನೆ ಮಾಡಲು ನಿರ್ಧರಿಸಿದೆ.

ಅದರಲ್ಲಿ ಸರ್ಕಾರೀ ನೌಕರರಿಗೆ ಹಳೆಯ ಪಿಂಚಣಿ ವ್ಯವಸ್ಥೆ ಜಾರಿ ಮಾಡುವುದು ಕೂಡ ಒಂದಾಗಿದೆ. ಸದ್ಯ ರಾಜ್ಯ ಸರ್ಕಾರ ಲೋಕಸಭಾ ಚುನಾವಣೆ ಹಾಗೂ ಬಜೆಟ್ ಘೋಷಣೆಗೂ ಮುನ್ನ ಹಳೆಯ ಪಿಂಚಣಿ ವ್ಯವಸ್ಥೆ ಜಾರಿಯಾಗಿವೆ ಬಗ್ಗೆ ಮಹತ್ವದ ನಿರ್ಧಾರ ಕೈಗೊಂಡಿದೆ. ಸರ್ಕಾರ OPS ಜಾರಿ ಮಾಡಲು ಷರತ್ತುಗಳನ್ನು ವಿಧಿಸಿದೆ.

CM Siddaramaiah About Old pension Scheme
Image Credit: Original Source

ನೌಕರರಿಗೆ OPS ಸಿಗಲು ಈ ಷರತ್ತುಗಳು ಕಡ್ಡಾಯ
ಪ್ರಸ್ತುತ ರಾಜ್ಯ ಸರ್ಕಾರ 2006 ರ ನಂತರ ನೇಮಕಾತಿಗೊಂಡ ರಾಜ್ಯ ಸರ್ಕಾರದ ಸುಮಾರು 13000 ಸರ್ಕಾರೀ ನೌಕರರಿಗೆ ಹಳೆ ಪಿಂಚಣಿ ವ್ಯವಸ್ಥೆ ಜಾರಿ ಮಾಡುವುದಾಗಿ ಸರ್ಕಾರ ಘೋಷಣೆ ಹೊರಡಿಸಿದೆ. ಈ ಹಿಂದೆ ಇದ್ದ ಹಳೆಯ ಪಿಂಚಣಿ ವ್ಯವಸ್ಥೆಯಲ್ಲೂ ರದ್ದುಪಡಿಸಿ 2006 ರ ನಂತರ ನೇಮಕಗೊಂಡ ನೌಕರರಿಗೆ ಹೊಸ ಪಿಂಚಣಿಯ ವ್ಯವಸ್ಥೆಯಡಿ ಪಿಂಚಣಿ ನೀಡಲಾಗಿತ್ತು.

ಈ ಹಿನ್ನಲೆ ಸರ್ಕಾರೀ  ನೌಕರರು 2006 ರ ನಂತರ ನೇಮಕಗೊಂಡ ನೌಕರರಿಗೆ ಮತ್ತೆ ಹಳೆಯ ಪಿಂಚಣಿ ವ್ಯವಸ್ಥೆಯಡಿ ಪಿಂಚಣಿ ನೀಡಬೇಕು ಎನ್ನುವ ಬಗ್ಗೆ ಮನವಿ ಮಾಡಿಕೊಂಡಿದೆ. ಇದೀಗ ರಾಜ್ಯ ಸರ್ಕಾರ ಈ ಬಗ್ಗೆ ಚರ್ಚಿಸಿ ಒಂದು ಬಾರಿ ಬದಲಾವಣೆಗೆ ಅವಕಾಶ ಮಾಡಿಕೊಟ್ಟಿದೆ.

Old Pension Scheme Latest Update
Image Credit: Informal News

ಕರ್ನಾಟಕ ಸರ್ಕಾರದ ಮಹತ್ವದ ಆದೇಶ
ಸರ್ಕಾರ ಹಳೆಯ ಪಿಂಚಣಿ ವ್ಯವಸ್ಥೆ ಜಾರಿಗೆ ಹಲವು ಷರತ್ತುಗಳನ್ನು ವಿಧಿಸಿದ್ದು, ನೌಕರರು ಇಷ್ಟಪಟ್ಟಲ್ಲಿ ಮಾತ್ರ ಒಮ್ಮೆ ಅವಕಾಶ ನೀಡಲಿದೆ. ಈ ಕುರಿತು ಅರ್ಜಿ ನಮೂನೆಯನ್ನು ಜೂನ್ 30 ರೊಳಗೆ ಸಕ್ಷಮ ನೇಮಕಾತಿ ಪ್ರಾಧಿಕಾರಕ್ಕೆ ನೀಡಬೇಕು ಎಂದು ರಾಜ್ಯ ಸರ್ಕಾರ ಆದೇಶದಲ್ಲಿ ತಿಳಿಸಿದೆ. ಈ ಕುರಿತು ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಟ್ವೀಟ್ ಮೂಲಕ ಮಾಹಿತಿ ಹಂಚಿಕೊಂಡಿದ್ದಾರೆ.

Join Nadunudi News WhatsApp Group

ಇನ್ನು 01.04.2006 ರ ಮೊದಲು ನೇಮಕಾತಿ ಅಧಿಸೂಚನೆಗಳ ಮೂಲಕ ಆಯ್ಕೆಯಾದ ಸರ್ಕಾರಿ ನೌಕರರು ಮತ್ತು ಆ ದಿನಾಂಕದಂದು ಅಥವಾ ನಂತರ ರಾಜ್ಯ ಸರ್ಕಾರಿ ಸೇವೆಗೆ ಸೇರುವ ಸರ್ಕಾರೀ ನೌಕರರು ಹಿಂದಿನ ಡಿಫೆನ್ಸ್ ಪಿಂಚಣಿ ಯೋಜನೆಗೆ ಒಳಪಡಲು ಇಚ್ಛಿಸಿದ್ದಲ್ಲಿ ತಮ್ಮ ಅಭಿಮತವನ್ನು ನಿಗದಿತ ನಮೂನೆಯಲ್ಲಿ 30.06.2024 ರೊಳಗೆ ಸಕ್ಷಮ ನೇಮಕ್ತಿ ಪ್ರಾಧಿಕಾರಕ್ಕೆ ನೇರವಾಗಿ ಸಲ್ಲಿಸಬೇಕು ಎಂದು ಸರ್ಕಾರ ಆದೇಶಿಸಿದೆ.

Join Nadunudi News WhatsApp Group