Ration Card Close: ಡಿ 31 ರಿಂದ ರದ್ದಾಗಲಿದೆ ಇಂತಹ ಕುಟುಂಬಗಳ ರೇಷನ್ ಕಾರ್ಡ್, ರಾಜ್ಯ ಸರ್ಕಾರದಿಂದ ಕೊನೆಯ ಎಚ್ಚರಿಕೆ

ಪಡಿತರ ಚೀಟಿ ಕುರಿತು ಸರ್ಕಾರದಿಂದ ಹೊಸ ನಿಯಮ ಜಾರಿ, ಈ ಕೆಲಸ ಮಾಡಲು ನೀವು ತಡ ಮಾಡಿದರೆ ನಿಮ್ಮ ಪಡಿತರ ಚೀಟಿ ರದ್ದಾಗಲಿದೆ.

Ration Card E-KYC Update Last Date: ರಾಜ್ಯದ ಪ್ರತಿಯೊಬ್ಬ ನಾಗರಿಕನಿಗೂ ಆಧಾರ್ ಕಾರ್ಡ್ (AAdhaar Card) ಹೇಗೆ ಮುಖ್ಯವೋ ಹಾಗೆ ಪ್ರತಿ ಕುಟುಂಬಕ್ಕೂ ಪಡಿತರ ಚೀಟಿ ಕೂಡ ಅಷ್ಟೇ ಮುಖ್ಯ ಆಗಿರುತ್ತದೆ. ರಾಜ್ಯದಲ್ಲಿ ಸರ್ಕಾರ ಒಂದಾದ ಮೇಲೊಂದು ಯೋಜನೆಗಳನ್ನು ಜಾರಿಗೆ ತರುತ್ತಿದೆ ಇಂತಹ ಎಲ್ಲಾ ಯೋಜನೆಗಳಿಗೂ ಪಡಿತರ ಚೀಟಿ ಬಹಳ ಮುಖ್ಯ ಆಗಿರುತ್ತದೆ ಹಾಗಾಗಿ ನಿಮ್ಮ ಪಡಿತರ ಚೀಟಿಯನ್ನು ರದ್ದಾಗದಂತೆ ನೋಡಿಕೊಳ್ಳುವುದು ಬಹಳ ಮುಖ್ಯ ಆಗಿದೆ.

ಅಷ್ಟೇ ಅಲ್ಲದೇ ಪಡಿತರ ಚೀಟಿ ನಮಗೆ ಗುರುತಿನ ಪುರಾವೆ ಆಗಿ ಕೂಡ ಕೆಲಸ ಮಾಡುತ್ತದೆ. ಹಾಗು ಕೆಲವು ಇಲಾಖೆಯಲ್ಲಿ ನಮ್ಮ ಕೆಲಸ ಆಗಬೇಕೆಂದರೆ ಪಡಿತರ ಚೀಟಿ ಬಹಳ ಮುಖ್ಯ ಆಗಿರುತ್ತದೆ. ಆದ್ದರಿಂದ ಪಡಿತರ ಚೀಟಿ ಕುರಿತು ಇರುವ ಈ ಪ್ರಮುಖ ವಿಚಾರಗಳನ್ನು ತಿಳಿದುಕೊಳ್ಳಿ.

