Kalki 2898 AD Movie: ಮುಖ ತೋರಿಸದೆ ಫೇಮಸ್ ಆದ ಕಲ್ಕಿಯ ಈ ಕೃಷ್ಣ ಯಾರು ಗೊತ್ತಾ…? ಹೆಚ್ಚಾದ ಅಭಿಮಾನಿಗಳು.

ಮುಖ ತೋರಿಸದೆ ಫೇಮಸ್ ಆದ ಕಲ್ಕಿಯ ಈ ಕೃಷ್ಣ ಯಾರು ಗೊತ್ತಾ...?

Krishna Role In Kalki 2898 AD Movie: ಟಾಲಿವುಡ್ ನ ಸ್ಟಾರ್ ನಟ ಪ್ರಭಾಸ್ ನಟನೆಯ ಕಲ್ಕಿ ಸಿನಿಮಾ ಬಿಡುಗಡೆಗೊಂಡಿದ್ದು, ಭರ್ಜರಿ ರೆಸ್ಪೋಸ್ ಪಡೆಯುತ್ತಿದೆ. ನಟ ಪ್ರಭಾಸ ನಟನೆಯ ಪ್ರತಿ ಸಿನಿಯಂ ಕೂಡ ಅಭಿಮಾನಿಗಳಲ್ಲಿ ಬೇರೆ ಬೇರೆ ರೀತಿಯ ಕ್ರೇಜ್ ಹುಟ್ಟಿಸುತ್ತದೆ. ಇದೀಗ ಜೂನ್ 27 ರಂದು ಬಿಡುಗಡೆಗೊಂಡ ಕಲ್ಕಿ ಸಿನಿಮಾ ಸದ್ಯ ಭಾರತೀಯ ಚಿತ್ರರಂಗದಲ್ಲಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ.

ಇನ್ನು ಕಲ್ಕಿ ಸಿನಿಮಾದಲ್ಲಿ ತೋರಿಸಿರುವ ಕುರುಕ್ಷೇತ್ರದ ದೃಶ್ಯಗಳು ಭಾರೀ ಪ್ರಶಂಸೆಗೆ ಪಾತ್ರವಾಗಿವೆ. ಆದರೆ ಆ ದೃಶ್ಯಗಳಲ್ಲಿ ಕೃಷ್ಣನ ಮುಖ ಯಾಕೆ ತೋರಿಸಿಲ್ಲ ಎಂಬ ಚರ್ಚೆ ಶುರುವಾಗಿದೆ. ಜತೆಗೆ ಮುಖ ತೋರಿಸದಿದ್ದರೂ ಗಮನ ಸೆಳೆದಿರುವ ಆ ಕೃಷ್ಣ ಪಾತ್ರಧಾರಿ ಯಾರು ಎಂಬ ಹುಡುಕಾಟವೂ ಶುರುವಾಗಿದೆ. ನಾವೀಗ ಈ ಲೇಖನದಲ್ಲಿ ಕಲ್ಕಿ ಚಿತ್ರದಲ್ಲಿನ ಕೃಷ್ಣನ ಪಾತ್ರದಾರಿಯ ಬಗ್ಗೆ ಮಾಹಿತಿ ನೀಡಲಿದ್ದೇವೆ.

Krishna Role In Kalki 2898 AD Movie
Image Credit: India Times

ಮುಖ ತೋರಿಸದಿದ್ದರು ಹೆಚ್ಚಾದ ಅಭಿಮಾನಿಗಳು
ಕಲ್ಕಿ 2898 AD ಚಿತ್ರ ನಿನ್ನೆಯಷ್ಟೇ ಬಿಡುಗಡೆಯಾಗಿದ್ದು, ಮೊದಲ ದಿನವೇ ಭರ್ಜರಿ ಕಲೆಕ್ಷನ್ ಮಾಡಿದೆ. ಕಲೆಕ್ಷನ್ ಮಾತ್ರವಲ್ಲದೆ ಕಂಟೆಂಟ್, ಮೇಕಿಂಗ್, ಕಲಾವಿದರ ನಟನೆ, ಕುರುಕ್ಷೇತ್ರ ಯುದ್ಧಗಳನ್ನು ತೋರಿಸಿದ ರೀತಿ ಎಲ್ಲವೂ ಮೆಚ್ಚುಗೆಗೆ ಪಾತ್ರವಾಗಿದೆ. ಅದರಲ್ಲಿಯೂ ನಾಗ್ ಅಶ್ವಿನ್ ಕುರುಕ್ಷೇತ್ರದ ದೃಶ್ಯಗಳನ್ನು ಕಟ್ಟಿಕೊಟ್ಟಿರುವ ರೀತಿಗೆ ಜನ ಬೆರಗಾಗಿದ್ದಾರೆ. ಕುರುಕ್ಷೇತ್ರದ ದೃಶ್ಯಗಳಲ್ಲಿ ಶ್ರೀಕೃಷ್ಣನ ಪಾತ್ರವು ಪ್ರಧಾನವಾಗಿ ಕೇಂದ್ರೀಕೃತವಾಗಿದೆ. ವಿಶೇಷವೆಂದರೆ ನಾಗ್ ಅಶ್ವಿನ್ ಅವರು ಕಲ್ಕಿ ಚಿತ್ರದ ದೃಶ್ಯಗಳಲ್ಲಿ ಎಲ್ಲರ ಮುಖ ತೋರಿಸಿದ್ದಾರೆ. ಆದರೆ ಕೃಷ್ಣನ ಪಾತ್ರದಾರಿ ಮುಖ ಪಾತ್ರ ತೋರಿಸಿಲ್ಲ. ಅಷ್ಟಕ್ಕೂ ಕೃಷ್ಣನ ಪಾತ್ರವು ಅವರ ದೈಹಿಕ ಅಭಿನಯ, ಅವರ ಧ್ವನಿಯ ಏರಿಳಿತಗಳು, ಅವರ ದೇಹದ ಕಠಿಣತೆ ಮತ್ತು ಅವರ ಭಂಗಿಯಿಂದ ಗಮನ ಸೆಳೆದಿದೆ.

