Salman Khan: ಸಲ್ಮಾನ್ ಖಾನ್ ಸಹಾಯದಿಂದ ಎರಡು ಮಕ್ಕಳ ತಾಯಿಯಾಗಿದ್ದೇನೆ, ವೈರಲ್ ಆಗಿದೆ ನಟಿಯ ಹೇಳಿಕೆ.

ಸಲ್ಮಾನ್ ಖಾನ್ ಅವರ ಕುರಿತು ಅಚ್ಚರಿಯ ವಿಷಯವನ್ನು ಬಹಿರಂಗಪಡಿಸಿದ ಖ್ಯಾತ ನಟಿ ಕಾಶ್ಮೀರ ಶಾ.

Kashmera Shah About Salman Khan: ಬಾಲಿವುಡ್ ನ ಸ್ಟಾರ್ ನ ಸಲ್ಮಾನ್ ಖಾನ್ (Salman Khan) ತಮ್ಮ ಮದುವೆಯ ವಿಚಾರವಾಗಿ ಬಾರಿ ಸುದ್ದಿಯಲ್ಲಿರುತ್ತಾರೆ.ಇತ್ತೀಚಿಗೆ ಸಲ್ಮಾನವರ ವೈಯಕ್ತಿಕ ವಿಚಾರಗಳು ಸಾಕಷ್ಟು ಸುದ್ದಿಯಾಗಿದ್ದವು. ಇದೀಗ ಬಾಲಿವುಡ್ ನ ಖ್ಯಾತ ನಟಿ ಕಾಶ್ಮೀರ ಶಾ. ಸಲ್ಮಾನ್ ಖಾನ್ ಅವರ ಕುರಿತು ಅಚ್ಚರಿಯ ವಿಷಯವನ್ನು ಬಹಿರಂಗಪಡಿಸಿದ್ದಾರೆ.

Kashmera Shah About Salman Khan
Image Credit: Hindustantimes

ಬಾಲಿವುಡ್ ನ ಖ್ಯಾತ ನಟಿ  ಕಾಶ್ಮೀರ ಶಾ.
ತೆಲುಗು ಚಿತ್ರಗಳ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ನಟಿ ಕಾಶ್ಮೀರ ಶಾ. (Kashmera Shah) ನಂತರ ಬಾಲಿವುಡ್ ನಲ್ಲಿ ಹೆಚ್ಚು ಖ್ಯಾತಿ ಪಡೆದಿದ್ದರು. ತೆಲುಗು, ತಮಿಳು, ಹಿಂದಿ,ಮರಾಠಿ, ಬೋಜಪುರಿ ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಇನ್ನು 2003 ರಲ್ಲಿ ಬ್ರಾಡ್ ಲಿಟ್ವರ್ ಮ್ಯಾನ್ ಅವರನ್ನು ಮದುವೆಯಾಗಿದ್ದರು. ಮದುವೆ ಆದ ನಾಲ್ಕು ವರ್ಷಗಳ ಬಳಿಕ ವಿಚೇದನ ಪಡೆದಿದ್ದರು.

ಸಲ್ಮಾನ್ ಖಾನ್ ಸಹಾಯದಿಂದ ಎರಡು ಮಕ್ಕಳ ತಾಯಿಯಾಗಿದ್ದೇನೆ ಎಂದ ನಟಿ
ವಿಚ್ಛೇದನದ ಬಳಿಕ ನಟಿ ಕಾಶ್ಮೀರ ಶಾ. ಅವರು ಜನಪ್ರಿಯ ನಟ ಮತ್ತು ನಿರೂಪಕ ಕೃಷ್ಣಾ ಅಭಿಷೇಕ್ ಅವರನ್ನು 2013 ರಲ್ಲಿ ವಿವಾಹವಾಗಿದ್ದರು. ಆದರೆ ಜೋಡಿಗೆ ಕೆಲ ವರ್ಷಗಳಿಂದ ಮಕ್ಕಳ ಭಾಗ್ಯ ಲಭ್ಯವಾಗಿರಲಿಲ್ಲ. ಮಕ್ಕಳನ್ನು ಪಡೆಯಲು ಸುಮಾರು 14 ಬಾರಿ ಪ್ರಯತ್ನಿಸಿದರೂ ಅವರಿಗೆ ಮಕ್ಕಳಾಗಿರಲಿಲ್ಲ. ಐವಿಎಫ್ ನ ಮೂಲಕ ಮಗುವನ್ನು ಪಡೆಯಲು ಪ್ರಯತ್ನಿಸಿದರೂ ಆ ಪ್ರಯತ್ನವು ವಿಫಲವಾಗಿತ್ತು.

Kashmera Shah About Salman Khan
Image Credit: Filmfare

ಆದರೆ ಇತ್ತೀಚಿನ ದಿನದಲ್ಲಿ ನೀಡಿದ ಸಂದರ್ಶನದಲ್ಲಿ ಸಲ್ಮಾನ್ ಖಾನ್ ಸಹಾಯದಿಂದ ಎರಡು ಮಕ್ಕಳ ತಾಯಿಯಾಗಿದ್ದೇನೆ ಎಂದು ನಟಿ ಉತ್ತರಿಸಿದ್ದಾರೆ. ಈ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. “ಬಾಡಿಗೆ ತಾಯ್ತನದ ಮೂಲಕ ಪೋಷಕರಾಗಲು ಪ್ರಯತ್ನಿಸುವಂತೆ ಸಲ್ಮಾನ್ ಖಾನ್ ಸಲಹೆ ನೀಡಿದ್ದರು. ಅವರ ಸಲಹೆಯಂತೆ ನಾನು ಮತ್ತು ಕೃಷ್ಣ ಪೋಷಕರಾಗಲು ಪ್ರಯತ್ನಿಸಿದೆವು. ಮದುವೆಯಾದ ಸುಮಾರು ನಾಲ್ಕು ವರ್ಷಗಳ ನಂತರ ಇಬ್ಬರು ಮಕ್ಕಳ ಪೋಷಕರಾಗಿದ್ದೇವೆ” ಎಂದು ನಟಿ ಕಾಶ್ಮೀರ ಶಾ. ಹೇಳಿಕೆ ನೀಡಿದ್ದಾರೆ.

Join Nadunudi News WhatsApp Group

Join Nadunudi News WhatsApp Group