Karnataka Ration Card E-KYC
Image Credit: Hashtagu

ರೇಷನ್ ಕಾರ್ಡ್ ಗೆ ಇಕೆವೈಸಿ ಮಾಡಿಸುವುದು ಕಡ್ಡಾಯವಾಗಿದೆ

ಇಂದಿನ ಕಾಲದಲ್ಲಿ ಅಸಲಿ ರೇಷನ್ ಕಾರ್ಡ್ ಯಾವುದು, ನಕಲಿ ರೇಷನ್ ಕಾರ್ಡ್ ಯಾವುದು ಎಂಬುದನ್ನು ತಿಳಿಯುವುದು ಬಹಳ ಕಷ್ಟ ಆಗಿರುವುದರಿಂದ ಸರಕಾರ ಪಡಿತರ ಚೀಟಿಗಳಿಗೆ ಇಕೆವೈಸಿ ಕಡ್ಡಾಯಗೊಳಿಸಿದೆ. ನಕಲಿ ಪಡಿತರ ಚೀಟಿಯಿಂದ ಯೋಜನೆಗಳನ್ನು ದುರುಪಯೋಗ ಪಡಿಸಿಕೊಳ್ಳುತ್ತಿರುವ ಕಾರಣ ಪಡಿತರ ಚೀಟಿಗೆ E-KYC ಕಡ್ಡಾಯಗೊಳಿಸಿದ್ದಲ್ಲದೇ,  E-KYC ಮಾಡಿಸದೇ ಇರುವ ಪಡಿತರ ಚೀಟಿಗಳನ್ನು ರದ್ದುಗೊಳಿಸುವುದಾಗಿ ಸೂಚನೆ ನೀಡಲಾಗಿದೆ. ಪಡಿತರ ಚೀಟಿಯನ್ನು ಇಕೆವೈಸಿ ಮಾಡಿಸಲು ಸರ್ಕಾರ ಡಿಸೆಂಬರ್ 30 ರ ತನಕ ಕಾಲಾವಕಾಶ ನೀಡಿದ್ದು, ಇದನ್ನು ಮಾಡಿಸದೇ ಹೋದರೆ ನಿಮ್ಮ ರೇಷನ್ ಕಾರ್ಡ್ ರದ್ದಾಗುವ ಸಾಧ್ಯತೆಯಿದೆ.

Ration Card E-KYC
Image Credit: Naidunia

E-KYC ಮಾಡಿಸುವ ವಿಧಾನ

Join Nadunudi News WhatsApp Group

ಪಡಿತರ ಚೀಟಿಗೆ ಇಕೆವೈಸಿ ಮಾಡಿಸಲು ಮೊದಲನೇದಾಗಿ ಗ್ರಾಹಕರು ತಮ್ಮ ಬ್ಯಾಂಕಿನ ಅಧಿಕೃತ ಪೋರ್ಟಲ್ ಅನ್ನು ತೆರೆಯಬೇಕು ಮತ್ತು ಲಾಗ್ ಇನ್ ಮಾಡಬೇಕು. ಅದರ ನಂತರ ಕೆವೈಸಿ ಆಯ್ಕೆಯ ಮೇಲೆ ಕ್ಲಿಕ್ ಮಾಡಿ. ಸೂಚನೆಗಳನ್ನು ಅನುಸರಿಸಿ ಮತ್ತು ನಿಮ್ಮ ಹೆಸರು, ವಿಳಾಸ, ಹುಟ್ಟಿದ ದಿನಾಂಕ ಇತ್ಯಾದಿಗಳನ್ನು ನಮೂದಿಸಿ. ಆಧಾರ್, ಪ್ಯಾನ್ ಮತ್ತು ಇತರ ಅಗತ್ಯ ದಾಖಲೆಗಳ ಸ್ಕ್ಯಾನ್ ಮಾಡಿದ ಪ್ರತಿಗಳನ್ನು ನಂತರ ಅಪ್ಲೋಡ್ ಮಾಡಬೇಕು.

ಈ ದಾಖಲೆಗಳನ್ನು ಎರಡೂ ಬದಿಗಳಲ್ಲಿ ಸ್ಕ್ಯಾನ್ ಮಾಡುವುದು ಕಡ್ಡಾಯವಾಗಿದೆ. ಪ್ರಕ್ರಿಯೆ ಪೂರ್ಣಗೊಂಡ ನಂತರ ಸಬ್ಮಿಟ್ ಆಯ್ಕೆಯ ಮೇಲೆ ಕ್ಲಿಕ್ ಮಾಡಿ. ಇದು ನಿಮಗೆ ಸೇವಾ ವಿನಂತಿ ಸಂಖ್ಯೆಯನ್ನು ನೀಡುತ್ತದೆ. ಕೆವೈಸಿ ನವೀಕರಣ ಮಾಹಿತಿಯನ್ನು ನಂತರ ಗ್ರಾಹಕರಿಗೆ ಸಂದೇಶ ಅಥವಾ ಮೇಲ್ ಮೂಲಕ ತಿಳಿಸಲಾಗುತ್ತದೆ. ಈ ವಿಧಾನವಾಗಿ ಪಡಿತರ ಚೀಟಿಯನ್ನು ಡಿಸೆಂಬರ್ 30 ರ ಒಳಗೆ E-KYC ಮಾಡಿಸಿಕೊಳ್ಳತಕ್ಕದ್ದು.

Join Nadunudi News WhatsApp Group