Kalki 2898 AD Movie
Image Credit: 123telugu

ಮುಖ ತೋರಿಸದೆ ಫೇಮಸ್ ಆದ ಕಲ್ಕಿಯ ಈ ಕೃಷ್ಣ ಯಾರು ಗೊತ್ತಾ…?
ಕೃಷ್ಣನ ಪಾತ್ರದಲ್ಲಿ ಯುವ ನಟ ಕೃಷ್ಣಕುಮಾರ್ ನಟಿಸಿದ್ದಾರೆ. ಹೌದು, ಕೃಷ್ಣನ ಪಾತ್ರ ನಿರ್ವಹಿಸುತ್ತಿರುವ ನಟನ ಹೆಸರೂ ಕೃಷ್ಣ. ತಮಿಳಿನ ಸೂಪರ್ ಹಿಟ್ ಸಿನಿಮಾ ‘ಸುರರೈ ಪೊಟ್ರು’ ಚಿತ್ರದಲ್ಲಿ ಸೂರ್ಯ ಸ್ನೇಹಿತನ ಪಾತ್ರದಲ್ಲಿ ತಮಿಳು ಮೂಲದ ನಟ ಕೃಷ್ಣ ಕುಮಾರ್ ನಟಿಸಿದ್ದರು. ಧನುಷ್ ಅಭಿನಯದ ‘ಮಾರನ್’ ಸಿನಿಮಾದಲ್ಲಿ ಕೃಷ್ಣ ಕುಮಾರ್ ಕೂಡ ಧನುಷ್ ಆಪ್ತ ಸ್ನೇಹಿತನ ಪಾತ್ರದಲ್ಲಿ ನಟಿಸಿದ್ದರು. ಇವರಲ್ಲದೆ ಕೃಷ್ಣ ಕುಮಾರ್ ತಮಿಳು ರಂಗಭೂಮಿಯಲ್ಲೂ ಕೆಲಸ ಮಾಡಿದ್ದಾರೆ. ಕೆಲವು ನಾಟಕಗಳನ್ನೂ ನಿರ್ದೇಶಿಸಿದ್ದಾರೆ.

ಕೆಲ ದಿನಗಳ ಹಿಂದೆ ‘ಕಲ್ಕಿ’ ಸಿನಿಮಾದಲ್ಲಿ ಕೃಷ್ಣನ ಪಾತ್ರ ಮಾಡಿದ್ದು, ಇಷ್ಟು ದೊಡ್ಡ ಪಾತ್ರ ಮಾಡುವ ಅವಕಾಶ ಸಿಕ್ಕಿರುವುದಕ್ಕೆ ಖುಷಿಯಾಗುತ್ತಿದೆ ಎಂದು ಕೃಷ್ಣ ಕುಮಾರ್ ಹೇಳಿದ್ದರು. ಸಿನಿಮಾದಲ್ಲಿ ಅವರ ಮುಖ ಕಾಣಿಸದಿದ್ದರೂ, ತಮ್ಮ ದೈಹಿಕ ಅಭಿನಯ, ನಿಲ್ಲುವ ಹಾಗೂ ನಡೆಯುವ ರೀತಿಯಿಂದ ಕೃಷ್ಣ ಕುಮಾರ್ ಗಮನ ಸೆಳೆದಿದ್ದಾರೆ. ಕೃಷ್ಣ ಅವರ ಧ್ವನಿಯೂ ಅದ್ಭುತವಾಗಿದೆ ಆದರೆ ಜನಪ್ರಿಯ ಡಬ್ಬಿಂಗ್ ಕಲಾವಿದ ಅರ್ಜುನ್ ದಾಸ್ ಅವರು ಕೃಷ್ಣ ಪಾತ್ರಕ್ಕೆ ದ್ವನಿಯನ್ನು ನೀಡಿದ್ದಾರೆ. ‘ವಿಕ್ರಮ್’ ಚಿತ್ರದಲ್ಲಿ ಸೂರ್ಯ ಅವರ ರೋಲೆಕ್ಸ್ ಪಾತ್ರವನ್ನು ಕೂಡ ಅರ್ಜುನ್ ದಾಸ್ ತೆಲುಗಿಗೆ ಡಬ್ ಮಾಡಿದ್ದಾರೆ. ಸದ್ಯ ಕಲ್ಕಿ ಸಿನಿಮಾದಲ್ಲಿ ಕೃಷ್ಣನ ಪಾತ್ರಕ್ಕೆ ಮೆಚ್ಚುಗೆ ವ್ಯಾಕವಾಗಿ ಸಿಗುತ್ತಿದೆ ಎನ್ನಬಹುದು.

Join Nadunudi News WhatsApp Group

Krishna Role In Kalki Movie
Image Credit: Mashable

Join Nadunudi News WhatsApp Group