Housing Scheme: ಕಾಂಗ್ರೆಸ್ ಸರ್ಕಾರದ 6 ನೇ ಗ್ಯಾರೆಂಟಿ ಘೋಷಣೆ, ಸ್ವಂತ ಮನೆ ಇಲ್ಲದವರಿಗೆ 1 ಲಕ್ಷಕ್ಕೆ ಸಿಗಲಿದೆ ಮನೆ

ಸ್ವಂತ ಮನೆ ಇಲ್ಲದವರಿಗೆ ರಾಜ್ಯ ಸರ್ಕಾರದಿಂದ ಗುಡ್ ನ್ಯೂಸ್, ಒಂದು ಲಕ್ಷಕ್ಕೆ ಸರ್ಕಾರದ ಮನೆ ವಿತರಣೆ

Karnataka Govt New Scheme: ದೇಶದ ಬಡ ಜನತೆಗಾಗಿ ಸರ್ಕಾರ ಸಾಕಷ್ಟು ಕಲ್ಯಾಣ ಯೋಜನೆಯನ್ನು ಪರಿಚಯಿಸುತ್ತಿದೆ. ಜನಸಾಮಾನ್ಯರು ಯೋಜನೆಗಳ ಲಾಭವನ್ನು ಪಡೆಯುತ್ತಿದ್ದಾರೆ. ಇನ್ನು ಈಗಾಗಲೇ ದೇಶದಲ್ಲಿ ಸಾಕಷ್ಟು ನಿರ್ಗತಿಕರಿದ್ದಾರೆ. ಹೌದು ಸಾಕಷ್ಟು ಜನರು ಮನೆ ಇಲ್ಲದಡೆ ಪರದಾಡುತ್ತಿದ್ದು ಅಂತವರಿಗಾಗಿ ಸರ್ಕಾರ ಈಗ ಬಹುದೊಡ್ಡ ಯೋಜನೆಯನ್ನ ಜಾರಿಗೆ ತಂದಿದೆ ಎಂದು ಹೇಳಬಹುದು.

ನಿರ್ಗತಿಕರಿಗೆ ಮನೆ ನಿರ್ಮಾಣಕ್ಕಾಗಿ ಸರ್ಕಾರ ವಿವಿದ ಕ್ರಮ ಕೈಗೊಂಡಿದೆ.. ಬಡ ಜನರಿಗೆ ಸ್ವಂತ ಮನೆ ನಿರ್ಮಾಣ ಮಾಡಿಕೊಳ್ಳಲು ಸಹಾಯವಾಗಲಿ ಎನ್ನುವ ಉದ್ದೇಶದಿಂದ ಕೇಂದ್ರ ಸರ್ಕಾರ Pradhan Mantri awas ಯೋಜನೆಯನ್ನು ಪರಿಚಯಿಸಿದೆ. ಸದ್ಯ ಸ್ವಂತ ಮನೆ ಇಲ್ಲದವರಿಗೆ ರಾಜ್ಯ ಸರ್ಕಾರದಿಂದ ಗುಡ್ ನ್ಯೂಸ್ ಹೊರಬಿದ್ದಿದೆ. ರಾಜ್ಯ ಸರ್ಕಾರ ಬಡವರಿಗೆ ಮನೆ ವಿತರಿಸಲು ಹೊಸ ಯೋಜನೆಯನ್ನ ರೂಪಿಸಿದೆ 

State Govt Housing Scheme
Image Credit: Housing

ಸರ್ಕಾರದ ಇನ್ನೊಂದು ಬಹುದೊಡ್ಡ ಘೋಷಣೆ
ಸದ್ಯ ಕರ್ನಾಟಕ ಸರ್ಕಾರ ಸ್ವಂತ ಮನೆ ಇಲ್ಲದವರಿಗೆ ಸಹಾಯವಾಗಲು ಹೊಸ ಯೋಜನೆಯನ್ನು ಜಾರಿಗೊಳಿಸುವುದಾಗಿ ಘೋಷಿಸಿದೆ. ಸದ್ಯದಲ್ಲೇ ರಾಜ್ಯದ ಜನತೆಗೆ ವಿಶೇಷ ಸೌಲಭ್ಯವೂ ದೊರೆಯಲಿದೆ. ಸ್ವಂತ ಮನೆ ಕನಸು ಕಂಡವರಿಗೆ 1 ಲಕ್ಷ ರೂ. ನೀಡಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಈ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚರ್ಚೆ ನಡೆಸಿದ್ದಾರೆ.

ಸ್ವಂತ ಮನೆ ಇಲ್ಲದವರಿಗೆ ಕೇವಲ 1 ಲಕ್ಷಕ್ಕೆ ಸಿಗಲಿದೆ ಮನೆ
ಕರ್ನಾಟಕ ಕೊಳೆಗೇರಿ ಅಭಿವೃದ್ಧಿ ಮಂಡಳಿಯಿಂದ ನಿರ್ಮಾಣವಾಗುತ್ತಿರುವ 1.80 ಲಕ್ಷ ಮನೆಗಳ ಫಲಾನುಭವಿಗಳು ಪಾವತಿಸಬೇಕಿದ್ದ 4.5 ಲಕ್ಷ ರೂಪಾಯಿಗಳನ್ನು ಒಂದು ಲಕ್ಷ ರೂಪಾಯಿಗೆ ಇಳಿಸಲಾಗಿದೆ. ಉಳಿದ 3.5 ಲಕ್ಷ ರೂಪಾಯಿಯನ್ನು ಸರ್ಕಾರವೇ ಭರಿಸಲಿದ್ದು, ಫಲಾನುಭವಿಗಳಿಗೆ ಒಂದು ಲಕ್ಷ ರೂಪಾಯಿಗೆ ಮನೆ ಸಿಗಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ.

Karnataka Govt New Scheme
Image Credit: Inventiva

ಪ್ರಧಾನ್ ಮಂತ್ರಿ ಆವಾಸ್ ಮನೆಗೆ 4.5 ಲಕ್ಷ ರೂ. ಬದಲಾಗಿ ಒಂದು ಲಕ್ಷ ರೂಪಾಯಿ ಕೊಟ್ಟರೆ ಸಾಕು. ಮೊದಲ ಹಂತದಲ್ಲಿ 48,796 ಮನೆಗಳನ್ನು ಪೂರ್ಣಗೊಳಿಸಲು 500 ಕೋಟಿ ರೂ. ಬಿಡುಗಡೆಗೆ ಅನುಮೋದನೆ ನೀಡಲಾಗಿದೆ. ಇನ್ನುಳಿದ 1.3 ಲಕ್ಷ ಮನೆಗಳನ್ನು 5 ವರ್ಷಗಳಲ್ಲಿ ಪೂರ್ಣಗೊಳಿಸಲಾಗುವುದು ಎಂದು ವಸತಿ ಸಚಿವ ಜಮೀರ್ ಅಹಮದ್ ಖಾನ್ ಹೇಳಿದ್ದಾರೆ. ಸದ್ಯ ಕಾಂಗ್ರೆಸ್ ಸರ್ಕಾರದ ಈ ಘೋಷಣೆ ಸಾಕಷ್ಟು ಜನರು ಮೆಚ್ಚುಗೆಗೆ ಕಾರಣವಾಗಿದೆ.

Join Nadunudi News WhatsApp Group

Join Nadunudi News WhatsApp Group