Kiccha Sudeep: ಸುದೀಪ್ ಅವರ ಖಾಸಗಿ ವಿಡಿಯೋ ಲೀಕ್ ಮಾಡುತ್ತೇವೆ, ಕಿಚ್ಚನಿಗೆ ಬಂತು ಬೆದರಿಕೆಯ ಪತ್ರ.

ಖಾಸಗಿ ವಿಡಿಯೋ ಲೀಕ್ ಮಾಡುತ್ತೇವೆ ಎಂದು ನಟ ಕಿಚ್ಚ ಸುದೀಪ್ ಅವರಿಗೆ ಬೆದರಿಕೆಯ ಪತ್ರ ಬಂದಿದೆ.

Complaint by Kichcha Sudeep: ನಟ ಸುದೀಪ್ (Sudeep) ರಾಜಕೀಯ ಸೇರ್ಪಡೆ ಬಗ್ಗೆ ಸಾಕಷ್ಟು ವಿಚಾರಗಳು ಹರಡುತ್ತಿದೆ. ಸುದೀಪ್ ಬಿಜೆಪಿ ಸೇರಲಿದ್ದಾರೆ ಎಂಬ ಸುದ್ದಿ ಕೂಡ ಹರಡಿತ್ತು. ಬಿಜೆಪಿ ಮುಖಂಡರು ನಟ ಸುದೀಪ್ ಅವರ ಮನೆ ಮುಂದೆ ಹೋಗಿ ಅವರಿಗೆ ಪಕ್ಷ ಸೇರ್ಪಡೆ ಬಗ್ಗೆ ಮನವಿ ಮಾಡಿಕೊಂಡಿದ್ದಾರೆ.

ಈ ಬಗ್ಗೆ ನಟ ಕಿಚ್ಚ ಸುದೀಪ್ ಅವರು ಸ್ಪಷ್ಟನೆ ನೀಡಿದ್ದಾರೆ. ನಾನು ಈ ಬಾರಿ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸುವುದಿಲ್ಲ, ಬದಲಾಗಿ 2028 ರಲ್ಲಿ ಸ್ಪರ್ಧಿಸುತ್ತೇನೆ ಎಂದಿದ್ದಾರೆ.

Actor Kiccha Sudeep has received a threatening letter saying that he will leak a private video.
Image Credit: wallpaperaccess

ನಟ ಸುದೀಪ್ ಅವರಿಗೆ ಬೆದರಿಕೆಯ ಪತ್ರ
ನಟ ಸುದೀಪ್ ರಾಜಕೀಯ ಪಕ್ಷ ಸೇರ್ಪಡೆ ಬಗ್ಗೆ ಸ್ಪಷ್ಟನೆ ನೀಡುತ್ತಿದ್ದಂತೆಯೇ ಅವರಿಗೆ ಅನ್ಯ ವ್ಯಕ್ತಿಯಿಂದ ಒಂದು ಪತ್ರ ಬಂದಿದೆ ಅಂತೇ. ಈ ಬಗ್ಗೆ ಇದೀಗ ಸಾಕಷ್ಟು ಸುದ್ದಿ ಆಗುತ್ತಿದೆ.

ನಟ ಸುದೀಪ್ ಅವರು ರಾಜಕೀಯ ಸೇರುತ್ತಿರುವುದು ಖಚಿತವಾಗುತ್ತಿದ್ದಂತೆಯೇ ಯಾರೋ ದುಷ್ಕರ್ಮಿಗಳು ಅವರಿಗೆ ಪತ್ರ ಬರೆದಿದ್ದಾರಂತೆ. ಆ ಪಾತ್ರದಲ್ಲಿ ಅವಾಚ್ಯ ಶಬ್ದಗಳು ಕಂಡು ಬಂದಿದ್ದು ಸುದೀಪ್ ಬಾಡಿಗಾರ್ಡ್ ಇದರ ಸಲುವಾಗಿ ದೂರು ಸಲ್ಲಿಸಿದ್ದಾರಂತೆ.

A complaint has been lodged with the Bandakaran police threatening to leak Sudeep's private video.
Image Credit: timesofindia.indiatimes

ನಟ ಸುದೀಪ್ ಅಭಿಮಾನಿಗಳ ಆತಂಕ
ನಟ ಸುದೀಪ್ ಅವರಿಗೆ ಬೆದರಿಕೆ ಪತ್ರ ಬಂದಿರುವ ಕುರಿತು ಅಭಿಮಾನಿಗಳು ಆತಂಕ ವ್ಯಕ್ತಪಡಿಸುತ್ತಿದ್ದಾರೆ. ನಟ ಕಿಚ್ಚ ಸುದೀಪ್ ಮ್ಯಾನೇಜರ್ ಜಾಕ್ ಮಂಜು ಅವರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಇವರ ದೂರಿನ ಕುರಿತು ಪೊಲೀಸರು ಎಫ್ಐಆರ್ ದಾಖಲಿಸಿದ್ದಾರಂತೆ.

Join Nadunudi News WhatsApp Group

Kichcha Sudeep received a threatening letter and a complaint has been filed with the police.
Image Credit: india

ನಟ ಸುದೀಪ್ ಅವರ ಖಾಸಗಿ ವಿಡಿಯೋ ಬಹಿರಂಗಪಡಿಸುವುದಾಗಿ ಆ ಪತ್ರದಲ್ಲಿ ಹೇಳಲಾಗಿದೆಯಂತೆ. ದುಷ್ಕರ್ಮಿಗಳು ಕೆಲವು ಅವಾಚ್ಯ ಶಬ್ದಗಳನ್ನು ಸಹ ಆ ಪತ್ರದಲ್ಲಿ ಬರೆದಿದ್ದಾರಂತೆ. ಸುದೀಪ್ ಅವರಿಗೆ ಬೆದರಿಕೆಯ ಪತ್ರ ಬಂದಿರುವುದು ಯಾರಿಂದ ಅಂತ ಇನ್ನು ಖಚಿತವಾಗಿ ತಿಳಿದು ಬಂದಿಲ್ಲ.

Join Nadunudi News WhatsApp Group